Daily Horoscope: ಈ ದಿನ ಸಾಲಾಗಿ ತೊಂದರೆಗಳು ಬರಲಿದೆ, ತಪ್ಪಿಸಿಕೊಳ್ಳೋದು ಸುಲಭ ಅಲ್ಲ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

  • 112

    Daily Horoscope: ಈ ದಿನ ಸಾಲಾಗಿ ತೊಂದರೆಗಳು ಬರಲಿದೆ, ತಪ್ಪಿಸಿಕೊಳ್ಳೋದು ಸುಲಭ ಅಲ್ಲ

    ಮೇಷ: ನಿಮ್ಮ ಭಾವನೆಗಳನ್ನು ಚೆನ್ನಾಗಿ ಹೇಳಿಕೊಳ್ಳಿ. ಯಾವುದೇ ಗೊಂದಲ ಇರದೇ ಇದ್ದರೆ ಉತ್ತಮ. ಈ ಸ್ಪಷ್ಟತೆಯ ಕೊರತೆಯಿಂದಾಗಿ, ನಿಮ್ಮ ಕೆಲಸವನ್ನು ಜನ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ ಮತ್ತು ಆ ಕೆಲಸ ವಿಳಂಬವಾಗುತ್ತದೆ. ದೂರದ ಸ್ಥಳದಲ್ಲಿ ವಾಸಿಸುವ ಗೆಳೆಯರ ನೆನಪು ನಿಮಗೆ ಕಾಡಬಹುದು. ಅದೃಷ್ಟದ ಚಿಹ್ನೆ - ಗುಬ್ಬಚ್ಚಿ

    MORE
    GALLERIES

  • 212

    Daily Horoscope: ಈ ದಿನ ಸಾಲಾಗಿ ತೊಂದರೆಗಳು ಬರಲಿದೆ, ತಪ್ಪಿಸಿಕೊಳ್ಳೋದು ಸುಲಭ ಅಲ್ಲ

    ವೃಷಭ: ಹಣಕಾಸಿನ ಲಾಭದ ಹುಡುಕಾಟದಲ್ಲಿ ನೀವು ಸಾಮಾನ್ಯವಾಗಿ ಜೀವನದಲ್ಲಿ ಬೇರೆ ಯಾವುದೋ ಕಡೆಗೆ ಆಕರ್ಷಿತರಾಗಬಹುದು. ಸಾಧ್ಯವಾದಷ್ಟು ಇದರಿಂದ ದೂರವಿರಲು ಪ್ರಯತ್ನಿಸಿ. ಈಗ ನಿಮ್ಮ ಜೀವನದಲ್ಲಿ ಸಂಪೂರ್ಣ ಹೊಸ ಘಟನೆಗಳ ಪ್ರಾರಂಭವಾಗಿದ್ದು, ಸವಾಲಿನ ಕೆಲಸಗಳು ಹೆಚ್ಚಾಗಲಿದೆ. ಅದೃಷ್ಟದ ಚಿಹ್ನೆ - ಬಾತುಕೋಳಿ

    MORE
    GALLERIES

  • 312

    Daily Horoscope: ಈ ದಿನ ಸಾಲಾಗಿ ತೊಂದರೆಗಳು ಬರಲಿದೆ, ತಪ್ಪಿಸಿಕೊಳ್ಳೋದು ಸುಲಭ ಅಲ್ಲ

    ಮಿಥುನ: ಹಿರಿಯ ಅಧಿಕಾರಿಗಳು ನಿಮ್ಮ ಮೇಲೆ ಕಣ್ಣಿಟ್ಟಿರುವ ಕಾರಣ ನಿಮ್ಮ ಕಡೆಯಿಂದ ಯಾವುದೇ ಬಾಕಿ ಉಳಿದಿರುವ ಕೆಲಸವಿದ್ದರೆ ಅದನ್ನು ಈಗ ಮುಗಿಸಿ. ಯಾವುದೇ ಪ್ರಯತ್ನದ ಕೊರತೆ ಸಾಬೀತಾದರೆ ಮುಂಬರುವ ವರ್ಷದಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಅದೃಷ್ಟದ ಚಿಹ್ನೆ - ಅರಳಿ ಮರ

    MORE
    GALLERIES

  • 412

    Daily Horoscope: ಈ ದಿನ ಸಾಲಾಗಿ ತೊಂದರೆಗಳು ಬರಲಿದೆ, ತಪ್ಪಿಸಿಕೊಳ್ಳೋದು ಸುಲಭ ಅಲ್ಲ

    ಕಟಕ: ನೀವು ಇತ್ತೀಚೆಗೆ ಹೊಸ ವ್ಯಕ್ತಿಯನ್ನು ಭೇಟಿ ಮಾಡಿದ್ದು, ಅವರ ನೆನಪು ನಿಮಗೆ ಬಹಳ ಕಾಡುತ್ತಿದೆ. ಅವರ ಜೊತೆ ಸಮಯ ಕಳೆಯುವ ಮನಸ್ಸಾಗಿದೆ ಎಂದರೆ ತಪ್ಪಲ್ಲ. ಹಳೆಯ ಉತ್ತಮ ನೆನಪುಗಳನ್ನು ಮೆಲುಕು ಹಾಕುವ ದಿನವೂ ಹೌದು. ಸ್ನೇಹಿತರ ಜೊತೆಗಿನ ಪ್ಲ್ಯಾನ್ ನಿಮ್ಮ ಮೂಡ್ ಬದಲಿಸುತ್ತದೆ. ಅದೃಷ್ಟದ ಚಿಹ್ನೆ - ಮಣ್ಣಿನ ಬಟ್ಟಲು

    MORE
    GALLERIES

  • 512

    Daily Horoscope: ಈ ದಿನ ಸಾಲಾಗಿ ತೊಂದರೆಗಳು ಬರಲಿದೆ, ತಪ್ಪಿಸಿಕೊಳ್ಳೋದು ಸುಲಭ ಅಲ್ಲ

    ಸಿಂಹ: ಬೇರೆಯವರ ಮೇಲೆ ನಿರೀಕ್ಷೆ ಇಟ್ಟುಕೊಂಡರೆ ನಿಮಗೆ ಬೇಸರವಾಗುತ್ತದೆ. ಅದರ ಬದಲು ನಿಮ್ಮ ಮೇಲೆ ನಂಬಿಕೆ ಇರಲಿ. ನೀವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ನಿಮಗಿದೆ. ಆದರೆ ಅದನ್ನು ಮತ್ತೊಮ್ಮೆ ಸಾಬೀತುಪಡಿಸಲು ನಿಮಗೆ ಪ್ರೇರಣೆ ಬೇಕು. ಹೊಸ ಕೆಲಸದ ಅವಕಾಶ ಶೀಘ್ರದಲ್ಲೇ ಬರಲಿದೆ. ಅದೃಷ್ಟದ ಚಿಹ್ನೆ - ಬಾಟಲಿ

    MORE
    GALLERIES

  • 612

    Daily Horoscope: ಈ ದಿನ ಸಾಲಾಗಿ ತೊಂದರೆಗಳು ಬರಲಿದೆ, ತಪ್ಪಿಸಿಕೊಳ್ಳೋದು ಸುಲಭ ಅಲ್ಲ

    ಕನ್ಯಾ: ಇಂದು ಸುಮ್ಮನೆ ಕುಳಿತು ಎಂಜಾಯ್ ಮಾಡುವ ದಿನವಾಗಿದೆ, ಆರ್ಥಿಕವಾಗಿ ಇದ್ದ ಸಮಸ್ಯೆಗಳು ನಿವಾರಣೆ ಆಗುತ್ತದೆ. ನಿಮ್ಮ ಆರೋಗ್ಯವನ್ನು ನೋಡಿಕೊಂಡರೆ ನಿಮಗೇ ಉತ್ತಮ ಎಂಬುದನ್ನ ಮರೆಯಬೇಡಿ. ಅದೃಷ್ಟ ಚಿಹ್ನೆ – ಮ್ಯೂಸಿಯಂ

    MORE
    GALLERIES

  • 712

    Daily Horoscope: ಈ ದಿನ ಸಾಲಾಗಿ ತೊಂದರೆಗಳು ಬರಲಿದೆ, ತಪ್ಪಿಸಿಕೊಳ್ಳೋದು ಸುಲಭ ಅಲ್ಲ

    ತುಲಾ: ನೀವು ಹಿಂದೆ ಏನು ಮಾಡಿದ್ದೀರಿ ಎಂಬುದರ ಲೆಕ್ಕಾಚಾರವನ್ನು ನೀವು ಯಾವಾಗಲೂ ಹೊಂದಿರಬೇಕು. ನಿಮ್ಮ ತಪ್ಪುಗಳು ಮತ್ತೊಬ್ಬರಿಗೆ ಸಮಸ್ಯೆ ಆಗಬಾರದು. ನ್ಯಾಯಲಯದ ಪ್ರಕರಣಗಳಲ್ಲಿ ಗೆಲುವು ನಿಮ್ಮದಾಗುತ್ತದೆ. . ಶಾಲೆಗೆ ಹೋಗುವ ಮಕ್ಕಳು ಮತ್ತು ಶಿಕ್ಷಕರಿಗೆ ಇದು ಉತ್ತಮ ದಿನವಾಗಿದೆ. ಅದೃಷ್ಟದ ಚಿಹ್ನೆ - ಸ್ಫಟಿಕ

    MORE
    GALLERIES

  • 812

    Daily Horoscope: ಈ ದಿನ ಸಾಲಾಗಿ ತೊಂದರೆಗಳು ಬರಲಿದೆ, ತಪ್ಪಿಸಿಕೊಳ್ಳೋದು ಸುಲಭ ಅಲ್ಲ

    ವೃಶ್ಚಿಕ: ಇಂದು ನಿಮಗೆ ಬಹಳ ಅದೃಷ್ಟದ ದಿನ ಎಂದರೆ ತಪ್ಪಲ್ಲ. ಈ ದಿನ ನಿಮ್ಮ ಸೋಮಾರಿತನ ಬಿಟ್ಟು ಕೆಲಸ ಮಾಡಿದರೆ ಬಹಳ ಉತ್ತಮ. ಹಾಗೆಯೇ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ಅವಶ್ಯಕ. ಕೇವಲ ಕೆಲಸಗಳನ್ನು ಮುಂದೂಡಬೇಡಿ. ಅದೃಷ್ಟದ ಚಿಹ್ನೆ - ಸ್ಫಟಿಕ ಗಾಜು

    MORE
    GALLERIES

  • 912

    Daily Horoscope: ಈ ದಿನ ಸಾಲಾಗಿ ತೊಂದರೆಗಳು ಬರಲಿದೆ, ತಪ್ಪಿಸಿಕೊಳ್ಳೋದು ಸುಲಭ ಅಲ್ಲ

    ಧನುಸ್ಸು: ಇಂದು ನೀವು ಸ್ವಲ್ಪ ಮಾನಸಿಕವಾಗಿ ಒತ್ತಡವನ್ನು ಅನುಭವಿಸಬಹುದು, ಒಂದೇ ಸಮಯದಲ್ಲಿ ಹಲವಾರು ಸಮಸ್ಯೆಗಳು ಬರುವುದರಿಂದ ಸ್ವಲ್ಪ ತಾಳ್ಮೆ ಅಗತ್ಯ. ಪೋಷಕರಿಗೆ ಇದೀಗ ನೀವು ಹೆಚ್ಚಿನ ಸಮಯ ಕೊಡಬೇಕು. ಅದೃಷ್ಟದ ಚಿಹ್ನೆ - ಮರ

    MORE
    GALLERIES

  • 1012

    Daily Horoscope: ಈ ದಿನ ಸಾಲಾಗಿ ತೊಂದರೆಗಳು ಬರಲಿದೆ, ತಪ್ಪಿಸಿಕೊಳ್ಳೋದು ಸುಲಭ ಅಲ್ಲ

    ಮಕರ: ನಿಮ್ಮ ಪ್ರಾರ್ಥನೆಗಳಿಗೆ ಉತ್ತರ ಸಿಗುತ್ತಿದೆ ಆದರೆ ನಿಧಾನವಾಗಿ ಅಷ್ಟೇ. ಪ್ರತಿ ಸಣ್ಣ ಅವಘಡಕ್ಕೂ, ನೀವು ಇನ್ನೊಬ್ಬ ವ್ಯಕ್ತಿಯನ್ನು ದೂಷಿಸುವ ಅಗತ್ಯವಿಲ್ಲ. ನಿಮ್ಮ ಭಾವನೆಗಳನ್ನು ಹೆಚ್ಚು ಕಂಟ್ರೋಲ್ ಮಾಡಬೇಡಿ. ಅದೃಷ್ಟದ ಚಿಹ್ನೆ - ಆಲದ ಮರ

    MORE
    GALLERIES

  • 1112

    Daily Horoscope: ಈ ದಿನ ಸಾಲಾಗಿ ತೊಂದರೆಗಳು ಬರಲಿದೆ, ತಪ್ಪಿಸಿಕೊಳ್ಳೋದು ಸುಲಭ ಅಲ್ಲ

    ಕುಂಭ: ನಿಮ್ಮಲ್ಲಿ ಸಹ ಕೊರತೆ ಇರಲಿದೆ ಎಂಬುದನ್ನು ಮರೆಯಬೇಡಿ. ಆದರೆ ನೀವು ಶಕ್ತಿಶಾಲಿ ಎಂಬುದು ಸಹ ಈ ದಿನ ಮುಖ್ಯವಾಗುತ್ತದೆ. ಬದುಕಿನಲ್ಲಿ ಹೊಸ ದಾರಿಯೊಂದು ನಿಮಗಾಗಿ ಕಾದಿದೆ. ಅದೃಷ್ಟದ ಚಿಹ್ನೆ - ಕನ್ನಡಕ

    MORE
    GALLERIES

  • 1212

    Daily Horoscope: ಈ ದಿನ ಸಾಲಾಗಿ ತೊಂದರೆಗಳು ಬರಲಿದೆ, ತಪ್ಪಿಸಿಕೊಳ್ಳೋದು ಸುಲಭ ಅಲ್ಲ

    ಮೀನ: ಬೆಳಗ್ಗೆ ಸ್ವಲ್ಪ ಆತಂಕ ಹೆಚ್ಚಾಗಬಹುದು. ಆದರೆ ಸ್ವಲ್ಪ ಸಮಯದ ನಂತರ ನಿರಾಳವಾಗುತ್ತದೆ. ನೀವು ಸ್ನೇಹಿತರೊಂದಿಗೆ ಕೆಲವು ಸಮಯ ಕಳೆದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕೆಲವು ಬಾಕಿ ಉಳಿದಿರುವ ಕೆಲಸಗಳ ಹೊರತಾಗಿಯೂ ನೀವು ನಿಮಗಾಗಿ ಸಮಯ ಮೀಸಲಿಡಿ. ಅದೃಷ್ಟದ ಚಿಹ್ನೆ - ಕನ್ನಡಿ

    MORE
    GALLERIES