Daily Horoscope: ನಿಮ್ಮ ಇನ್ನೊಂದು ಮುಖವನ್ನು ಜನ ನೋಡುವ ದಿನ, ಮಿಥುನ ರಾಶಿಯವರು ಹುಷಾರ್
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಈ ದಿನ ನಿಮಗೆ ಯಾವುದೋ ಕೊರತೆ ಕಾಡಬಹುದು. ಜೀವನದಲ್ಲಿ ಕಳೆದು ಹೋದ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಡಿ. ನಿಮ್ಮ ವೃತ್ತಿಯ ಬಗ್ಗೆ ಗಮನ ಕೊಡಿ. ಅವಮಾನಿಸಿದ ವ್ಯಕ್ತಿಗಳಿಂದ ಗೌರವ ಪಡೆಯುವಂತಹ ಕಾಲ ಇದು. ಅದೃಷ್ಟದ ಚಿಹ್ನೆ: ನೀರು
2/ 12
ವೃಷಭ: ಶಕ್ತಿಗಳು ಇಂದು ನಿಮ್ಮ ಪರವಾಗಿರುವಂತೆ ಅನಿಸುತ್ತದೆ. ಇದು ನೀವು ಕೆಲವು ಹೊಸ ಕೆಲಸಗಳನ್ನು ಪ್ರಾರಂಭಿಸಬಹುದು. ಯಾರಾದರೂ ಸಾಲವನ್ನು ಕೇಳಿದರೆ, ನೀವು ನಯವಾಗಿ ನಿರಾಕರಿಸಿ. ಸ್ವಯಂ ಆರೈಕೆಗೆ ನಿಮ್ಮ ಸಮಯ ಮೀಸಲಿಡುವುದು ಉತ್ತಮ. ಅದೃಷ್ಟದ ಚಿಹ್ನೆ – ಗರಿ
3/ 12
ಮಿಥುನ: ಇಂದು ನಿಮ್ಮ ಇನ್ನೊಂದು ಮುಖವನ್ನು ಇತರರು ನೋಡುತ್ತಾರೆ. ನಿಮ್ಮ ಶಕ್ತಿಯನ್ನು ತೋರಿಸುವ ಸಮಯ ಇದು. ಕೆಲಸವನ್ನು ಪೂರ್ಣಗೊಳಿಸಲು ಕೆಲವು ತಂತ್ರಗಳ ಅಗತ್ಯವಿದೆ. ಸಹೋದ್ಯೋಗಿ ನಿಜವಾದ ಅಗತ್ಯಗಳಿಗಾಗಿ ಸಹಾಯವನ್ನು ಪಡೆಯಬಹುದು. ಅದೃಷ್ಟದ ಚಿಹ್ನೆ – ನದಿತೀರ
4/ 12
ಕಟಕ: ಹಳೆಯ ಪರಿಚಯಸ್ಥರನ್ನು ಭೇಟಿಯಾಗುವ ಅಥವಾ ಮರುಸಂಪರ್ಕಿಸುವ ಸಾಧ್ಯತೆಯಿದೆ. ಹೊರಗೆ ಹೋಗದಿರುವುದು ಉತ್ತಮ. ಪ್ರಯಾಣ ಕೈಗೊಳ್ಳಲು ಇದು ಉತ್ತಮವಾದ ಸಮಯ. ಅದೃಷ್ಟದ ಚಿಹ್ನೆ - ಹಳೆಯ ಕಾಗದ
5/ 12
ಸಿಂಹ: ಅತಿಥಿಗಳು ಅನಿರೀಕ್ಷಿತವಾಗಿ ಬರಬಹುದು. ಕೆಲವು ಬಾಕಿ ಇರುವ ಕೆಲಸಗಳನ್ನು ಇಂದು ಪೂರ್ಣಗೊಳಿಸಬೇಕು. ನಿಮ್ಮ ಆಫೀಸ್ ಸಿಬ್ಬಂದಿ ಯಾವುದೇ ಸಮಸ್ಯೆಯನ್ನು ನಿಮ್ಮ ಗಮನಕ್ಕೆ ತರಬಹುದು, ಆದ್ಯತೆಯ ಮೇರೆಗೆ ಸರಿಪಡಿಸಿ. ಅದೃಷ್ಟದ ಚಿಹ್ನೆ – ಮುತ್ತುಗಳು
6/ 12
ಕನ್ಯಾ: ಆಫೀಸ್ನಲ್ಲಿ ಸಂತೋಷದ ವಾತಾವರಣ ಇರಲಿದೆ. ಯಾವುದೇ ಚಿಂತೆ ಈ ದಿನ ಕಾಡುವುದಿಲ್ಲ. ನೀವು ನಿದ್ರಾಹೀನತೆಯಿಂದ ಬಳಲಬಹುದು. ಇಂದು ರಾತ್ರಿ ನೀವು ಸ್ವಲ್ಪ ಉತ್ತಮ ಮಟ್ಟದ ನಿದ್ರೆ ಮಾಡುವುದು ತುಂಬಾ ಮುಖ್ಯ. ಅದೃಷ್ಟ ಚಿಹ್ನೆ: ಎಲೆ
7/ 12
ತುಲಾ: ಭಾವೋದ್ವೇಗಕ್ಕೆ ಒಳಗಾಗುವುದು ದುರ್ಬಲ ಎಂದು ಅರ್ಥವಲ್ಲ. ಆದರೆ ನೀವು ಎಷ್ಟು ಸ್ಟ್ರಾಂಗ್ ಎಂದು ತಿಳಿಸಿಕೊಡಿ. ಹೊಸ ಪಾಕವಿಧಾನವನ್ನು ಪ್ರಯತ್ನಿಸಲು ಹಾಗೂ ಕೆಲವು ಹೊಸ ಸಂಬಂಧಗಳನ್ನು ಮುಂದುವರೆಸಲು ಇದು ಉತ್ತಮ ದಿನವಾಗಿದೆ. ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಗಮನ ಬೇಕು. ಅದೃಷ್ಟ ಚಿಹ್ನೆ- ಕೆಂಪು ಬಟ್ಟೆ.
8/ 12
ವೃಶ್ಚಿಕ ರಾಶಿ : ಕೆಟ್ಟ ಕನಸುಗಳು ಇಂದು ನಿಮ್ಮನ್ನ ಕಾಡಬಹುದು, ಆದರೆ ಅವುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಇಂದು ಸಂಗಾತಿಯ ಜೊತೆ ಹೊರ ಹೋಗಲು ಉತ್ತಮವಾದ ಸಮಯ ಎನ್ನಬಹುದು. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಮೂಲಕ ಖುಷಿಯಾಗಿರಿ. ಅದೃಷ್ಟದ ಚಿಹ್ನೆ - ಇಟ್ಟಿಗೆ ಗೋಡೆ
9/ 12
ಧನು ರಾಶಿ : ಒಬ್ಬ ಹತ್ತಿರದ ವ್ಯಕ್ತಿ ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು. ಈ ದಿನ ವಿಶೇಷವಾಗಿ ನಿಮ್ಮ ಪ್ರೀತಿಪಾತ್ರರಿಗೆ ಸಮಯವನ್ನು ಮೀಸಲಿಡಿ. ತಿಂಗಳ ಕೊನೆಯಲ್ಲಿ ಪ್ರವಾಸಕ್ಕೆ ಹೋಗುವ ಸೂಚನೆಗಳಿವೆ. ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಅದೃಷ್ಟದ ಚಿಹ್ನೆ – ಕೋಲು
10/ 12
ಮಕರ: ಹಳೆಯ ನೆನಪುಗಳು ಈ ದಿನವನ್ನು ಆಳುವ ಸಾಧ್ಯತೆಯಿದೆ. ಅರಿವು ಆಗಬಹುದು. ನಿಮ್ಮ ಒಡಹುಟ್ಟಿದವರ ಮೇಲೆ ನಿಗಾ ಇರಿಸಿ, ಅವರು ನಿಮ್ಮ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸಬಹುದು. ಅದೃಷ್ಟದ ಚಿಹ್ನೆ - ಗಾಜಿನ ಬಾಟಲಿ
11/ 12
ಕುಂಭ: ನಿಮ್ಮ ಭಯ ಈಗ ನಿಯಂತ್ರಣದಲ್ಲಿದೆ. ಕಾಲ ಬದಲಾದಂತೆ ಕೆಟ್ಟ ಕನಸುಗಳಿರುವುದಿಲ್ಲ. ಇತ್ತೀಚಿನ ತಿಂಗಳುಗಳಲ್ಲಿ ನೀವು ಉತ್ತಮ ಸಾಧನೆ ಮಾಡಿದ್ದೀರಿ. ಹೆಚ್ಚು ಜವಾಬ್ದಾರಿ ಹೆಗಲೇರುವ ಸಾಧ್ಯತೆಯಿದೆ. ಅದೃಷ್ಟದ ಚಿಹ್ನೆ- ಆಲದ ಮರ
12/ 12
ಮೀನ: ನಿಮ್ಮ ಕುಟುಂಬದಲ್ಲಿ ನಿಮ್ಮ ಸಲಹೆ ಬಹಳ ಅಗತ್ಯವಾಗುತ್ತದೆ. ಅವರಿಗೆ ನಿಮ್ಮಿಂದ ಹೆಚ್ಚಿನ ಸಮಯ ಬೇಕು. ಹೊಸ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಹಿರಿಯ ಹುದ್ದೆಯಲ್ಲಿ ಇರುವವರು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅದೃಷ್ಟದ ಚಿಹ್ನೆ - ಪಕ್ಷಿಗಳು