Daily Horoscope: ಕಾನೂನು ವ್ಯವಹಾರದಲ್ಲಿ ನಿಮ್ಮ ಕೈ ಮೇಲಾಗಲಿದೆ, ಈ ದಿನ ನಿಮ್ಮ ಕುಟುಂಬಕ್ಕೆ ಮೀಸಲಿದ್ರೆ ಉತ್ತಮ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ ರಾಶಿ: ಆರ್ಥಿಕ ವಿಷಯಗಳಲ್ಲಿ ಲಾಭ ಆಗುವ ದಿನ ಇದು. ಪ್ರಮುಖ ಕೆಲಸಗಳು ವೇಗವಾಗಿ ಮುಗಿಯಲಿದೆ. ಈ ದಿನ ನಿಮಗೆ ಹಲವಾರು ರೀತಿಯಲ್ಲಿ ಲಾಭವಾಗಲಿದೆ. ಹೊಸ ಯೋಜನೆ ಆರಂಭಿಸಲು ಇಂದು ಸೂಕ್ತವಾದ ಸಮಯ ಎನ್ನಬಹುದು. ಅದೃಷ್ಟದ ಚಿಹ್ನೆ: ನವಿಲುಗರಿ
2/ 12
ವೃಷಭ: ಇಂದು ಆಫೀಸ್ ವಿಚಾರವಾಗಿ ಸ್ವಲ್ಪ ತಲೆಬಿಸಿ ಉಂಟಾಗಬಹುದು. ಆದರೆ ಯಶಸ್ಸು ನಿಮ್ಮದೇ ಎಂಬುದನ್ನ ಮರೆಯಬೇಡಿ. ಸ್ವಲ್ಪ ಕಷ್ಟಪಟ್ಟರೆ ಈ ದಿನ ದೊಡ್ಡ ಲಾಭವೊಂದು ನಿಮ್ಮ ತೆಕ್ಕೆಗೆ ಸೇರಲಿದೆ. ಅದೃಷ್ಟದ ಚಿಹ್ನೆ: ಬಾಟಲಿ
3/ 12
ಮಿಥುನ: ಇಂದು ಅದೃಷ್ಟ ನಿಮ್ಮ ಜೊತೆ ಆಟ ಆಡಬಹುದು. ಸ್ವಲ್ಪ ವೃತ್ತಿಯತ್ತ ಗಮನಕೊಡಿ. ನಿಮ್ಮ ಗೆಳೆಯರ ಸಲಹೆ ಈ ದಿನ ನಿಮಗೆ ಸಹಾಯ ಮಾಡುತ್ತದೆ. ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. ಅದೃಷ್ಟದ ಚಿಹ್ನೆ: ನೀರು
4/ 12
ಕಟಕ: ಇದು ನಿಮ್ಮ ಜೀವನದ ಪ್ರಮುಖ ದಿನವಾಗಲಿದೆ. ಹಾಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವಲ್ಪ ಆಲೋಚನೆ ಮಾಡಿ. ಇಂದಿನ ನಿಮ್ಮ ನಿಲುವು ಭವಿಷ್ಯದಲ್ಲಿ ತೊಂದರೆ ತೋರಿಸುತ್ತದೆ. ಅದೃಷ್ಟದ ಚಿಹ್ನೆ: ಗ್ಲಾಸ್
5/ 12
ಸಿಂಹ: ಕಾನೂನು ವ್ಯವಹಾರದಲ್ಲಿ ಇಂದು ಜಯ ನಿಮ್ಮದಾಗಲಿದೆ. ಹಿರಿಯರ ಸಲಹೆ ಹಾಗೂ ಆಶೀರ್ವಾದ ಬಹಳ ಅಗತ್ಯವಾಗಿದೆ. ಸಂಗಾತಿಯ ಜೊತೆ ಜಗಳ ಆಗಬಹುದು. ಅದೃಷ್ಟದ ಚಿಹ್ನೆ: ಬಳೆ
6/ 12
ಕನ್ಯಾ: ಮಹಿಳೆಯರು ಇಂದು ಆಧ್ಯಾತ್ಮಿಕವಾಗಿ ಹೆಚ್ಚು ಸಮಯ ಕಳೆಯುವುದು ಉತ್ತಮ. ರಾಜಕೀಯ ವ್ಯಕ್ತಿಗಳಿಗೆ ಇಂದು ಸ್ವಲ್ಪ ಕಿರಿಕಿರಿ ಆಗಬಹುದು. ಸಣ್ಣ –ಪುಟ್ಟ ಸಮಸ್ಯೆಗಳು ಬೇಗ ಪರಿಹಾರವಾಗುತ್ತವೆ. ಅದೃಷ್ಟದ ಚಿಹ್ನೆ: ಮೇಕಪ್ ಕಿಟ್
7/ 12
ತುಲಾ: ವೈಯಕ್ತಿಕ ಜೀವನದಲ್ಲಿ ಸಂತೋಷ ತುಂಬಿರುವ ದಿನ ಇದು. ಈ ದಿನವನ್ನು ಎಂದಿಗೂ ನೀವು ಮರೆಯುವುದಿಲ್ಲ. ನಿಮ್ಮ ಸಂಗಾತಿಗೆ ಇಷ್ಟದ ವಸ್ತು ಗಿಫ್ಟ್ ನೀಡಿ. ಅದೃಷ್ಟದ ಚಿಹ್ನೆ: ಬಟ್ಟೆ
8/ 12
ವೃಶ್ಚಿಕ: ಯಾವುದೋ ಶಕ್ತಿ ನಿಮನ್ನ ಕಾಯುತ್ತಿರುವ ಅನುಭವ ಆಗಲಿದೆ. ನಿಮ್ಮ ಕಷ್ಟಗಳು ಪರಿಹಾರ ಆಗುವ ದಿನ ಇದು. ಸುಮಾರು ದಿನಗಳ ನಂತರ ನಿಮ್ಮ ತಾಯಿಯ ಮುಖದಲ್ಲಿ ಸಂತೋಷ ಕಾಣಿಸಲಿದೆ. ಅದೃಷ್ಟದ ಚಿಹ್ನೆ: ಮಾತ್ರೆ
9/ 12
ಧನಸ್ಸು: ನಿಮ್ಮ ಮನೆಯಲ್ಲಿ ಶುಭಕಾರ್ಯ ನಡೆಯಬಹುದು. ಸ್ವಲ್ಪ ಆಯಾಸ ಉಂಟಾಗುವ ದಿನ ಇದು. ಸಂಗಾತಿಯ ಆರೋಗ್ಯದ ವಿಚಾರದಲ್ಲಿ ಗಮನ ಇರಲಿ. ನಿಮ್ಮ ಆರೋಗ್ಯವೂ ತಲೆಬಿಸಿಯಾಗಬಹುದು. ಅದೃಷ್ಟದ ಚಿಹ್ನೆ: ಕಂಪ್ಯೂಟರ್
10/ 12
ಮಕರ: ಗೆಳೆಯರನ್ನು ಭೇಟಿಯಾಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ತಲೆಯಲ್ಲಿದ್ದ ಕೆಟ್ಟ ಆಲೋಚನೆಗಳು ದೂರ ಆಗುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಸಿಹಿ ಸುದ್ದಿ ಕೇಳಲಿದ್ದೀರಿ. ಅದೃಷ್ಟದ ಚಿಹ್ನೆ: ಗುಲಾಬಿ
11/ 12
ಕುಂಭ: ನಿಮಗೆ ಇಂದು ಸರ್ಪ್ರೈಸ್ ಕಾದಿರಬಹುದು. ಆದರೆ ಸ್ವಲ್ಪ ಬೇಸರ ಸಹ ಈ ದಿನ ಆಗಲಿದೆ. ಬೇರೆಯವರ ಬಗ್ಗೆ ಚಿಂತೆ ಬಿಡಿ. ನಿಮಗಾಗಿ ಈ ದಿನ ಮೀಸಲಿಡಿ ಸಾಕು. ಅದೃಷ್ಟದ ಚಿಹ್ನೆ: ಕನ್ನಡಿ
12/ 12
ಮೀನ: ಸಾವಿರಾರು ಜನರ ಮಧ್ಯೆ ನೀವೂಬ್ಬರಾಗಿ ಬದುಕಬೇಡಿ. ನೀವೇ ಡಿಫರೆಂಟ್ ಎಂಬುದನ್ನ ತೋರಿಸಿ. ಜೀವನದಲ್ಲಿ ಅವಕಾಶಗಳು ಪದೇ ಪದೇ ಸಿಗುವುದಿಲ್ಲ, ಸಿಕ್ಕ ಅವಕಾಶ ಬಿಡಬೇಡಿ. ಅದೃಷ್ಟದ ಚಿಹ್ನೆ: ಬ್ರಷ್