Daily Horoscope: ಹೊಸ ಅವಕಾಶವೊಂದು ಬಾಗಿಲು ತಟ್ಟಲಿದೆ, ನೆಗ್ಲೆಕ್ಟ್ ಮಾಡ್ಲೇಬೇಡಿ!
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಹಳೆಯ ವೈಮನಸ್ಸನ್ನು ಹೋಗಲಾಡಿಸಲು ಇಂದು ಉತ್ತಮವಾದ ದಿನ. ಆತ್ಮೀಯ ಸ್ನೇಹಿತರಿಂದ ಬಂದ ಸುದ್ದಿಯು ನಿಮ್ಮನ್ನು ಹುರಿದುಂಬಿಸಬಹುದು. ನಿಮಗಾಗಿ ಸಮಯವನ್ನು ಮೀಸಲಿಡುವ ಅಗತ್ಯವಿದೆ. ಅದೃಷ್ಟದ ಚಿಹ್ನೆ – ಗಿಳಿ
2/ 12
ವೃಷಭ: ಇಂದು ನಿಮ್ಮ ಭಾವನೆಗಳನ್ನ ಹೊರಹಾಕಲು ಇಂದು ಸೂಕ್ತವಾದ ದಿನ. ನೀವು ಯಾರಿಗಾದರೂ ಪ್ರಾಮಿಸ್ ಮಾಡಿದ್ದರೆ ಅದನ್ನು ಇಂದು ಮುಗಿಸಿ. ಕಿರಿಕಿರಿ ಉಂಟಾಗುವ ಸಮಯ. ಆದರೆ ಅದು ತಾತ್ಕಾಲಿಕವಾಗಿದ್ದು, ತಾಳ್ಮೆ ಇರಲಿ. ಅದೃಷ್ಟದ ಚಿಹ್ನೆ - ಗರಿ
3/ 12
ಮಿಥುನ: ಬಾಕಿಯಿರುವ ಕೆಲಸ ಇಂದು ಪೂರ್ಣವಾಗುತ್ತದೆ. ಕೆಲ ಮುಖ್ಯವಾದ ವಿಚಾರಗಳು ಸ್ವಲ್ಪ ನಿಧಾನವಾಗಬಹುದು. ಕೆಲಸದಿಂದ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ. ಆದರೂ ಕೆಲಸದಲ್ಲಿ ಎಚ್ಚರದಿಂದಿರಿ. ಅದೃಷ್ಟದ ಚಿಹ್ನೆ: ಫೋಟೋ.
4/ 12
ಕಟಕ: ನಿಮ್ಮ ಯೋಜನೆಯ ಆರಂಭದಲ್ಲಿ ಕೆಲವು ಅಡಚಣೆಗಳು ಉಂಟಾಗುತ್ತದೆ. ಅನಿರೀಕ್ಷಿತ ಮೂಲಗಳಿಂದ ಬೆಂಬಲ ಬರಬಹುದು. ನಿಮ್ಮ ಆತಂಕ ಕಡಿಮೆ ಆಗುತ್ತದೆ. ಒಂದು ಬ್ರೇಕ್ ತೆಗೆದುಕೊಳ್ಳಿ. ಅದೃಷ್ಟದ ಚಿಹ್ನೆ – ಏಲಕ್ಕಿ
5/ 12
ಸಿಂಹ: ಯಾರಿಗೊ ಆದ ನಷ್ಟ ನಿಮಗೆ ಲಾಭ ನೀಡುತ್ತದೆ. ನಿಮ್ಮ ಹಳೆಯ ಮೋಡಿಯನ್ನು ಮರಳಿ ಪಡೆಯಬಹುದು. ಕೆಲವರ ಬೆಂಬಲದಿಂದ ನಿಮಗೆ ಸಹಾಯವಾಗುತ್ತದೆ. ನಿಮ್ಮ ಅಗತ್ಯಗಳ ಬಗ್ಗೆ ಗಮನಹರಿಸಿ. ಅದೃಷ್ಟದ ಚಿಹ್ನೆ – ಸೂರ್ಯಾಸ್ತ
6/ 12
ಕನ್ಯಾ: ಹಣಕಾಸಿನ ವಿಚಾರವಾಗಿ ಇಂದು ಲಾಭ ಜಾಸ್ತಿ ಆಗಲಿದೆ. ಕೆಲ ಕೆಲಸಗಳಿ ನಿಧಾನವಾಗಬಹುದು. ದೂರದಲ್ಲಿ ವಾಸಿಸುವ ಸ್ನೇಹಿತ ಮತ್ತೆ ಸಂಪರ್ಕಕ್ಕೆ ಬರಬಹುದು. ಶಾಂತವಾಗಿರುವುದು ಒಳ್ಳೆಯದು. ಅದೃಷ್ಟದ ಚಿಹ್ನೆ - ಬಿಳಿ ಹಲಗೆ
7/ 12
ತುಲಾ: ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಬರಬಹುದು. ಆದರೆ ಅದನ್ನು ಬಳಸಿಕೊಳ್ಳಲು ಜಾಸ್ತಿ ಸಮಯ ಬೇಕಾಗುತ್ತದೆ. ಕೆಲವೊಂದು ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ. ಅದೃಷ್ಟದ ಚಿಹ್ನೆ – ಬಟ್ಟೆ
8/ 12
ವೃಶ್ಚಿಕ: ಯಾವುದೇ ತಿರ್ಮಾನವನ್ನು ತೆಗೆದುಕೊಳ್ಳುವುದು ಈ ಸಮಯದಲ್ಲಿ ರಿಸ್ಕ್ ಆಗಬಹುದು. ಕೆಲ ವಿಚಾರಗಳು ನಿಮ್ಮನ್ನ ಚಿಂತೆಗೆ ತಳ್ಳುತ್ತದೆ. ಸದ್ಯಕ್ಕೆ ಕೆಲವು ವಿಷಯಗಳನ್ನು ನಿರ್ಲಕ್ಷಿಸುವುದು ಉತ್ತಮ.ಅದೃಷ್ಟದ ಚಿಹ್ನೆ – ಟ್ರೇ
9/ 12
ಧನುಸ್ಸು: ಕೆಲ ಕೆಲಸಗಳು ಇಂದು ಸಮಸ್ಯೆ ಸೃಷ್ಟಿ ಮಾಡಬಹುದು. ಹೊಸ ಅವಕಾಶ ಬಂದರೂ ತೊಂದರೆಯಾಗುತ್ತದೆ. ಹಳೆಯ ಮತ್ತು ಹೊಸದರ ನಡುವೆ ಸಂಪರ್ಕ ಕಡಿತವಾಗಬಹುದು. ಅದೃಷ್ಟದ ಚಿಹ್ನೆ – ಪಕ್ಷಿ
10/ 12
ಮಕರ: ಕೆಲವು ದಿನಗಳು ಪ್ರತಿಯೊಂದು ವಿಷಯದಲ್ಲೂ ಅತ್ಯಂತ ಅನುಕೂಲಕರವಾಗಿವೆ. ಇದು ಕೂಡ ಆ ದಿನಗಳಲ್ಲಿ ಒಂದು ಎನ್ನಬಹುದು. ನಿಮ್ಮ ಗುರಿ ಬೇಗ ತಲುಪುತ್ತೀರಿ. ನಿಮ್ಮ ಮನಸ್ಸಿನಲ್ಲಿ ಗೊಂದಲ ಉಂಟಾಗಬಹುದು. ಅದೃಷ್ಟದ ಚಿಹ್ನೆ - ಒಳಾಂಗಣ ಸಸ್ಯ
11/ 12
ಕುಂಭ: ವಾದಕ್ಕೆ ಕಾರಣವಾಗುವ ಕೆಲವು ಸಮಸ್ಯೆಗಳಿರಬಹುದು. ನೀವು ಹಿಂದೆ ಆರಂಭಿಸಿದ್ದ ಯೋಜನೆ ಇಂದು ಪೂರ್ಣಗೊಳಿಸಿ. ಹಳೆಯ ಪ್ರೇಮಿಯ ಸಂಪರ್ಕ ಆಗಬಹುದು. ಅದೃಷ್ಟದ ಚಿಹ್ನೆ: ಗಡಿಯಾರ
12/ 12
ಮೀನ: ಕೆಲ ವಿಚಾರಗಳು ಈಗ ಅರ್ಥ ಆಗದಿದ್ದರೂ ಸಹ ಮುಂದಿನ ದಿನಗಳಲ್ಲಿ ಅರ್ಥವಾಗುತ್ತದೆ. ಕೆಲವೊಂದು ಸಮಸ್ಯೆಗಳು ತಾತ್ಕಾಲಿಕ ಹಾಗಾಗಿ ಚಿಂತೆ ಬಿಡಿ. ಅದೃಷ್ಟದ ಚಿಹ್ನೆ - ಹಳೆಯ ಫೋಟೋ