Daily Horoscope: ಗೊಂದಲಗಳು ನಿವಾರಣೆಯಾಗುವ ಸಮಯ ಇದು, ಈ ದಿನ ಅದೃಷ್ಟವಂತೆ!
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಬೇರೆ ದಿನಗಳಿಗಿಂತ ಭಿನ್ನವಾಗಿ, ಇಂದು ಸ್ವಲ್ಪ ಮಂದ ದಿನವಾಗಿರಬಹುದು. ನೀವು ಆಲಸ್ಯವನ್ನು ಅನುಭವಿಸಬಹುದು, ಆದರೆ ಮಧ್ಯಾಹ್ನದ ವೇಳೆಗೆ ಅದೃಷ್ಟ ಬೇರೆ ರೀತಿಯಲ್ಲಿ ತಿರುಗಬಹುದು. ಪೂರ್ವಸಿದ್ಧತೆಯಿಲ್ಲದ ಕೆಲಸ ಗೊಂದಲವನ್ನು ಹೆಚ್ಚಿಸಬಹುದು. ಅದೃಷ್ಟದ ಚಿಹ್ನೆ - ನೀಲಿ ಕಲ್ಲು
2/ 12
ವೃಷಭ: ನಿಮ್ಮ ವೈಯಕ್ತಿಕ ಕೌಶಲ್ಯಗಳಿಗೆ ಇದು ಉತ್ತಮವಾದ ದಿನವಾಗಿದೆ. ಹೊಸ ಯೋಜನೆಯಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಬಹುದು. ಆಪ್ತ ಸ್ನೇಹಿತರಿಗೆ ಒಂದು ರಹಸ್ಯವಾದ ಸಂದೇಶವನ್ನು ರವಾನಿಸಲು ನಿಮ್ಮ ಸಹಾಯ ಬೇಕಾಗಬಹುದು. ಯಾರಿಗಾದರೂ ಸಹಾಯ ಮಾಡುವ ದಿನವಿದು. ಅದೃಷ್ಟದ ಚಿಹ್ನೆ - ಕಿರೀಟ
3/ 12
ಮಿಥುನ: ನಿಮ್ಮ ಸುತ್ತಲಿನ ನಾಟಕ ನಿಮ್ಮ ಶಾಂತಿಯನ್ನು ಕಸಿದುಕೊಳ್ಳಬಹುದು. ಹೃದಯವಂತ ವ್ಯಕ್ತಿಯೊಬ್ಬರು ರಕ್ಷಣೆಗಾಗಿ ಬರುತ್ತಾರೆ. ಯಾವುದೇ ತಪ್ಪು ಮಾತು ಆಡದಂತೆ ಎಚ್ಚರಿಕೆ ವಹಿಸಿ. ಅನುಕೂಲಕರ ದಿನ. ಅದೃಷ್ಟದ ಚಿಹ್ನೆ - ಕಡ್ಡಿ
4/ 12
ಕಟಕ: ನಿಮ್ಮ ರಹಸ್ಯವನ್ನು ಇಂದು ಸ್ನೇಹಿತರಿಗೆ ಹೇಳುವ ದಿನ. ಬಹಳ ಸಮಯದಿಂದ ನಿಮ್ಮ ಮನಸ್ಸಿನಲ್ಲಿ ಉಳಿದಿದ್ದ ಯಾವುದೋ ವಿಚಾರ ಇಂದು ಪರಿಹಾರವಾಗುತ್ತದೆ. ನೀವು ಸ್ವಲ್ಪ ವಿಭಿನ್ನವಾಗಿ ವಿಷಯಗಳನ್ನು ನೋಡಲು ಪ್ರಾರಂಭಿಸಬೇಕಾಗಬಹುದು. ಅದೃಷ್ಟದ ಚಿಹ್ನೆ – ದೇವರ ಮೂರ್ತಿ
5/ 12
ಸಿಂಹ: ನಿಮ್ಮ ಆಕ್ರಮಣಶೀಲತೆಯನ್ನು ನೀವು ಬಿಟ್ಟರೆ ನಿಮಗೆ ಉತ್ತಮ ಅವಕಾಶ ಸಿಗುತ್ತದೆ. ನಿಮ್ಮ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವುದರ ಬೆಲೆಯನ್ನು ತೆರುವವರು ನೀವೇ. ವ್ಯಾಯಾಮ ಅಥವಾ ಧ್ಯಾನವನ್ನು ಮಾಡಿ. ಅದೃಷ್ಟದ ಚಿಹ್ನೆ - ರೇಷ್ಮೆ ಬೆಲ್ಟ್
6/ 12
ಕನ್ಯಾ: ರಿಸ್ಕ್ ತೆಗೆದುಕೊಳ್ಳಲು ಇದು ಸೂಕ್ತವಾದ ದಿನ. ನೀವು ಶೀಘ್ರದಲ್ಲೇ ಹೊಸ ಪರಿಸರಕ್ಕೆ ಒಗ್ಗಿಕೊಳ್ಳಬೇಕಾಗಬಹುದು. ಮನೆ ಅಥವಾ ಕಚೇರಿಯನ್ನು ಸ್ಥಳಾಂತರಿಸಲು ಯೋಜಿಸುತ್ತಿದ್ದರೆ, ಅದಕ್ಕೆ ಉತ್ತಮವಾದ ದಿನ ಇದು. ಅದೃಷ್ಟದ ಚಿಹ್ನೆ - ಮೈಲಿಗಲ್ಲು
7/ 12
ತುಲಾ: ಈ ದಿನ ನೀವು ಕೊನೆಯ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿಭಾಯಿಸಿರುವಿರಿ, ವಿರಾಮ ತೆಗೆದುಕೊಂಡು ಮುಂದೆ ಯೋಜಿಸುವುದು ಉತ್ತಮ. ಕೆಲ ವಿಚಾರಗಳು ನಿಮ್ಮ ಮನಸ್ಸನ್ನು ಆಕರ್ಷಿಸುತ್ತವೆ. ಇಂದು ಆರ್ಥಿಕವಾಗಿ ಲಾಭ ಆಗಲಿದೆ. ಅದೃಷ್ಟದ ಚಿಹ್ನೆ: ಪೆನ್
8/ 12
ವೃಶ್ಚಿಕ: ನಿಮ್ಮ ಮಕ್ಕಳು ಇಂದು ಉತ್ತಮ ಸಾಧನೆ ಮಾಡಬಹುದು. ಅವರಿಗೆ ನಿಮ್ಮ ಸಮಯ ಮತ್ತು ಗಮನ ಅಗತ್ಯವಿರುವಂತೆ. ಹಿಂದೆ ಮಾಡಿದ ಹೂಡಿಕೆಯು ಲಾಭ ನೀಡಲಿದೆ. ಅದೃಷ್ಟದ ಚಿಹ್ನೆ - ಕೆಂಪು ರಿಬ್ಬನ್
9/ 12
ಧನುಸ್ಸು: ಬಹಳ ಹಿಂದೆಯೇ ನಿಮ್ಮಿಂದ ಸಾಲ ಪಡೆದ ವ್ಯಕ್ತಿ ಇಂದು ವಾಪಾಸ್ ನೀಡಬಹುದು. ಇಂದು ಕೆಲ ವಿಚಾರವಾಗಿ ಧೈರ್ಯದಿಂದ ಕೆಲಸ ಮಾಡಬೇಕಾಗುತ್ತದೆ. ನಿಮಗಾಗಿ ಇಂದು ಕೆಲವರು ಸಹಾಯ ಮಾಡಲಿದ್ದಾರೆ. ಅದೃಷ್ಟದ ಚಿಹ್ನೆ - ಟೋಪಿ
10/ 12
ಮಕರ: ಕೆಲ ವಿಚಾರಗಳಲ್ಲಿ ನೀವು ಹಿಂದೆ ಉಳಿಯಬಹುದು ಮತ್ತು ನಿಮ್ಮ ಸಾಧನೆಗಳನ್ನು ಮಾಡಲು ಒಂದು ಹೆಜ್ಜೆ ಮುಂದಿಡುವ ಅಗತ್ಯವಿದೆ. ಇಂದು ಹೆಚ್ಚು ಲಾಭ ಆಗುವುದಿಲ್ಲ. ಅದೃಷ್ಟದ ಚಿಹ್ನೆ - ಟ್ರಾಲಿ
11/ 12
ಕುಂಭ: ನೀವು ಈಗ ಕೆಲವು ತಿಂಗಳ ಹಿಂದಿನ ಘಟನೆ ನಿಮಗೆ ನೆನಪಾಗಬಹುದು. ವಿದೇಶದಿಂದ ಬರುವ ವ್ಯಕ್ತಿ ನಿಮಗೆ ಅವಕಾಶವನ್ನು ತಂದುಕೊಡುವ ಸಾಧ್ಯತೆ ಇದೆ. ನೀವು ಹೂಡಿಕೆಗಳನ್ನು ಮಾಡಿದ್ದರೆ, ಈಗ ಲಾಭ ತೆಗೆದುಕೊಳ್ಳುವ ಸಮಯ. ಅದೃಷ್ಟದ ಚಿಹ್ನೆ - ನಕ್ಷತ್ರ
12/ 12
ಮೀನ: ಪ್ರಗತಿಯನ್ನು ನೀವು ಅನುಭವಿಸುವ ದಿನವಿದು. ನಿಮಗಾಗಿ ಅದೃಷ್ಟ ಕಾದು ಕುಳಿತಿರುವಂತೆ ಭಾಸವಾಗುತ್ತದೆ. ಸದ್ಯ ಕೆಲಸದ ಕಡೆ ಗಮನ ಕೊಡಿ, ಬ್ರೇಕ್ ತೆಗೆದುಕೊಳ್ಳಲು ಹೋಗಬೇಡಿ. ಅದೃಷ್ಟದ ಚಿಹ್ನೆ - ಸುಗಂಧ ಬಾಟಲ್