Daily Horoscope: ಬಾಕಿ ಇರುವ ಕೆಲಸ ಇಂದು ಮುಗಿಸಿ, ಸರ್ಪ್ರೈಸ್ ನಿಮಗಾಗಿ ಕಾದಿದೆ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಕೆಲಸ ಮಾಡಲು ಇಂದು ಆಸಕ್ತಿ ಕಡಿಮೆ ಇರುತ್ತದೆ. ಅನಗತ್ಯವಾಗಿ ಕೆಲಸ ಮುಂದೂಡಲು ಇದು ಕಾರಣವಾಗಬಹುದು. ನಿಮ್ಮ ಆತಂಕವನ್ನು ಶಾಂತಗೊಳಿಸಲು ನೀವು ಚಿಕಿತ್ಸೆ ಪಡೆಯುವುದು ಬಹಳ ಅಗತ್ಯ. ಅದೃಷ್ಟದ ಚಿಹ್ನೆ- ಆಲ್ಬಮ್
2/ 12
ವೃಷಭ: ನಿಮ್ಮ ಸಂಗಾತಿಗೆ ಇಂದು ಹೆಚ್ಚಿನ ಸಮಯ ಮೀಸಲಿಡುವ ಅಗತ್ಯವಿದೆ. ಕೆಲವೊಂದು ಕೆಲಸಗಳು ನಿಧಾನವಾಗಿ ಸಾಗುತ್ತದೆ. ಆದರೂ ಚಿಂತೆ ಬೇಡ.ಕೆಲವರಿಂದ ಅಂತರ ಕಾಪಾಡಿಕೊಂಡರೆ ಉತ್ತಮ. ಅದೃಷ್ಟದ ಚಿಹ್ನೆ - ಹಳೆಯ ಮೋಟರ್ ಸೈಕಲ್
3/ 12
ಮಿಥುನ: ನಿಮ್ಮ ಜವಾಬ್ದಾರಿಯನ್ನು ಹಂಚಿಕೊಳ್ಳಲು ಹೊಸ ವ್ಯಕ್ತಿ ನಿಮ್ಮ ಜೀವನದಲ್ಲಿ ಬರಬಹುದು. ನಿಮ್ಮ ಬೆಳವಣಿಗೆಗೆ ಇದು ಒಳ್ಳೆಯ ಸುದ್ದಿ. ಬಾಕಿ ಇರುವ ಕೆಲಸಗಳನ್ನು ಈಗಲೇ ಮುಗಿಸಲು ಪ್ರಯತ್ನಿಸಿ. ಅದೃಷ್ಟದ ಚಿಹ್ನೆ -ಸರಪಳಿ
4/ 12
ಕಟಕ: ಎಷ್ಟೇ ಬ್ಯುಸಿ ಇದ್ದರೂ ಸಹ ನಿಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಮರೆಯದಿರಿ. ಇದು ನಿಮಗೆ ಮುಂದಿನ ದಿನಗಳಲ್ಲಿ ಸಹಾಯವಾಗುತ್ತದೆ. ಕ್ರೀಡಾ ಚಟುವಟಿಕೆಯಲ್ಲಿ ಆಸಕ್ತಿ ಮೂಡುತ್ತದೆ. ನಾಯಕತ್ವದ ಅವಕಾಶ ಶೀಘ್ರದಲ್ಲೇ ಬರಲಿದೆ. ಅದೃಷ್ಟದ ಚಿಹ್ನೆ - ಮುತ್ತು
5/ 12
ಸಿಂಹ: ನೀವು ಯಾರಿಗಾದರೂ ಬೇಸರ ಮಾಡಿದ್ರೆ ಅವರ ಕ್ಷಮೆ ಇಂದೇ ಕೇಳಿ. ಏಕೆಂದರೆ ರಾಜಿ ಮಾಡಿಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ. ಹಳೆಯ ಸ್ನೇಹಿತರ ಭೇಟಿಯಾಗಬಹುದು. ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ಅದೃಷ್ಟದ ಚಿಹ್ನೆ - ಮಳೆಬಿಲ್ಲು
6/ 12
ಕನ್ಯಾ: ಮುಂದೆ ಬರಲಿರುವ ಸವಾಲುಗಳಿಗೆ ನಿಮ್ಮ ಮನಸ್ಸನ್ನು ಸಿದ್ಧಗೊಳಿಸಿ. ವಿದೇಶದಿಂದ ಬರುವ ಒಂದು ಸುಂದರ ಅವಕಾಶ ಲಾಭ ನೀಡಲಿದೆ. ಒಂಟಿಯಾಗಿ ಸ್ವಲ್ಪ ಸಮಯ ಕಳೆಯಿರಿ. ಅದೃಷ್ಟದ ಚಿಹ್ನೆ - ಕಾಫಿ ಶಾಪ್
7/ 12
ತುಲಾ: ಇಂದು ಮನೆಯಲ್ಲಿ ಸ್ವಲ್ಪ ಗಲಾಟೆ ಆಗಬಹುದು, ಹಿರಿಯರ ಮಾತು ಕೇಳಿ. ಜಾಸ್ತಿ ಜವಾಬ್ದಾರಿ ತೆಗೆದುಕೊಳ್ಳಲು ಹೋಗಬೇಡಿ. ನಿಮಗಾಗಿ ಸಮಯ ಮೀಸಲಿಡಿ. ಅದೃಷ್ಟದ ಚಿಹ್ನೆ - ಗಾಜಿನ ಜಗ್
8/ 12
ವೃಶ್ಚಿಕ: ಈಗ ಕೆಲಸದಲ್ಲಿ ನಡೆಯುತ್ತಿರುವ ಗೊಂದಲದ ಬಗ್ಗೆ ನಿಮ್ಮ ಗಮನವಿರಲಿ. ಈಗ ನೀವು ಮಾಡುವ ನಿರ್ಧಾರ ಮುಂದಿನ ದಿನಗಳಲ್ಲಿ ಲಾಭ ನೀಡಲಿದೆ. ರೊಮ್ಯಾಂಟಿಕ್ ದಿನ ಇದು. ಅದೃಷ್ಟದ ಚಿಹ್ನೆ - ಬ್ಯಾಟರಿ
9/ 12
ಧನುಸ್ಸು: ಇಂದು ಒಳ್ಳೆಯ ಸುದ್ದಿ ಕೇಳಲಿದ್ದೀರಿ, ಈ ದಿನ ಸಡನ್ ಆಗಿ ಹಲವು ಕೆಲಸಗಳು ಆಗುವ ಸಾಧ್ಯತೆ ಇದೆ. Go with a flow ಅಷ್ಟೇ. ಇಂದು ಸ್ನೇಹಿತರ ಜೊತೆ ಹೆಚ್ಚು ಸಮಯ ಕಳೆಯುವ ಸಾಧ್ಯತೆ. ಅದೃಷ್ಟದ ಚಿಹ್ನೆ: ಕಾದಂಬರಿ
10/ 12
ಮಕರ: ಹೊಸ ಪಾಲುದಾರಿಕೆ ವ್ಯವಹಾರದ ಆಫರ್ ಬರಬಹುದು. ನಿಮ್ಮ ಗುರಿ ತಲುಪಲು ಇದು ಸಹಾಯ ಮಾಡುತ್ತದೆ. ಸ್ವಲ್ಪ ಪುಸ್ತಕ ಓದುವ ಕಡೆ ಗಮನಕೊಡಿ. ಅದೃಷ್ಟದ ಚಿಹ್ನೆ - ತಾಮ್ರದ ಪಾತ್ರೆ
11/ 12
ಕುಂಭ: ಸಲಹೆಗಳನ್ನು ಪಡೆದು ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಎನ್ನಬಹುದು. ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಕೆಲಸ ಮಾಡಿ. ಯಾರನ್ನೂ ನಂಬಲೂ ಹೋಗಬೇಡಿ. ಅದೃಷ್ಟದ ಚಿಹ್ನೆ - ಬೌಲ್
12/ 12
ಮೀನ: ಸ್ನೇಹಿತರೊಬ್ಬರಿಗೆ ಅವರ ಕುಟುಂಬದ ವಿಷಯಗಳಲ್ಲಿ ಸಹಾಯ ಬೇಕಾಗಬಹುದು. ನಿಮ್ಮಿಂದ ಒಬ್ಬರ ಜೀವ ಇಂದು ಉಳಿಯಲಿದೆ. ನಿಮ್ಮ ಸಹೋದ್ಯೋಗಿಗಳನ್ನು ಹೆಚ್ಚು ಟೀಕಿಸಬೇಡಿ. ಅದೃಷ್ಟದ ಚಿಹ್ನೆ - ಸ್ಫಟಿಕ