Daily Horoscope: ಹೊಸ ಯೋಜನೆ ಸ್ಟಾರ್ಟ್​ ಮಾಡೋಕೆ ಇದು ಬೆಸ್ಟ್​ ಟೈಮ್, ಈ ರಾಶಿಗೆ ಅದೃಷ್ಟ ಹೆಚ್ಚಾಗಲಿದೆ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

  • 112

    Daily Horoscope: ಹೊಸ ಯೋಜನೆ ಸ್ಟಾರ್ಟ್​ ಮಾಡೋಕೆ ಇದು ಬೆಸ್ಟ್​ ಟೈಮ್, ಈ ರಾಶಿಗೆ ಅದೃಷ್ಟ ಹೆಚ್ಚಾಗಲಿದೆ

    ಮೇಷ ರಾಶಿ: ಹೊಸ ಪ್ರಾಜೆಕ್ಟ್, ಸಾಹಸೋದ್ಯಮ, ಹೊಸ ಹುದ್ದೆ, ಏನೇ ಇರಲಿ, ನೀವು ಹೊಸದಾಗಿ ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದರೆ ಇದು ತುಂಬಾ ಒಳ್ಳೆಯ ಸಮಯ. ಒಳ ಮತ್ತು ಹೊರಗಿನ ಸರಿಯಾದ ಮಾಹಿತಿ ತಿಳಿದ ನಂತರ ಒಳ್ಳೆಯ ಯೋಜನೆಯೊಂದಿಗೆ ಪ್ರಾರಂಭಿಸಿ. ಇದು ನೀವು ಯೋಚಿಸುವುದಕ್ಕಿಂತ ಹೆಚ್ಚು ಲಾಭ ಕೊಡಬಹುದು. ಅದೃಷ್ಟದ ಚಿಹ್ನೆ – ಸೇಬು

    MORE
    GALLERIES

  • 212

    Daily Horoscope: ಹೊಸ ಯೋಜನೆ ಸ್ಟಾರ್ಟ್​ ಮಾಡೋಕೆ ಇದು ಬೆಸ್ಟ್​ ಟೈಮ್, ಈ ರಾಶಿಗೆ ಅದೃಷ್ಟ ಹೆಚ್ಚಾಗಲಿದೆ

    ವೃಷಭ: ಮಾಡುವ ಕೆಲಸದಲ್ಲಿ ಮೂಲಭೂತ ವಿಷಯಗಳ ಮೇಲೆ ಹಿಡಿತವಿರುವುದು ತುಂಬಾ ಒಳ್ಳೆಯದು. ನಿಮ್ಮ ಪ್ರಯತ್ನಗಳಲ್ಲಿ ಪ್ರಗತಿ ಇರುತ್ತದೆ. ಆಲೋಚನೆಗಳಲ್ಲಿ ಸ್ಪಷ್ಟತೆ ಬರುತ್ತದೆ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳದೆ ಕಾಲಹರಣ ಮಾಡಬೇಡಿ. ಅದೃಷ್ಟದ ಚಿಹ್ನೆ – ಮೇಣದಬತ್ತಿ

    MORE
    GALLERIES

  • 312

    Daily Horoscope: ಹೊಸ ಯೋಜನೆ ಸ್ಟಾರ್ಟ್​ ಮಾಡೋಕೆ ಇದು ಬೆಸ್ಟ್​ ಟೈಮ್, ಈ ರಾಶಿಗೆ ಅದೃಷ್ಟ ಹೆಚ್ಚಾಗಲಿದೆ

    ಮಿಥುನ: ಯಾವುದೇ ವಿಚಾರದಲ್ಲಿ ಸಂಗಾತಿ ಸಲಹೆ ಬೇಕಿದ್ದರೆ ಕೇಳಲು ಇದೇ ಸೂಕ್ತ ಸಮಯ. ಎಲ್ಲವನ್ನೂ ಆಳವಾಗಿ ವಿಶ್ಲೇಷಿಸಿ ಮುಂದಿನ ನಿರ್ಧಾರ ಮಾಡಿ. ಯಾವುದೇ ಕೆಲಸಕ್ಕೆ ಸಂಬಂಧಪಟ್ಟ ನಿಮ್ಮ ಯೋಜನೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅನಗತ್ಯ ಒತ್ತಡಕ್ಕೆ ಒಳಗಾಗಬೇಡಿ. ಅದೃಷ್ಟ ಚಿಹ್ನೆ – ರತ್ನ

    MORE
    GALLERIES

  • 412

    Daily Horoscope: ಹೊಸ ಯೋಜನೆ ಸ್ಟಾರ್ಟ್​ ಮಾಡೋಕೆ ಇದು ಬೆಸ್ಟ್​ ಟೈಮ್, ಈ ರಾಶಿಗೆ ಅದೃಷ್ಟ ಹೆಚ್ಚಾಗಲಿದೆ

    ಕಟಕ: ಸ್ನೇಹಿತರು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಕೆಲವು ಜನರು ಕೆಲವು ವಿಷಯಗಳ ಮೇಲೆ ಹೆಚ್ಚು ಭಾವನಾತ್ಮಕವಾಗಿ ಅವಲಂಬಿತರಾಗಿರುತ್ತಾರೆ. ಹೊಸದಾಗಿ ಭೇಟಿಯಾದ ವ್ಯಕ್ತಿಗಳು ಹೆಚ್ಚು ವಿಶ್ವಾಸಾರ್ಹ ವ್ಯಕ್ತಿಗಳಲ್ಲ. ನೀವು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಅದೃಷ್ಟದ ಚಿಹ್ನೆ - ಹಳದಿ ಕಲ್ಲು.

    MORE
    GALLERIES

  • 512

    Daily Horoscope: ಹೊಸ ಯೋಜನೆ ಸ್ಟಾರ್ಟ್​ ಮಾಡೋಕೆ ಇದು ಬೆಸ್ಟ್​ ಟೈಮ್, ಈ ರಾಶಿಗೆ ಅದೃಷ್ಟ ಹೆಚ್ಚಾಗಲಿದೆ

    ಸಿಂಹ: ನೀವು ಸ್ವಲ್ಪ ಸಮಯದಿಂದ ಭೇಟಿಯಾಗದ ವ್ಯಕ್ತಿಯಿಂದ ಆಹ್ವಾನ ಬರುತ್ತದೆ. ಕೆಲವರು ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಬಹುದು. ಐಷಾರಾಮಿ ವಸ್ತುಗಳನ್ನು ಖರೀದಿಸುವ ದಿನ. ವಿದೇಶಿ ಪ್ರವಾಸಗಳ ಪ್ಲ್ಯಾನ್ ಮಾಡಿ. ಅದೃಷ್ಟದ ಚಿಹ್ನೆ – ಮೇಣದಬತ್ತಿ ಸ್ಟ್ಯಾಂಡ್

    MORE
    GALLERIES

  • 612

    Daily Horoscope: ಹೊಸ ಯೋಜನೆ ಸ್ಟಾರ್ಟ್​ ಮಾಡೋಕೆ ಇದು ಬೆಸ್ಟ್​ ಟೈಮ್, ಈ ರಾಶಿಗೆ ಅದೃಷ್ಟ ಹೆಚ್ಚಾಗಲಿದೆ

    ಕನ್ಯಾ: ನೀವು ನಿಮ್ಮ ಸಂಗಾತಿಯಿಂದ ಪರಸ್ಪರ ದೂರವಿದ್ದರೆ ಇದು ಬಹಳ ನಿಮ್ಮನ್ನ ಕಾಡುತ್ತಾರೆ. ನಿಮ್ಮಿಬ್ಬರಿಗೂ ಒಬ್ಬರಿಗೊಬ್ಬರ ಮೇಲೆ ತುಂಬಾ ಪ್ರೀತಿ ಇದೆ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಜಾಗರೂಕರಾಗಿರುವುದು ಉತ್ತಮ. ಅದೃಷ್ಟದ ಚಿಹ್ನೆ - ಬುದ್ಧನ ಪ್ರತಿಮೆ.

    MORE
    GALLERIES

  • 712

    Daily Horoscope: ಹೊಸ ಯೋಜನೆ ಸ್ಟಾರ್ಟ್​ ಮಾಡೋಕೆ ಇದು ಬೆಸ್ಟ್​ ಟೈಮ್, ಈ ರಾಶಿಗೆ ಅದೃಷ್ಟ ಹೆಚ್ಚಾಗಲಿದೆ

    ತುಲಾ: ನಿಮ್ಮಲ್ಲಿ ನಾಯಕತ್ವ ಗುಣಗಳು ಹೆಚ್ಚಾಗುತ್ತವೆ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯುತ್ತದೆ. ನಿಮ್ಮ ಸುತ್ತಲಿನ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೂ ಸಹ ಗಮನ ಹರಿಸುವುದು ಒಳ್ಳೆಯದು. ಒಳ್ಳೆಯ ಮನ್ನಣೆ ಸಿಗಲಿದೆ. ಕೆಲವರು ದೂರದಿಂದ ನಿಮ್ಮನ್ನು ಮೆಚ್ಚುತ್ತಾರೆ. ಅದೃಷ್ಟದ ಚಿಹ್ನೆ - ಒಳಾಂಗಣ ಸಸ್ಯ.

    MORE
    GALLERIES

  • 812

    Daily Horoscope: ಹೊಸ ಯೋಜನೆ ಸ್ಟಾರ್ಟ್​ ಮಾಡೋಕೆ ಇದು ಬೆಸ್ಟ್​ ಟೈಮ್, ಈ ರಾಶಿಗೆ ಅದೃಷ್ಟ ಹೆಚ್ಚಾಗಲಿದೆ

    ವೃಶ್ಚಿಕ: ಈ ಹಿಂದೆ ನಿಮ್ಮ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು ಈಗ ನಿಮ್ಮ ಪರವಾಗಿ ನಿಲ್ಲುತ್ತಾರೆ. ಯಾವುದೇ ಯೋಜನೆ ಅಥವಾ ಕೆಲಸದ ವಿಚಾರಕ್ಕೆ ಬಂದಾಗ, ನೀವು ಮತ್ತು ನಿಮ್ಮ ಸಹೋದ್ಯೋಗಿಗಳು ವಿಭಿನ್ನ ಆಲೋಚನೆಗಳನ್ನು ಹೊಂದಿರುತ್ತೀರಿ. ಹಣಕಾಸಿನ ವಿಷಯಗಳಲ್ಲಿ ಇದು ಪ್ರಯೋಜನಕಾರಿಯಾಗಲಿದೆ. ಅದೃಷ್ಟ ಚಿಹ್ನೆ – ಚೇಂಬರ್

    MORE
    GALLERIES

  • 912

    Daily Horoscope: ಹೊಸ ಯೋಜನೆ ಸ್ಟಾರ್ಟ್​ ಮಾಡೋಕೆ ಇದು ಬೆಸ್ಟ್​ ಟೈಮ್, ಈ ರಾಶಿಗೆ ಅದೃಷ್ಟ ಹೆಚ್ಚಾಗಲಿದೆ

    ಧನಸ್ಸು ರಾಶಿ: ಸೀಮಿತ ಸಮಯದಲ್ಲಿ ನಿಮ್ಮ ಮಾನಸಿಕ ಸಾಮರ್ಥ್ಯ ಮತ್ತು ಚುರುಕುತನಕ್ಕಾಗಿ ನೀವು ಮೆಚ್ಚುಗೆ ಪಡೆಯುತ್ತೀರಿ. ನೀವು ಹೊಸ ವ್ಯವಹಾರದ ಬಗ್ಗೆ ಯೋಚಿಸುತ್ತಿದ್ದರೆ, ಈಗ ಉತ್ತಮ ಸಮಯ. ಪಾಲುದಾರಿಕೆಯಲ್ಲಿ ಮಾಡುವುದು ಉತ್ತಮ. ಅದೃಷ್ಟದ ಚಿಹ್ನೆ: ಉಂಗುರ

    MORE
    GALLERIES

  • 1012

    Daily Horoscope: ಹೊಸ ಯೋಜನೆ ಸ್ಟಾರ್ಟ್​ ಮಾಡೋಕೆ ಇದು ಬೆಸ್ಟ್​ ಟೈಮ್, ಈ ರಾಶಿಗೆ ಅದೃಷ್ಟ ಹೆಚ್ಚಾಗಲಿದೆ

    ಮಕರ: ಇಂದು ಮಿಶ್ರ ಫಲ ನಿಮಗೆ ಸಿಗಲಿದೆ. ಒಂದು ಸವಾಲು ನಿಮಗೆ ಎದುರಾಗುತ್ತದೆ. ನೀವು ತುಂಬಾ ನಂಬಿಕೆಗಳಿಸುವ ದಿನ ಇದು. ಹಾಗೆಯೇ ಪಾಲುದಾರರ ಮೇಲೆ ನಿಮ್ಮ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೀರಿ. ಅದೃಷ್ಟದ ಚಿಹ್ನೆ - ಚಿಟ್ಟೆ.

    MORE
    GALLERIES

  • 1112

    Daily Horoscope: ಹೊಸ ಯೋಜನೆ ಸ್ಟಾರ್ಟ್​ ಮಾಡೋಕೆ ಇದು ಬೆಸ್ಟ್​ ಟೈಮ್, ಈ ರಾಶಿಗೆ ಅದೃಷ್ಟ ಹೆಚ್ಚಾಗಲಿದೆ

    ಕುಂಭ: ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ನೀವು ಇಂದು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು, ಆದರೆ ಈ ಕೆಲಸಗಳು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ನಿನ್ನ ಕೈಲಾದಷ್ಟು ಮಾಡಿ. ಸ್ವಲ್ಪ ವಿಶ್ರಾಂತಿ ಬೇಕು. ಸಂಗಾತಿಯ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಅದೃಷ್ಟದ ಚಿಹ್ನೆ- ಕ್ಯಾನ್ವಾಸ್.

    MORE
    GALLERIES

  • 1212

    Daily Horoscope: ಹೊಸ ಯೋಜನೆ ಸ್ಟಾರ್ಟ್​ ಮಾಡೋಕೆ ಇದು ಬೆಸ್ಟ್​ ಟೈಮ್, ಈ ರಾಶಿಗೆ ಅದೃಷ್ಟ ಹೆಚ್ಚಾಗಲಿದೆ

    ಮೀನ: ನೀವು ಹಿಂದೆ ತಪ್ಪು ಮಾಡಿದ್ದಕ್ಕಾಗಿ ಅಪರಾಧಿ ಭಾವನೆ ಹೊಂದಿದ್ದೀರಿ. ನಿಮ್ಮ ಸಂಗಾತಿ ಕೂಡ ನಿಮ್ಮೊಂದಿಗೆ ಅದೇ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಹಿಂದಿನದನ್ನು ಸರಿಪಡಿಸಲು ಈಗ ಅವಕಾಶವಿದೆ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳಿ. ಅದೃಷ್ಟದ ಚಿಹ್ನೆ - ಗರಿಗಳು

    MORE
    GALLERIES