Daily Horoscope: ಸಣ್ಣ ವಿಷಯದಲ್ಲೂ ಖುಷಿ ಸಿಗುವ ಸಮಯ ಇದು, ಈ ದಿನ ನಿಮ್ಮಿಷ್ಟದಂತೆ ಬದುಕಿ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ ರಾಶಿ : ನೀವು ವಿದೇಶಕ್ಕೆ ಹೋಗಲು ಪ್ಲ್ಯಾನ್ ಮಾಡುತ್ತಿದ್ದರೆ ಈಗ ಒಳ್ಳೆಯ ಸಮಯ ಎನ್ನಬಹುದು. ಈ ದಿನ ಅವಕಾಶಗಳು ಸ್ವಲ್ಪ ಕಡಿಮೆ ಆಗಬಹುದು. ನಿಮ್ಮ ಅಗತ್ಯಗಳತ್ತ ಗಮನ ಕೊಡುವುದು ಬಹಳ ಅನಿವಾರ್ಯವಾಗುತ್ತದೆ. ಅದೃಷ್ಟ ಚಿಹ್ನೆ - ಮಾರ್ಬಲ್ ಟೇಬಲ್
2/ 12
ವೃಷಭ: ಜೀವನದ ಕೆಲ ಅವಕಾಶಗಳು ಬದಲಾಗುತ್ತಿದೆ. ಹಿಂದಿನ ತಪ್ಪುಗಳು ಈಗ ಅರ್ಥವಾಗುತ್ತಿದೆ. ಹೊಸ ಹೆಜ್ಜೆಯತ್ತ ನಿಮ್ಮ ಗಮನ ಇರಲಿ. ಸ್ವಲ್ಪ ಸಮಯದವರೆಗೆ ಇತರರಿಗೆ ಸಾಲ ನೀಡುವುದನ್ನು ತಪ್ಪಿಸಿ. ಅದೃಷ್ಟದ ಚಿಹ್ನೆ - ಜೇಡ್ ಸಸ್ಯ
3/ 12
ಮಿಥುನ: ನಿಮ್ಮ ಉತ್ತಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಇದು ಸೂಕ್ತವಾದ ಸಮಯ, ಇಂದು ನಿಮ್ಮ ಆದ್ಯತೆಗಳನ್ನು ಗಮನಿಸಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಇಂದು ಪೂರ್ಣವಾಗುತ್ತದೆ. . ಅದೃಷ್ಟದ ಚಿಹ್ನೆ - ಸಮುದ್ರ
4/ 12
ಕಟಕ: ನೀವು ಸಾಮಾನ್ಯ ವಿಷಯಗಳಲ್ಲಿ ಸಂತೋಷ ಹುಡುಕಿಕೊಳ್ಳುತ್ತೀರಿ. ಪ್ರತಿಷ್ಠಿತ ಸಂಸ್ಥೆಯಲ್ಲಿ ಅವಕಾಶಕ್ಕಾಗಿ ಕಾದಿದ್ದರೆ, ನಿಮಗೆ ಫಲ ಸಿಗಲಿದೆ. ನೀವು ಎರಡನೇ ಮೂಲದಿಂದ ಆದಾಯವನ್ನು ಗಳಿಸುವ ಬಗ್ಗೆ ಯೋಚಿಸಬಹುದು. ಅದೃಷ್ಟದ ಚಿಹ್ನೆ – ನೀರು
5/ 12
ಸಿಂಹ: ನಿಮ್ಮ ಸ್ಥಾನ ಮತ್ತು ಅಧಿಕಾರದ ಲಾಭ ಪಡೆಯಲು ಯಾರಾದರೂ ಪ್ರಯತ್ನಿಸಬಹುದು. ನೀವು ಎಚ್ಚರವಾಗಿರಬೇಕು. ವಾದ ಮಾಡುವಾಗ ಆ ವಿಷಯದ ಮೇಲೆ ಗಮನ ಇರಬೇಕು. ನೀವು ಸದ್ಯಕ್ಕೆ ಜೀವನದಲ್ಲಿ ದೊಡ್ಡ ಅಥವಾ ಚಿಕ್ಕ ಬದಲಾವಣೆಯನ್ನು ಮಾಡುವುದು ಅಗತ್ಯ ಅದೃಷ್ಟದ ಚಿಹ್ನೆ – ಬಾಟಲ್
6/ 12
ಕನ್ಯಾ: ನಿಮ್ಮ ದಿನಚರಿಯಲ್ಲಿ ನೀವು ಯೋಚಿಸುತ್ತಿರುವ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಇದು ಉತ್ತಮ ದಿನವಾಗಿದೆ. ನಿಮ್ಮ ಕಛೇರಿಯಲ್ಲಿ ಸ್ವಲ್ಪ ಕಿರಿಕಿರಿಯಾದರೂ ಅದನ್ನು ನಿಭಾಯಿಸಿಕೊಂಡು ಹೋಗಿ. ಅಕ್ಕಪಕ್ಕದ ವಸ್ತುಗಳಿಂದ ಎಚ್ಚರವಿರುವುದು ಉತ್ತಮ. ಅದೃಷ್ಟದ ಚಿಹ್ನೆ – ಪಚ್ಚೆ
7/ 12
ತುಲಾ: ನೀವು ನಿಮ್ಮನ್ನು ಧೈರ್ಯಶಾಲಿ ಎಂದು ಪರಿಗಣಿಸಬಹುದು. ಯಾವುದೇ ಸವಾಲು ಬಂದರೂ ಸಹ ಅದನ್ನು ಎದುರಿಸುವ ಶಕ್ತಿ ಇರಬೇಕು. ಕುಟುಂಬದವರಿಗೆ ನಿಮ್ಮ ಬೆಂಬಲ ಬೇಕಾಗಬಹುದು. ಕೆಲಸದಲ್ಲಿನ ಸಮಸ್ಯೆಗಳು ಒಂದೊಂದಾಗಿ ಬಗೆಹರಿಯುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ - ಸ್ಫಟಿಕ ಶಿಲೆ
8/ 12
ವೃಶ್ಚಿಕ: ನೀವು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ದಿನ ಇದು. ನಿಮ್ಮ ಸಂಗಾತಿಯು ನಿಮ್ಮನ್ನು ಬೆಂಬಲಿಸಬಹುದು. ನಿಮಗೆ ಕೆಲವು ಉಪಯುಕ್ತ ಸಲಹೆಗಳನ್ನು ನೀಡಬಹುದು. ಅದೃಷ್ಟ ಚಿಹ್ನೆ- ನೀಲಿ ಹರಳು
9/ 12
ಧನಸ್ಸು: ಅದೃಷ್ಟ ನಿಮ್ಮ ಬಳಿಗೆ ಬರಲಿದೆ. ನೀವು ಬಯಸಿದ ದಿಕ್ಕಿನಲ್ಲಿ ಇದು ಮೊದಲ ಹೆಜ್ಜೆಯಾಗಿರಬಹುದು. ಸಣ್ಣದೊಂದು ಅಪಾಯ ಬಂದರೂ ಹಿಂದೆ ಸರಿಯಬೇಡಿ. ಅದೃಷ್ಟದ ಚಿಹ್ನೆ - ಪೈರೈಟ್ ಕ್ರಿಸ್ಟಲ್
10/ 12
ಮಕರ: ಅನಾವಶ್ಯಕ ಒತ್ತಡ ಮತ್ತು ಗೊಂದಲಗಳಿಂದ ಕೆಲಸ ವಿಳಂಬವಾಗಬಹುದು. ನೀವು ಯಾವಾಗಲೂ ನೀವು ನಿರೀಕ್ಷಿಸುವುದಕ್ಕಿಂತ ಹೆಚ್ಚಿನ ಲಾಭ ಪಡೆಯಲಿದ್ದೀರಿ. ವ್ಯಕ್ತಿ ಅಥವಾ ಯಾವುದೇ ಯೋಚನೆಯ ಬಗ್ಗೆ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರುವುದು ಒಳ್ಳೆಯದಲ್ಲ.ಅದೃಷ್ಟದ ಚಿಹ್ನೆ - ನೀಲಮಣಿ
11/ 12
ಕುಂಭ: ನೀವು ಇತರರನ್ನು ನಂಬುವ ವಿಷಯದಲ್ಲಿ ಭಾವನಾತ್ಮಕವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಎದುರಿಸುವ ಸಮಯ ಇದು, ಇಂದು ಹೆಚ್ಚುವರಿ ಆಯಾಸ ಉಂಟಾಗಬಹುದು. ಅದೃಷ್ಟದ ಚಿಹ್ನೆ - ಗುಲಾಬಿ ಸ್ಫಟಿಕ ಶಿಲೆ
12/ 12
ಮೀನ: ಇಂದು ಸಾಧಕ-ಬಾಧಕಗಳ ದಿನವಾಗಿರುತ್ತದೆ. ಸೋಮಾರಿತನದಿಂದ ಅವಕಾಶ ಕಳೆದುಕೊಳ್ಳಬೇಡಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿರೋಧಿಗಳೊಂದಿಗೆ ವಾದ ಮಾಡಬೇಡಿ. ಬೆಂಕಿ ಮತ್ತು ನೀರಿನಿಂದ ದೂರವಿರಿ. ಉದ್ಯೋಗದಲ್ಲಿ ಬಡ್ತಿ ದೊರೆಯಬಹುದು. ಅದೃಷ್ಟದ ಚಿಹ್ನೆ: ಗ್ಲಾಸ್