Daily Horoscope: ಈ 2 ರಾಶಿಯವರಿಗೆ ಬೇಡ ಬೇಡ ಅಂದ್ರೂ ಅದೃಷ್ಟ ಸಿಗಲಿದೆ, ಖುಷಿಯಲ್ಲಿ ಜವಾಬ್ದಾರಿ ಮರೆಯಬೇಡಿ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಈ ದಿನ ಹೆಚ್ಚು ಜನರ ಜೊತೆ ಬೆರೆಯುವ ಸಾಧ್ಯತೆ ಇದೆ. ಕೆಲವು ಪೂರ್ವಸಿದ್ಧತೆಯಿಲ್ಲದ ಕೆಲಸವು ನಿಮ್ಮ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು. ಇಂದು ನಿಮ್ಮ ಆಹಾರ ಸೇವನೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ.ಅದೃಷ್ಟದ ಚಿಹ್ನೆ - ಮಲ್ಲಿಗೆ ಹೂವು
2/ 12
ವೃಷಭ: ಈ ದಿನ ನಿಮ್ಮ ಸೋಮಾರಿತನ ಹೆಚ್ಚಾಗಲಿದೆ. ಅಲ್ಲದೇ ವಿಶ್ರಾಂತಿಯ ದಿನ ಎನ್ನಬಹುದು. ಮಧ್ಯಾಹ್ನದ ವೇಳೆಗೆ ಕೆಲಸಗಳು ಹೆಚ್ಚಾಗಬಹುದು. ನೀವು ಯಾವ ಕೆಲಸವನ್ನು ಮುಂದೂಡುತ್ತಿದ್ದೀರೋ ಅದು ಈಗ ಕಾರ್ಯರೂಪಕ್ಕೆ ಬರಬಹುದು ಎಂಬ ಅಂಶದ ಬಗ್ಗೆ ಗಮನವಿರಲಿ. ಅದೃಷ್ಟದ ಚಿಹ್ನೆ - ನಿಂಬೆ
3/ 12
ಮಿಥುನ: ಇದು ಆರ್ಥಿಕ ಲಾಭಗಳ ದಿನವಾಗಿದೆ. ನಿಮ್ಮ ಹಣ ಅಥವಾ ಕೆಲವು ಹೊಸ ಪ್ರಾಜೆಕ್ಟ್ ಲಾಭ ನೀಡುತ್ತದೆ. ನೀವು ತೆಗೆದುಕೊಳ್ಳುವ ಸಣ್ಣ ಬ್ರೇಕ್ ಹೆಚ್ಚು ಅಗತ್ಯವಿರುವ ಬದಲಾವಣೆಯನ್ನು ತರಬಹುದು.ಅದೃಷ್ಟದ ಚಿಹ್ನೆ - ಎರಡು ಅಳಿಲುಗಳು
4/ 12
ಕಟಕ: ನಿಮ್ಮ ಹಿಂದಿನ ಯೋಜನೆಗಳು ಉತ್ತಮ ಫಲ ನೀಡಬಹುದು. ನಿಮ್ಮ ಸಂಬಂಧವು ಅರ್ಥವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ಶೀಘ್ರದಲ್ಲೇ ಅದರಿಂದ ಹೊರಬರುವುದು ಉತ್ತಮ. ಸರ್ಕಾರಿ ಉದ್ಯೋಗದಲ್ಲಿರುವ ಮತ್ತು ಮಾಧ್ಯಮ ಉದ್ಯಮದಲ್ಲಿರುವ ಜನರಿಗೆ ಒತ್ತಡದ ದಿನ. ಅದೃಷ್ಟದ ಚಿಹ್ನೆ - ಹದ್ದು
5/ 12
ಸಿಂಹ: ನಿಮ್ಮ ವೈಯಕ್ತಿಕ ಬದುಕು ಮುಖ್ಯ ಎಂಬುದು ನೆನಪಿರಲಿ. ಇದು ಜೀವನದಲ್ಲಿ ಪ್ರಗತಿಗೆ ಸಹಾಯ ಮಾಡುತ್ತದೆ. ನಿಮ್ಮ ಬಾಕಿಯಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಉತ್ತಮ ದಿನ. ನಿಮ್ಮ ಸಂಗಾತಿಗೆ ನಿಮ್ಮ ಬೆಂಬಲ ಬೇಕು. ಅದೃಷ್ಟದ ಚಿಹ್ನೆ - ಸೂಚನಾ ಫಲಕ
6/ 12
ಕನ್ಯಾ: ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ನೀವು ಮಾಡಿದ ಕೆಲಸಗಳ ಫಲಿತಾಂಶಗಳನ್ನು ಎದುರಿಸಲು ಸಿದ್ಧರಾಗಿರಿ. ನಿಮ್ಮ ಇತ್ತೀಚಿನ ನಿರ್ಧಾರದ ಬಗ್ಗೆ ಮತ್ತೆ ಯೋಚನೆ ಮಾಡಿ. ರೋಮಾಂಚಕ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ನಿಮ್ಮನ್ನು ಸಂಪರ್ಕಿಸಬಹುದು. ಅದೃಷ್ಟದ ಚಿಹ್ನೆ - ಹಳದಿ ನೀಲಮಣಿ
7/ 12
ತುಲಾ: ಇದು ಬಹುತೇಕ ಪರಿಪೂರ್ಣ ದಿನವಾಗಿದೆ ಮತ್ತು ನೀವು ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಇಂದು ಡೇಟ್ ಹೋಗಲು ಸೂಕ್ತವಾಗುತ್ತದೆ. ಅದೃಷ್ಟದ ಚಿಹ್ನೆ- ಹೊಸ ಗ್ಯಾಜೆಟ್
8/ 12
ವೃಶ್ಚಿಕ: ಹೊಸದಾಗಿ ಆರಂಭಿಸಿದ ಹವ್ಯಾಸವು ಈಗ ನಿಮಗೆ ಲಾಭ ನೀಡಲಿದೆ. ನೀವು ಇತ್ತೀಚೆಗೆ ಭೇಟಿಯಾದ ಯಾರನ್ನಾದರೂ ನೀವು ಧೈರ್ಯವಾಗಿ ನಂಬಬಹುದು. ಬಹಳಷ್ಟು ಘಟನೆಗಳು ಮಾನಸಿಕ ಸಮಸ್ಯೆಗೆ ಕಾರಣವಾಗಬಹುದು. ಅದೃಷ್ಟದ ಚಿಹ್ನೆ - ದೀಪ
9/ 12
ಧನುಸ್ಸು: ಸಿಕ್ಕ ಸಿಕ್ಕವರ ಜೊತೆ ಮಾತನಾಡಬೇಡಿ. ನೀವು ತಾಳ್ಮೆಯನ್ನು ಹೊಂದಿರಬೇಕು. ನಿಮ್ಮ ಉದ್ದೇಶಗಳು ಉತ್ತಮವಾಗಿದ್ದರೆ ಸರಿಯಾಗಿ ಮಾಹಿತಿ ಕೊಡಿ. ನೆರೆಹೊರೆಯಲ್ಲಿ ಯಾರಾದರೂ ನಿಮ್ಮ ಕೆಲಸಕ್ಕೆ ಅಡಚಣೆಯನ್ನು ಉಂಟುಮಾಡಬಹುದು. ಅದೃಷ್ಟದ ಚಿಹ್ನೆ - ವೆನಿಲ್ಲಾ
10/ 12
ಮಕರ: ನಿಮ್ಮ ಉದ್ದೇಶಗಳನ್ನು ಸರಿಯಾಗಿ ಈಡೇರುವ ದಿನ ಇದು. ಹೊಸ ಅವಕಾಶ ಹಾಗೂ ಸವಾಲು ಬಾಗಿಲು ತಟ್ಟಲಿದೆ. ನಿಮ್ಮ ಭಯವನ್ನು ಬದಿಗಿಟ್ಟು ಈ ಹೊಸ ಸವಾಲನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ. ಅದೃಷ್ಟದ ಚಿಹ್ನೆ - ಅಣಬೆ
11/ 12
ಕುಂಭ: ಸಮೃದ್ಧಿಯು ಹೆಚ್ಚಾಗುವ ಸಮಯ ಇದು ಎನ್ನಬಹುದು. ಹೊಸ ಆಲೋಚನೆಗಳು ಬರಬಹುದು, ಅದನ್ನು ಇತರರೊಂದಿಗೆ ಹಂಚಿಕೊಳ್ಳಿ. ಅದೃಷ್ಟದ ಚಿಹ್ನೆ - ಆಕಾಶ
12/ 12
ಮೀನ: ನಿಮ್ಮ ಭಯ ನಿಜವಾಗುತ್ತಿದೆ ಎಂಬ ಭಾವನೆ ನಿಮ್ಮಲ್ಲಿರಬಹುದು. ಆದರೆ ನೀವು ದಿನವನ್ನು ಚೆನ್ನಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಕೆಲಸದಲ್ಲಿ ಸಣ್ಣ ಸಮಸ್ಯೆ ಬರಬಹುದು. ಅದೃಷ್ಟದ ಚಿಹ್ನೆ - ನೇರಳೆ ಹೂವುಗಳು