Daily Horoscope: ಈ ದಿನ ಸಾಹಸ ಮಾಡಬೇಕಾಗುತ್ತದೆ, ಕೋಪದ ಕೈಗೆ ಬುದ್ಧಿ ಕೊಡಬೇಡಿ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಇಂದು ಹೊಸ ವಿಚಾರವನ್ನು ನೀವು ಅನ್ವೇಷಿಸುವ ದಿನ ಎನ್ನಬಹುದು. ನಿಮ್ಮ ಜೀವನದ ಮೇಲೆ ಈ ವಿಚಾರಗಳು ಪರಿಣಾಮ ಬೀರಬಹುದು. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಯೋಚನೆ ಮಾಡಿ. ಅದೃಷ್ಟದ ಚಿಹ್ನೆ: ಲ್ಯಾಂಪ್
2/ 12
ವೃಷಭ: ಹಳೆಯ ತಪ್ಪುಗಳನ್ನು ಸರಿ ಮಾಡುವ ಅವಕಾಶವಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ಹೊಸತನ ಮೂಡಲಿದೆ. ಮುಗಿಯದೇ ಇದ್ದ ಹಲವು ಕೆಲಸಗಳು ಇಂದು ಮುಗಿಯಲಿದೆ. ಅದೃಷ್ಟದ ಚಿಹ್ನೆ: ರೆಕ್ಕೆ
3/ 12
ಮಿಥುನ: ಯಾವುದಾದರೂ ಕೆಲಸ ನಿಧಾನವಾಗಿ ಆಗುತ್ತಿದ್ದರೆ ಆ ಕೆಲಸ ಆಗುವುದೇ ಇಲ್ಲ ಎಂದರ್ಥವಲ್ಲ. ಒಳ್ಳೆಯ ಕೆಲಸಕ್ಕೆ ಹೆಚ್ಚಿನ ಸಮಯ ಬೇಕಿದೆ. ಪ್ರಯಾಣದ ಪ್ಲ್ಯಾನ್ ಸ್ವಲ್ಪ ತಡವಾಗಬಹುದು. ಅದೃಷ್ಟದ ಚಿಹ್ನೆ: ಹೆಲಿಕಾಪ್ಟರ್
4/ 12
ಕಟಕ: ಈ ದಿನ ಜಾಸ್ತಿ ಕೆಲಸ ಇರುತ್ತದೆ. ಕೆಲಸದ ಒತ್ತಡದ ಕಾರಣದಿಂದ ನಿಮಗಾಗಿ ಸಮಯ ಸಿಗುವುದಿಲ್ಲ. ಸ್ವಲ್ಪ ತಾಳ್ಮೆ ಅಗತ್ಯ. ಹೊಸ ಅವಕಾಶವೊಂದು ನಿಮ್ಮನ್ನ ಹುಡುಕಿ ಬರಲಿದೆ. ಆದರೂ ನಿಮಗಾಗಿ ಸ್ವಲ್ಪ ಸಮಯ ಮೀಸಲಿಡಿ. ಅದೃಷ್ಟದ ಚಿಹ್ನೆ: ಬಿಳಿ ಗುಲಾಬಿ
5/ 12
ಸಿಂಹ: ನೀವು ಯಾವುದೇ ವಸ್ತು ಅಥವಾ ವ್ಯಕ್ತಿಯನ್ನು ಹಿಡಿದಿಟ್ಟುಕೊಂಡಿದ್ದರೆ ಬಿಟ್ಟುಬಿಡಿ. ಯಾವುದು ನಿಮ್ಮದಲ್ಲವೋ, ಅದು ನಿಮಗೆ ಬೇಡ. ನಿಮ್ಮ ಕೋಪ ಮಾಡಿಕೊಳ್ಳುವುದು ನೆಮ್ಮದಿಯಾಗಿರಲು ಸಹಾಯ ಮಾಡುತ್ತದೆ. ಅದೃಷ್ಟದ ಚಿಹ್ನೆ: ಪುಸ್ತಕ
6/ 12
ಕನ್ಯಾ: ಈ ದಿನ ನೀವು ಪಡೆದ ದೊಡ್ಡ ಅವಕಾಶವನ್ನು ಸಂಭ್ರಮಿಸುವ ಸಮಯ ಇದು. ನಿಮ್ಮ ಪ್ಲ್ಯಾನ್ ಈ ದಿನ ಆರಂಭವಾಗುತ್ತದೆ. ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಸಮಯವನ್ನು ಮೀಸಲಿಡಿ. ಅದೃಷ್ಟದ ಚಿಹ್ನೆ: ಹೂವು
7/ 12
ತುಲಾ: ನೀವು ಬೇರೆಯವರಿಗೆ ನಿಮ್ಮ ಮನಸ್ಸನ್ನು ಹಾಳು ಮಾಡಲು ಬಿಡುತ್ತೀದ್ದೀರಿ, ಹಾಗಾಗಿ ಹಾಳಾಗುತ್ತಿದೆ. ನಿಮ್ಮ ಸಹೋದರ ಅಥವಾ ಸಹೋದರಿ ನೀಡುವ ಯೋಜನೆಯೊಂದು ಹಣ ಗಳಿಸಲು ಸಹಾಯ ಮಾಡುತ್ತದೆ. ಅದೃಷ್ಟದ ಚಿಹ್ನೆ: ಸೂರ್ಯ.
8/ 12
ವೃಶ್ಚಿಕ: ನಿಮಗೆ ಇಂದು ಅದೃಷ್ಟ ಒಲಿದು ಬರಲಿದೆ. ನಿಮಗೆ ಈಗ ನೀಡಿರುವ ಕೆಲಸವನ್ನು ಸಂಪೂರ್ಣವಾಗಿ ಮಾಡಿ ಮುಗಿಸುವುದಲ್ಲದೇ, ಅದರಿಂದ ಲಾಭ ಸಹ ಬರುತ್ತದೆ. ನಿಮ್ಮ ಸಂಗಾತಿಯ ಜೊತೆ ಮನದ ಮಾತು ಹಂಚಿಕೊಳ್ಳಿ. ಅದೃಷ್ಟದ ಚಿಹ್ನೆ: ಮೇಣದ ಬತ್ತಿ.
9/ 12
ಧನಸ್ಸು: ನೀವು ನಿಮ್ಮ ಆಲೋಚನೆಗಳಿಂದ ದೂರ ಹೋಗುತ್ತಿದ್ದೀರಿ. ಆದರೆ ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಮುಖ್ಯವಾದ ಕೆಲಸವೊಂದನ್ನು ಮಾಡಲು ಇಂದು ಧೈರ್ಯ ಸಾಕಾಗುವುದಿಲ್ಲ. ಅದೃಷ್ಟದ ಚಿಹ್ನೆ: ಗಿಡ.
10/ 12
ಮಕರ: ನಿಮಗೆ ಈ ದಿನ ಸರ್ಪ್ರೈಸ್ಗಳು ಜಾಸ್ತಿ ಸಿಗಲಿದೆ. ನಿಮಗೆ ಕೆಲವೊಂದು ಇಷ್ಟವಾಗದಿರಬಹುದು. ನಿಮ್ಮ ಕೋಪವನ್ನು ಕಡಿಮೆ ಮಾಡಿಕೊಳ್ಳಲೇಬೇಕಿರುವುದು ಅನಿವಾರ್ಯ. ಇಲ್ಲದಿದ್ದರೆ ಬೇರೆಯವರಿಗೆ ಕೋಪ ಬರಬಹುದು. ಅದೃಷ್ಟದ ಚಿಹ್ನೆ: ಗ್ಲಾಸ್
11/ 12
ಕುಂಭ: ಪರೀಕ್ಷೆಯ ಫಲಿತಾಂಶ ಸ್ವಲ್ಪ ಬೇಸರವನ್ನುಂಟು ಮಾಡಬಹುದು. ಆದರೆ ಸಣ್ಣ ಸಣ್ಣ ಕೆಲಸಗಳು ಇಂದು ಪೂರ್ಣವಾಗುತ್ತದೆ. ಈ ದಿನ ಕೆಲ ಸಾಹಸಗಳನ್ನು ಮಾಡಬೇಕಾಗಬಹುದು. ಅದೃಷ್ಟದ ಚಿಹ್ನೆ: ಕ್ಯಾಂಡಿ.
12/ 12
ಮೀನ: ಕೆಲ ಜನರಿಂದ ಇಂದು ನಿಮಗೆ ಉತ್ಸಾಹ ಹೆಚ್ಚಾಗುತ್ತದೆ. ಈ ದಿನ ಹೆಚ್ಚಿನ ಜನರ ಜೊತೆ ಬೆರೆಯದೇ ಇರುವುದರಿಂದ ನಿಮಗೆ ಸಹಾಯವಾಗುತ್ತದೆ. ಕೆಲಸದ ಸ್ಥಳದಲ್ಲಿ ಕೆಲವರು ನಿಮ್ಮ ಮೇಲೆ ಅಪವಾದ ಮಾಡಬಹುದು. ಅದೃಷ್ಟದ ಚಿಹ್ನೆ: ಆಕಾಶ