Daily Horoscope: ಇಂದು ಮನೆ ಕಡೆ ಹೆಚ್ಚಿನ ಗಮನ ಕೊಡಿ, ಆರೋಗ್ಯವೇ ಭಾಗ್ಯ ಎಂಬುದನ್ನ ಮರೆಯಬೇಡಿ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಇದು ಬಹಳ ಬ್ಯುಸಿ ದಿನ ಎಂದರೆ ತಪ್ಪಲ್ಲ, ಒಂದು ಟಾಸ್ಕ್ ಕಂಪ್ಲೀಟ್ ಮಾಡಲು ನಿಮ್ಮ ಶ್ರಮವನ್ನು ವ್ಯಯಿಸಬೇಕಾಗುತ್ತದೆ. ಇಂದು ಹೊಸ ಯೋಜನೆಯನ್ನು ಆರಂಭ ಮಾಡುವ ದಿನ. ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ: ಸೇಬು
2/ 12
ವೃಷಭ: ನೀವು ಯಾರಿಗಾದರೂ ಕಾಲ್ ಮಾಡುವುದನ್ನ ಮುಂದಕ್ಕೆ ಹಾಕುತ್ತಿದ್ದರೆ ಈ ದಿನ ಕಾಲ್ ಮಾಡುವುದು ಸೂಕ್ತ. ದೇಹಕ್ಕೆ ವ್ಯಾಯಾಮದ ಅಗತ್ಯವಿರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ ಸ್ವಲ್ಪ ಕಷ್ಟವಿದೆ. ಹೊಸ ಅವಕಾಶ ನಿಮ್ಮನ್ನ ಹುಡುಕಿಬರಲಿದೆ. ಅದೃಷ್ಟದ ಚಿಹ್ನೆ: ಹಳದಿ ಬಟ್ಟೆ
3/ 12
ಮಿಥುನ: ನಿಮ್ಮ ಶಕ್ತಿಯನ್ನು ಸರಿಯಾಗಿ ಬಳಕೆ ಮಾಡುವ ದಿನ. ಹೊಸ ಪ್ಲ್ಯಾನ್ ಒಂದು ತಲೆಯಲ್ಲಿ ಹೊಳೆಯಲಿದೆ. ಆದರೆ ನಿಮ್ಮ ಹೊಸ ಯೋಜನೆಗೆ ಹಿರಿಯರ ಒಪ್ಪಿಗೆ ಬಹಳ ಅಗತ್ಯವಾಗಿದೆ. ಅದೃಷ್ಟದ ಚಿಹ್ನೆ: ಕಪ್ಪು ವಸ್ತು
4/ 12
ಕಟಕ: ಹೊಸ ಗೆಳೆಯರ ಭೇಟಿ ಆಗಬಹುದು, ಆದರೆ ಅವರನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಹೀಗೆ ಬಂದು ಹಾಗೆ ಹೋಗುವವರು ಅವರು. ಮನೆಯ ಕಡೆ ಹೆಚ್ಚಿನ ಗಮನದ ಅಗತ್ಯವಿದೆ. ಹೊರಗಿನ ಜನರು ಮೂಗು ತೋರಿಸುವುದು ನಿಮಗೆ ಕೋಪ ತರಿಸಬಹುದು. ಅದೃಷ್ಟದ ಚಿಹ್ನೆ: ಲ್ಯಾಂಪ್
5/ 12
ಸಿಂಹ: ಯಾವುದೇ ಕೆಲಸವನ್ನು ನೀವು ಮೈ ಮೇಲೆ ಎಳೆದುಕೊಳ್ಳಬೇಡಿ. ಸರಳವಾಗಿ ಎಲ್ಲವನ್ನೂ ಮಾಡಲು ಪ್ರಯತ್ನಿಸಿ. ಹೊಸ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಉತ್ತಮ. ನಿಮ್ಮ ಬಾಸ್ನಿಂದ ಸಹಾಯ ಸಿಗಬಹುದು. ಅದೃಷ್ಟದ ಚಿಹ್ನೆ: ಬಾಕ್ಸ್
6/ 12
ಕನ್ಯಾ: ನಿಮ್ಮ ಪ್ರೀತಿ-ಪಾತ್ರರಿಗೆ ಹೆಚ್ಚಿನ ಸಮಯದ ಅವಶ್ಯಕತೆ ಇದೆ. ತಪ್ಪು ತಿಳುವಳಿಕೆಗಳನ್ನು ಇಂದು ಕ್ಲಿಯರ್ ಮಾಡುವುದು ನಿಮಗೆ ಸಹಾಯ ಮಾಡುತ್ತದೆ. ಈ ದಿನ ತಾಳ್ಮೆಯ ಅಗತ್ಯವಿದೆ. ಸ್ವಲ್ಪ ನಿಧಾನವಾಗಿ ಯೋಚಿಸಿ. ಧ್ಯಾನ ಮಾಡಿ. ಅದೃಷ್ಟದ ಚಿಹ್ನೆ: ಉದ್ಯಾನವನ
7/ 12
ತುಲಾ: ಆಫೀಸ್ನಲ್ಲಿ ಗಂಭೀರವಾದ ವಿಚಾರಕ್ಕೆ ನಿಮ್ಮ ಸಲಹೆಯ ಅಗತ್ಯವಿರುತ್ತದೆ. ಈ ದಿನ ನಿದ್ರೆಯ ಬಗ್ಗೆ ಕಾಳಜಿ ವಹಿಸುವುದು ಸ್ವಲ್ಪ ಅವಶ್ಯಕವಾಗಿದೆ. ಆರೋಗ್ಯಕ್ಕೆ ಸಮಸ್ಯೆ ಮಾಡಿಕೊಳ್ಳಬೇಡಿ. ಸ್ನೇಹಿತರ ಭೇಟಿಯಾಗಬಹುದು. ಅದೃಷ್ಟದ ಚಿಹ್ನೆ: ಅಳಿಲು.
8/ 12
ವೃಶ್ಚಿಕ: ಫ್ಯಾಮಿಲಿ ಫಂಕ್ಷನ್ಗೆ ನಿಮ್ಮ ತಯಾರಿ ಈಗಾಗಲೇ ಆರಂಭಿಸಿ. ನಿಮ್ಮ ಸಮಯವನ್ನು ಉಳಿಸಿ ಅಗತ್ಯವಿರುವ ಕಡೆ ವ್ಯಯ ಮಾಡಿ. ಹೊಸ ವಿಧಾನವನ್ನು ಅನುಸರಿಸಿದರೆ ನಿಮಗೆ ಸಹಾಯವಾಗುತ್ತದೆ. ಅದೃಷ್ಟದ ಚಿಹ್ನೆ: ಗಿಳಿ
9/ 12
ಧನಸ್ಸು: ಸ್ವಲ್ಪ ಗೊಂದಲಮಯ ಅನಿಸಿದರೂ ಸಹ ನಿಮಗೆ ಸ್ವಲ್ಪ ಹೊತ್ತಿನಲ್ಲಿ ಎಲ್ಲವೂ ಸರಿಯಾಗುತ್ತದೆ. ಹೊಸ ಹೊಸ ಆಲೋಚನೆಗಳು ತಲೆಯಲ್ಲಿ ಬರುತ್ತದೆ. ಉತ್ಸಾಹ ಭರಿತವಾದ ದಿನ ಇದು. ಅದೃಷ್ಟದ ಚಿಹ್ನೆ: ಕೆಂಪು ಬಟ್ಟೆ.
10/ 12
ಮಕರ: ಕೆಲವೊಂದು ಅಭ್ಯಾಸಗಳು ನಿಮ್ಮ ಸಮಯವನ್ನು ಉಳಿಸುವ ಸಾಧ್ಯತೆ ಇದೆ. ಹೊಸ ವಿಚಾರವನ್ನು ಕಲಿಯುವುದರಿಂದ ಮುಂದಿನ ದಿನಗಳಲ್ಲಿ ಲಾಭವಿದೆ. ನಿಮಗಾಗಿ ಅಭಿಮಾನಿಗಳಿದ್ದಾರೆ ಎಂಬುದನ್ನ ನೆನಪಿಡಿ. ನಿಮ್ಮ ಸ್ಥಾನಕ್ಕಾಗಿ ಅನೇಕ ಜನರು ಕಣ್ಣಿಟ್ಟಿದ್ದಾರೆ ಎಂಬುದರ ಅರಿವು ಇರಬೇಕು. ಅದೃಷ್ಟದ ಚಿಹ್ನೆ: ಹೂವು
11/ 12
ಕುಂಭ: ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಸ್ವಲ್ಪ ಕಾಳಜಿವಹಿಸಬೇಕು. ಇಲ್ಲದಿದ್ದರೆ ಸಮಸ್ಯೆ ಉಂಟಾಗುತ್ತದೆ. ಕಾರಣವೇ ಇಲ್ಲದೇ ಗೊಂದಲ ಉಂಟಾಗುತ್ತದೆ. ತುಂಬಾ ಆಳವಾಗಿ ಕೆಲ ವಿಚಾರಗಳ ಬಗ್ಗೆ ಚಿಂತೆ ಮಾಡಬೇಕು. ಯೋಚನೆ ಮಾಡಿ ತೆಗೆದುಕೊಂಡ ನಿರ್ಧಾರ ನಿಮಗೆ ಸಹಾಯ ಮಾಡುತ್ತದೆ, ಅದೃಷ್ಟದ ಚಿಹ್ನೆ: ತುಳಸಿ ಗಿಡ
12/ 12
ಮೀನ: ನಿಮ್ಮ ಮನದ ಭಾವನೆ ವ್ಯಕ್ತಪಡಿಸಲು ಇದು ಒಂದು ಸುಂದರ ದಿನ ಎನ್ನುವುದರಲ್ಲಿ ಅನುಮಾನವಿಲ್ಲ, ಧೈರ್ಯವಾಗಿ ಹೇಳಿಕೊಳ್ಳಿ. ಒಂದು ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಿ. ಹೊಸ ಅವಕಾಶವೊಂದು ಹುಡುಕಿಬರಲಿದೆ. ಅದೃಷ್ಟದ ಚಿಹ್ನೆ: ಜೆಮ್ಸ್