Daily Horoscope: ಗಾಳಿ ಸುದ್ದಿಗೆ ಬ್ರೇಕ್ ಹಾಕುವ ದಿನವಿದು, 12 ರಾಶಿಗಳ ಫಲಾಫಲ ಹೀಗಿದೆ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಆಫೀಸ್ನಲ್ಲಿ ನಿಮ್ಮ ಕೆಲಸವನ್ನು ಗುರುತಿಸುತ್ತಾರೆ. ಸ್ವಲ್ಪ ಮನೆಯ ನೆನಪಾಗಬಹುದು. ಹಾಗಾಗಿ ನಿಮ್ಮ ಊರಿಗೆ ಹೋಗಲು ಇದು ಸರಿಯಾದ ಸಮಯ. ಸ್ನೇಹಿತರ ಜೊತೆ ಹೊರ ಹೋಗಬಹುದು. ಅದೃಷ್ಟದ ಚಿಹ್ನೆ: ಕಲ್ಲು
2/ 12
ವೃಷಭ: ಈ ದಿನ ನಿಮಗೆ ಎಲ್ಲಾವೂ ಆರಾಮ ಎಂದು ಅನಿಸುತ್ತದೆ. ನಿಮ್ಮ ಸಂಗಾತಿಗೆ ಭಾವನಾತ್ಮಕವಾಗಿ ಬೆಂಬಲದ ಅಗತ್ಯವಿದೆ. ಅನಗತ್ಯವಾಗಿ ಸಮಯ ಹಾಳು ಮಾಡುವುದನ್ನ ತಡೆಯುವುದು ಉತ್ತಮ. ಅದೃಷ್ಟದ ಚಿಹ್ನೆ: ನೀಲಿ ಬಾಟಲಿ
3/ 12
ಮಿಥುನ: ಇತ್ತೀಚೆಗೆ ಹೋಗಿದ್ದ ಟ್ರಿಪ್ ಮತ್ತೆ ಪ್ಲ್ಯಾನ್ ಮಾಡಲು ಉತ್ತೇಜಿಸುತ್ತದೆ. ನಿಮಗೆ ಬಹಳ ಇಷ್ಟದ ಕೆಲಸವನ್ನು ಆರಂಭಿಸುವ ಸಾಧ್ಯತೆ ಇದೆ. ಹೊಸ ಸವಾಲು ಎದುರಾಗಬಹುದು. ಅದೃಷ್ಟದ ಚಿಹ್ನೆ: ಕಲರ್ ಪೇಪರ್
4/ 12
ಕಟಕ: ಹಳೆಯ ಘಟನೆಯೊಂದರ ಫಲ ಈಗ ನಿಮ್ಮನ್ನ ಹುಡುಕಿ ಬರಲಿದೆ. ನಿಮ್ಮ ಕೆಲಸಕ್ಕೆ ಹೆಚ್ಚಿನ ಸಮಯ ಮೀಸಲಿಡುವುದು ಮುಂದಿನ ದಿನಗಳಲ್ಲಿ ಲಾಭ ನೀಡುತ್ತದೆ. ಅದೃಷ್ಟದ ಚಿಹ್ನೆ: ಸ್ನ್ಯಾಕ್ಸ್
5/ 12
ಸಿಂಹ: ಇಂದು ಯಾರಿಗಾದರೂ ಸಹಾಯ ಮಾಡುವ ಅವಕಾಶ ಒದಗಿ ಬರಲಿದೆ. ಮನೆಯಲ್ಲಿ ವಾದ-ವಿವಾದಗಳಾದರೆ ಅದನ್ನು ಮರೆಯುವುದು ಉತ್ತಮ. ನಿಮ್ಮ ಮಕ್ಕಳು ನಿಮಗಾಗಿ ಏನಾದರೂ ಪ್ಲ್ಯಾನ್ ಮಾಡುತ್ತಾರೆ. ಅದೃಷ್ಟದ ಚಿಹ್ನೆ: ಡ್ರಾಯಿಂಗ್ ಶೀಟ್
6/ 12
ಕನ್ಯಾ: ತುಂಬಾ ಪ್ರಾಯೋಗಿಕವಾಗಿ ಯೋಚನೆ ಮಾಡುವುದು ಸಹ ನಿಮಗೆ ಸಮಸ್ಯೆ ಉಂಟು ಮಾಡುತ್ತದೆ. ನಿಮ್ಮ ವರ್ತನೆಯಿಂದ ಬೇರೆಯವರಿಗೆ ನೋವಾಗುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ಪ್ರಶಂಸೆ ವ್ಯಕ್ತವಾಗಲಿದೆ. ಅದೃಷ್ಟದ ಚಿಹ್ನೆ: ಹಣ್ಣಿನ ಬುಟ್ಟಿ
7/ 12
ತುಲಾ: ನಿಮಗೆ ಇಷ್ಟು ದಿನ ಕಾಡುತ್ತಿದ್ದ ಭಯವೊಂದು ಇಂದು ನಿವಾರಣೆ ಆಗುತ್ತದೆ. ನೀವು ಯಾರನ್ನು ಭೇಟಿಯಾಗಬಾರದು ಎಂದು ಬಯಸಿದ್ದೀರೋ ಅವರೇ ಕಣ್ಣ ಮುಂದೆ ಬರುವ ಸಾಧ್ಯತೆ ಇದೆ. ಚರ್ಮದ ಸಮಸ್ಯೆಗಳು ಕಾಡಬಹುದು. ಅದೃಷ್ಟದ ಚಿಹ್ನೆ: ಬಟ್ಟೆ
8/ 12
ವೃಶ್ಚಿಕ: ನಿಮ್ಮ ಬಗ್ಗೆ ಗಾಳಿ ಸುದ್ದಿಯೊಂದು ಹರಿದಾಡುತ್ತಿದ್ದು, ನಿಮ್ಮ ಆತ್ಮೀಯರಿಂದ ಈ ವಿಚಾರ ತಿಳಿಯುತ್ತದೆ. ಗೊಂದಲದಿಂದ ಕೂಡಿದ ಕೊನೆ ಕ್ಷಣದ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಬರಲಿದೆ. ಹೊಸ ಹೂಡಿಕೆ ಮಾಡಬಹುದು. ಅದೃಷ್ಟದ ಚಿಹ್ನೆ: ಗುಬ್ಬಿ
9/ 12
ಧನಸ್ಸು: ನಿಮ್ಮ ಹಳೆಯ ಸ್ನೇಹಿತರನ್ನು ಮತ್ತೆ ಭೇಟಿಯಾಗಲು ಇಂದು ಸೂಕ್ತವಾದ ದಿನ. ನಿಮ್ಮ ಹಳೆಯ ದಿನಗಳು ಇಂದು ಬಹಳ ಕಾಡಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅಗತ್ಯ. ಅದೃಷ್ಟದ ಚಿಹ್ನೆ: ಬುಕ್ ಶಾಪ್
10/ 12
ಮಕರ: ಈ ದಿನ ನಿಮಗೆ ಯಾವುದಕ್ಕೂ ಮೂಡ್ ಇರುವುದಿಲ್ಲ. ಆದರೂ ಸಹ ಬಹಳ ಮುಖ್ಯವಾದ ಕೆಲಸವನ್ನು ಇಂದು ಪೂರ್ಣಗೊಳಿಸಬೇಕಿದೆ. ಅದೃಷ್ಟದ ಚಿಹ್ನೆ: ನವಿಲು ಗರಿ
11/ 12
ಕುಂಭ: ಈ ದಿನ ನಿಮಗೆ ರಿಲ್ಯಾಕ್ಸ್ ಭಾವನೆ ನೀಡುತ್ತದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಲು ಇಂದು ಉತ್ತಮವಾದ ದಿನ. ಈ ದಿನ ಯಾರ ಬಳಿಯೂ ಸಾಲ ಕೇಳಲು ಹೋಗಬೇಡಿ. ಅದೃಷ್ಟದ ಚಿಹ್ನೆ: ಬಿದಿರಿನ ಗಿಡ
12/ 12
ಮೀನ: ನೀವು ಯಾವುದಾರೂ ಮುಖ್ಯವಾದ ವಿಚಾರಕ್ಕೆ ಕಾದಿದ್ದರೆ ನಿರಾಸೆ ಆಗುತ್ತದೆ. ಈ ಸಂದರ್ಭಕ್ಕೆ ನಿಮಗೆ ಯಾವುದು ಅಗತ್ಯ ಎಂಬುದನ್ನ ನೀವು ನಿರ್ಧಾರ ಮಾಡಬೇಕಿದೆ. ಒಂದು ಅನಿರೀಕ್ಷಿತ ಕರೆ ಮೂಡ್ ಬದಲಾಯಿಸಲಿದೆ. ಅದೃಷ್ಟದ ಚಿಹ್ನೆ: ಟ್ರಾಫಿಕ್ ಸಿಗ್ನಲ್