Daily Horoscope: ಅನಗತ್ಯವಾಗಿ ಯಾವುದೇ ವಿಚಾರಕ್ಕೆ ತಲೆ ಹಾಕಬೇಡಿ, ವಿದ್ಯಾರ್ಥಿಗಳಿಗೆ ಶುಭದಿನ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ನೀವು ಹಿಂದೆ ಬಹಳ ಹಿಂದೆ ಪರಿಶ್ರಮದಿಂದ ಮಾಡಿದ್ದ ಕೆಲಸವೊಂದು ಈಗ ಕೈ ಹಿಡಿಯಲಿದ್ದು, ಒಳ್ಳೆಯ ಲಾಭ ನೀಡಲಿದೆ ಎನ್ನಬಹುದು. ನಿಮ್ಮ ಪ್ರಮುಖವಾದ ಟಾಸ್ಕ್ವೊಂದನ್ನು ಮುಗಿಸಲು ಇಂದು ಕೊನೆಯ ದಿನ. ಒಂದು ಟ್ರಿಪ್ ಪ್ಲ್ಯಾನ್ ಮಾಡಬಹುದು. ಅದೃಷ್ಟದ ಚಿಹ್ನೆ: ಕಪ್ಪು ಸ್ಫಟಿಕ
2/ 12
ವೃಷಭ: ವಿಶೇಷ ವ್ಯಕ್ತಿಗಳ ಅದ್ಭುತ ಶಕ್ತಿಯೊಂದು ನಿಮಗೆ ಉತ್ತೇಜನ ನೀಡುತ್ತದೆ. ಬಹಳ ಹಿಂದೆ ಭೇಟಿ ಮಾಡಿದ್ದ ಗೆಳೆಯರೊಬ್ಬರು ಮತ್ತೆ ಭೇಟಿಯಾಗಿ ಲಾಭ ತರುತ್ತಾರೆ. ನಿಮಗಿರುವ ಸಂಪರ್ಕವನ್ನು ಸರಿಯಾಗಿ ಬಳಕೆ ಮಾಡುವುದು ಸಹಾಯ ಮಾಡುತ್ತದೆ. ಅದೃಷ್ಟದ ಚಿಹ್ನೆ: ಕ್ಲೇ ಬಾಕ್ಸ್
3/ 12
ಮಿಥುನ: ಈ ದಿನ ನಿಮಗೆ ಅದೃಷ್ಟ ಒಲಿದು ಬರಲಿದೆ. ಜಾಸ್ತಿ ಆಸೆ ಇಟ್ಟುಕೊಳ್ಳುವುದು ನಿಮಗೆ ಸಮಸ್ಯೆ ಉಂಟು ಮಾಡುತ್ತದೆ. ನೀವು ಯಾರಿಂದಲಾದರೂ ಹಣ ಪಡೆದುಕೊಂಡಿದ್ದರೆ ಈ ದಿನ ಸ್ವಲ್ಪ ಮುಜುಗರ ಉಂಟಾಗುತ್ತದೆ. ಅದೃಷ್ಟದ ಚಿಹ್ನೆ: ಕಿವಿ ಓಲೆ
4/ 12
ಕಟಕ: ನೀವು ಆಫೀಸ್ನಲ್ಲಿ ಯಾವುದಾದರೂ ಜೊತೆ ಜಗಳ ಮಾಡಿಕೊಂಡಿದ್ದರೆ ಈ ದಿನ ಹೆಚ್ಚಿನ ಸಮಸ್ಯೆ ಅನುಭವಿಸಬೇಕಾಗುತ್ತದೆ. ನಿಮ್ಮ ಬೆಸ್ಟ್ ಫ್ರೆಂಡ್ ತುಂಬಾ ಸೀಕ್ರೇಟ್ ವಿಚಾರವನ್ನು ಹಂಚಿಕೊಳ್ಳಬಹುದು. ಈ ದಿನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಿ, ಎಂಜಾಯ್ ಮಾಡಿ. ಅದೃಷ್ಟದ ಚಿಹ್ನೆ: ಬಾಸ್ಕೆಟ್ ಬಾಲ್
5/ 12
ಸಿಂಹ: ನಿಮ್ಮ ಗೆಳೆಯರಿಗಾಗಿ ಮೀಸಲಿಡುವ ದಿನ ಎನ್ನಬಹುದು. ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗಲಿದೆ ಎನ್ನಬಹುದು. ಈ ದಿನ ಎಂಜಾಯ್ ಮಾಡುವ ದಿನ. ಬಾಕಿ ಇದ್ದ ಕೋರ್ಟ್ ಕೇಸ್ ಇತ್ಯರ್ಥವಾಗಲಿದೆ. ಅದೃಷ್ಟದ ಚಿಹ್ನೆ: ಬಾಕ್ಸ್
6/ 12
ಕನ್ಯಾ: ಒಳ್ಳೆಯದಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಇದು ನಿಮಗೆ ತಡವಾಗಿ ಅರ್ಥವಾಗುತ್ತದೆ. ಹಾಗಾಗಿ ಸ್ವಲ್ಪ ತಾಳ್ಮೆಯಿಂದ ಕಾಯಲೇ ಬೇಕು. ಹಳೆಯ ಒಳ್ಳೆಯ ಕೆಲಸಗಳು ಇಂದು ಫಲ ನೀಡಲಿದೆ. ನಿಮ್ಮ ಗೆಳೆಯರಿಗೆ ನಿಮ್ಮ ಸಲಹೆಯ ಅಗತ್ಯವಿದೆ. ಅದೃಷ್ಟದ ಚಿಹ್ನೆ: ಗೊಂಬೆ
7/ 12
ತುಲಾ: ಬಹಳ ದಿನಗಳ ಗಲಾಟೆಯಿಂದ ನಿಮಗೆ ಮುಕ್ತಿ ಸಿಗುತ್ತದೆ. ಈ ದಿನ ಶಾಂತಿಯಿಂದ ಇರುವ ದಿನ ಎನ್ನಬಹುದು. ನಿಮ್ಮ ಮನೆಗೆ ಅತಿಥಿಗಳ ಆಗಮನವಾಗಲಿದೆ. ಹಾಗಾಗಿ ನಿಮ್ಮ ಅತಿಥ್ಯವನ್ನು ತೋರಿಸಲು ಇಂದು ಸೂಕ್ತವಾದ ಸಮಯ. ಕೆಲಸದ ಬಗ್ಗೆ ಬರುವ ಹೊಸ ಸುದ್ದಿ ನಿಮಗೆ ಉತ್ಸಾಹ ನೀಡುತ್ತದೆ. ಅದೃಷ್ಟದ ಚಿಹ್ನೆ: ಪುಸ್ತಕ
8/ 12
ವೃಶ್ಚಿಕ: ಹೊಸ ವ್ಯಕ್ತಿಯ ಜೊತೆಗಿನ ನಿಮ್ಮ ಸಂಬಂಧ ಬದುಕಿನಲ್ಲಿ ಸಂತೋಷವನ್ನು ತರುತ್ತದೆ. ಈ ದಿನ ನಿಮ್ಮ ಮನದಲ್ಲಿರುವ ಭಾವನೆಯನ್ನು ಹೇಳಿಕೊಳ್ಳಲು ಸೂಕ್ತವಾದ ಸಮಯ ಎನ್ನಬಹುದು. ಈ ದಿನ ಸ್ವಲ್ಪ ಧೈರ್ಯ ಮುಖ್ಯ. ಅದೃಷ್ಟದ ಚಿಹ್ನೆ: ಗಾಳಿಪಟ
9/ 12
ಧನಸ್ಸು: ಕೆಲಸದ ಮೇಲೆ ನಿಮ್ಮ ಗಮನ ಮತ್ತೆ ಮರಳಿ ಬರಲಿದೆ. ನೀವು ಬಹಳ ದಿನಗಳಿಂದ ಹುಡುಕುತ್ತಿದ್ದ ಮಾಹಿತಿ ಇಂದು ಸಿಗಲಿದೆ. ವಿದ್ಯಾರ್ಥಿಗಳಿಗೆ ಈ ದಿನ ಬಹಳ ಶುಭ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದೃಷ್ಟದ ಚಿಹ್ನೆ: ದಿಂಬು
10/ 12
ಮಕರ: ಬಹಳ ದಿನಗಳಿಂದ ಕಾಯುತ್ತಿದ್ದ ದಿನ ಇದು ಎನ್ನಬಹುದು. ನಿಮ್ಮ ಕನಸು ನನಸಾಗಲಿದೆ. ನಿಮ್ಮ ಕೆಲಸಕ್ಕೆ ಇಂದು ಹೊಸ ಅರ್ಥ ಸಿಗಲಿದೆ. ಹಣವನ್ನು ಬಹಳ ಯೋಚನೆ ಮಾಡಿ ಖರ್ಚು ಮಾಡುವುದು ಉತ್ತಮ. ಅದೃಷ್ಟದ ಚಿಹ್ನೆ: ಬಾಟಲಿ
11/ 12
ಕುಂಭ: ನಿಮ್ಮನ್ನ ನೀವು ಇಂದು ಪುಶ್ ಮಾಡಿಕೊಳ್ಳಬೇಕಾಗಿದೆ. ಬೆಸ್ಟ್ ಫ್ರೆಂಡ್ ಜೊತೆ ಟ್ರಿಪ್ ಹೋಗುವ ಸಾಧ್ಯತೆ ಇದೆ. ಸ್ವಲ್ಪ ಹಣ ಉಳಿಕೆ ಮಾಡುವುದು ಮುಂದಿನ ದಿನಗಳಲ್ಲಿ ಸಹಾಯ ಮಾಡುತ್ತದೆ. ಅಲ್ಲದೇ, ಅನಗತ್ಯವಾಗಿ ಯಾವುದೆ ವಿಚಾರಕ್ಕೂ ತಲೆ ಹಾಕಬೇಡಿ. ಅದೃಷ್ಟದ ಚಿಹ್ನೆ: ಮರದ ಬಾಕ್ಸ್
12/ 12
ಮೀನ: ಹಣದ ವಿಚಾರ ನಿಮ್ಮ ಕೆಲಸಕ್ಕೆ ಅಡ್ಡಿ ಮಾಡಬಹುದು. ನಿಮ್ಮ ಹೆಜ್ಜೆಯನ್ನು ಸ್ವಲ್ಪ ಹಿಂದಿಡುವ ಸಾಧ್ಯತೆ ಇರುತ್ತದೆ. ಈ ಕಷ್ಟಗಳು ಕೇವಲ ತಾತ್ಕಾಲಿಕ ಎನ್ನಬಹುದು. ಸ್ವಲ್ಪ ತಾಳ್ಮೆ ಇದ್ದರೆ ಸಾಕು, ಅದೃಷ್ಟದ ಚಿಹ್ನೆ: ಸ್ಫಟಿಕ