Daily Horoscope: ಊಹಿಸದ ಘಟನೆಯೊಂದು ಇಂದು ನಡೆಯಲಿದೆ, ಕಷ್ಟಕ್ಕೆ ಫಲ ಸಿಗುವ ದಿನ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಇಂದು ಹಣಕಾಸಿನ ವಿಚಾರವಾಗಿ ಸ್ವಲ್ಪ ಯೋಚನೆ ಮಾಡಬೇಕಾಗುತ್ತದೆ. ಸ್ವಲ್ಪ ತಲೆಬಿಸಿ ಆದರೂ ಸಹ ನಂತರ ಸರಿಯಾಗುತ್ತದೆ. ಕೆಲವೊಂದು ಕೆಲಸಗಳನ್ನು ಇಂದು ಮುಂದೂಡುವ ಸಾಧ್ಯತೆ ಇದೆ, ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬುದು ನೆನಪಿರಲಿ. ಅದೃಷ್ಟ ಚಿಹ್ನೆ: ಕಿತ್ತಳೆ
2/ 12
ವೃಷಭ: ಈ ದಿನ ನಿಮಗೆ ಸರ್ಪ್ರೈಸ್ ಒಂದು ಸಿಗಲಿದೆ. ನಿಮ್ಮ ಹಿರಿಯರು ಹೇಳಿರುವ ಮಾತನ್ನು ನೆಗ್ಲೆಕ್ಟ್ ಮಾಡಬೇಡಿ. ಅವರ ಸಲಹೆ ಪಾಲಿಸಿ. ನಿಮಗೆ ಇಂದು ಸಮಯ ಮೀಸಲಿಡುವುದು ಉತ್ತಮ. ಅದೃಷ್ಟದ ಚಿಹ್ನೆ: ಚಿಟ್ಟೆ
3/ 12
ಮಿಥುನ: ಇಷ್ಟು ದಿನ ತಾಳ್ಮೆ ವಹಿಸಿದ್ದು ಈಗ ಫಲ ಕೊಡಲಿದೆ. ಕೆಲ ಸಮಸ್ಯೆಗಳು ಕಾಣಿಸಿಕೊಂಡರೂ ಸಹ ಬೇಗ ಅದಕ್ಕೆ ಪರಿಹಾರ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಸಿಗಲಿದೆ. ಅದೃಷ್ಟದ ಚಿಹ್ನೆ: ಬೆಂಕಿ
4/ 12
ಕಟಕ: ನಿಮ್ಮ ಪ್ರೀತಿಪಾತ್ರರೊಬ್ಬರಿಗೆ ಸಹಾಯದ ಅವಶ್ಯಕತೆ ಇದೆ. ಹಣದ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ಯೋಜನೆಯನ್ನು ಮುಂದಕ್ಕೆ ಹಾಕುವುದು ನಿಮಗೆ ಸದ್ಯಕ್ಕೆ ಲಾಭದಾಯಕ ಅನಿಸುತ್ತದೆ. ಅದೃಷ್ಟದ ಚಿಹ್ನೆ: ಸೂರ್ಯ
5/ 12
ಸಿಂಹ: ಇಂದು ಸಂತೋಷವಾಗಿರಲು ಕೆಲ ಕಾರಣಗಳು ಸಿಗುತ್ತದೆ. ನಿಮ್ಮ ಪೋಷಕರಿಗೆ ನಿಮ್ಮ ಅವಶ್ಯಕತೆ ಇದೆ. ಅವರಿಗೆ ಏನು ಬೇಕು ಎಂಬುದನ್ನ ತಿಳಿದುಕೊಂಡು ಕೊಡುವುದು ಸೂಕ್ತ. ಮುಖ್ಯವಾದ ನಿರ್ಧಾರವನ್ನು ಈ ದಿನ ತೆಗೆದುಕೊಂಡರೆ ನಿಮಗೆ ಲಾಭ ಜಾಸ್ತಿ. ಅದೃಷ್ಟದ ಚಿಹ್ನೆ: ಬೆಟ್ಟ
6/ 12
ಕನ್ಯಾ: ನಿಮಗಾಗಿ ಹೊಸ ಅವಕಾಶವೊಂದು ಬಹುದಿನಗಳಿಂದ ಕಾಯುತ್ತಿದೆ. ಅದನ್ನು ಬಳಸಿಕೊಳ್ಳಲು ಇದು ಸೂಕ್ತವಾದ ದಿನ. ಸಂಗಾತಿಯಿಂದ ಸಂತಸದ ಸುದ್ದಿಯೊಂದು ಕೇಳಲಿದ್ದೀರಿ. ನಿಮ್ಮ ವೈಯಕ್ತಿಕ ಬದುಕಿಗೆ ಸ್ವಲ್ಪ ಪ್ರಾಮುಖ್ಯತೆ ಕೊಡಿ. ಅದೃಷ್ಟದ ಚಿಹ್ನೆ: ಕ್ರಾಫ್ಟ್
7/ 12
ತುಲಾ: ಪಾರ್ಟಿ ಮಾಡುವ ಸಮಯ ಇದು ಎನ್ನಬಹುದು. ಪ್ಲ್ಯಾನ್ ಇಲ್ಲದೇ ಇಂದು ಊಹಿಸಿದ ಘಟನೆಗಳು ನಡೆಯುತ್ತದೆ. ಸ್ವಲ್ಪ ಎಚ್ಚರಿಕೆ ಅಗತ್ಯ ಎಂದರೆ ತಪ್ಪಲ್ಲ. ಅದೃಷ್ಟದ ಚಿಹ್ನೆ: ಪ್ಲಾಟಿನಮ್ ರಿಂಗ್
8/ 12
ವೃಶ್ಚಿಕ: ಇಂದು ನೀವು ಮನಬಿಚ್ಚಿ ಮಾತನಾಡದಿದ್ದರೆ ನಿಮಗೆ ಲಾಸ್ ಆಗುತ್ತದೆ. ನಿಮ್ಮ ಕೆಲ ನಿರ್ಧಾರಗಳು ಬೇರೆಯವರಿಗೆ ನೋವು ಮಾಡಬಹುದು. ತಾತ್ಕಲಿಕವಾಗಿ ಸ್ವಲ್ಪ ನೆಮ್ಮದಿ ಸಿಕ್ಕರೂ ಸಹ ಈ ದಿನ ಚಿಂತೆ ಕಾಡುತ್ತದೆ. ಅದೃಷ್ಟದ ಚಿಹ್ನೆ: ಚಿನ್ನ
9/ 12
ಧನಸ್ಸು: ಈ ದಿನ ನಿಮಗೆ ಬೇಕಾದ ದಿನ ಎನ್ನಬಹುದು. ಒಂದು ಅವಕಾಶಕ್ಕಾಗಿ ಕಾದಿದ್ದರೆ ಅದು ಸಿಗಲಿದೆ. ಇಂದು ಕೆಲಸದ ಒತ್ತಡ ನಿಮಗೆ ಹೆಚ್ಚಾಗಬಹುದು. ನಿಮ್ಮ ಕೆಲಸವನ್ನು ಮುಗಿಸುವುದು ಇಂದು ಅನಿವಾರ್ಯವಾಗುತ್ತದೆ. ನಿಮಗೆ ಇದು ಹೊಸ ದಿನ ಅನಿಸುತ್ತದೆ. ಅದೃಷ್ಟದ ಚಿಹ್ನೆ: ಫೋಟೋ
10/ 12
ಮಕರ: ನೀವು ಹೊಸ ಪ್ರಯಾಣದ ಪ್ಲ್ಯಾನ್ ಮಾಡುತ್ತಿದ್ದರೆ ಸೂಕ್ತವಾದ ದಿನ, ಮುಖ್ಯವಾಗಿ ಯಾವುದಾದರೂ ಹೊಸ ಜಾಗಕ್ಕೆ ಹೋಗಿ. ಇದರಿಂದ ನಿಮ್ಮ ಮನಸ್ಸು ರಿಫ್ರೆಶ್ ಆಗುವುದಲ್ಲದೇ, ಲಾಭ ಸಹ ಸಿಗುತ್ತದೆ. ಇಂದು ಶೇರ್ ಮಾರುಕಟ್ಟೆಯಲ್ಲಿ ಲಾಭ ಸಿಗುತ್ತದೆ. ಅದೃಷ್ಟದ ಚಿಹ್ನೆ: ಕೋಗಿಲೆ
11/ 12
ಕುಂಭ: ನಿರ್ಧಾರ ತೆಗೆದುಕೊಳ್ಳುವಾಗ ಸ್ವಲ್ಪ ಯೋಚನೆ ಮಾಡಿ, ನಿಮ್ಮ ಕೆಲಸವನ್ನು ಹಿರಿಯರು ಪ್ರಶಂಸಿಸಬಹುದು. ಸ್ವಲ್ಪ ಹೆಚ್ಚಿನ ಜವಾಬ್ದಾರಿ ನಿಮ್ಮ ಹೆಗಲೇರಲಿದೆ ಎಂದರೆ ತಪ್ಪಲ್ಲ. ಅದೃಷ್ಟದ ಚಿಹ್ನೆ: 3 ಪಾರಿವಾಳ
12/ 12
ಮೀನ: ಹೊಸ ಯೋಜನೆಯನ್ನು ಪ್ಲ್ಯಾನ್ ಮಾಡಲು ಇಂದು ಒಳ್ಳೆಯ ದಿನ. ನಿಮ್ಮ ಗುರಿಯ ಸಮೀಪ ನೀವು ಹೋಗುವುದನ್ನ ಕಾಣಬಹುದು. ನಿಮ್ಮ ಹತ್ತಿರದ ಸ್ನೇಹಿತರ ಸಲಹೆ ಪಡೆಯುವುದು ಸಹಾಯ ಮಾಡುತ್ತದೆ. ಅದೃಷ್ಟದ ಚಿಹ್ನೆ: ಸಾಸಿವೆ