Daily Horoscope: ಇಂದು ಹೊಸ ಹೆಜ್ಜೆ ಇಡುವ ಸಾಧ್ಯತೆ, ಈ ರಾಶಿಯವರಿಗೆ ಬಹಳ ಲಾಭವಂತೆ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಒಂದು ಸಂಭ್ರಮಾಚರಣೆ ನಿಮಗಾಗಿ ಕಾದಿದೆ ಎನ್ನಬಹುದು. ಹೊಸ ಯೋಜನೆ ಹಾಗೂ ಹೂಡಿಕೆ ಇಂದು ನಿಮಗೆ ಲಾಭ ನೀಡುತ್ತದೆ. ತಾಳ್ಮೆ ಅಗತ್ಯ, ಕೋಪ ಮಾಡಿಕೊಳ್ಳಬೇಡಿ. ನಿಮ್ಮ ಸಮಸ್ಯೆ ಅರ್ಥ ಮಾಡಿಕೊಳ್ಳಲು ಸಮಯ ಮೀಸಲಿಡಿ. ಅದೃಷ್ಟದ ಚಿಹ್ನೆ: ಗೊಂಬೆ
2/ 12
ವೃಷಭ : ನಿಮಗೆ ಕಳೆದ ಕೆಲ ದಿನಗಳಿಂದ ಉಂಟಾಗಿದ್ದ ಸಮಸ್ಯೆಗೆ ಇಂದು ಪರಿಹಾರ ಸಿಗುತ್ತದೆ. ಇಂದು ಹೊಸ ಜನರ ಪರಿಚಯವಾಗುತ್ತದೆ. ಹಾಗೆಯೇ ಹಳೆಯ ಪದ್ಧತಿಯೊಂದು ನಿಮಗೆ ಸಮಸ್ಯೆ ಆಗಬಹುದು. ಅದೃಷ್ಟದ ಚಿಹ್ನೆ: ಪೆನ್
3/ 12
ಮಿಥುನ: ನಿಮ್ಮ ಪ್ಲ್ಯಾನ್ನಲ್ಲಿ ಆಗುವ ಒಂದು ಸಣ್ಣ ಬದಲಾವಣೆ ನಿಮ್ಮ ದಿನವನ್ನೇ ಪೂರ್ತಿಯಾಗಿ ಬದಲಾವಣೆ ಮಾಡುತ್ತದೆ. ಕಾರ್ಯಮವೊಂದರಲ್ಲಿ ಭಾಗವಹಿಸುವ ಸಾಧ್ಯತೆ. ಆ ಕಾರ್ಯಕ್ರಮದಲ್ಲಿ ಹೊಸ ವ್ಯಕ್ತಿ ಪರಿಚಯವಾಗಬಹುದು. ಇದು ನಿಮಗೆ ಮುಂದಿನ ದಿನಗಳಲ್ಲಿ ಸಹಾಯ ಮಾಡುತ್ತದೆ. ಅದೃಷ್ಟದ ಚಿಹ್ನೆ: ಬೆಳ್ಳಿ ರಿಂಗ್
4/ 12
ಕಟಕ: ನೀವು ಹೊಸ ಕಾರ್ಯವನ್ನು ಮಾಡುವಾಗ ಸ್ವಲ್ಪ ಭಯ ಬೀಳಬಹುದು. ಆದರೆ ಧೈರ್ಯ ಇರಲಿ ನಿಮ್ಮ ಜೊತೆ ಶಕ್ತಿಯೊಂದು ಇರುತ್ತದೆ. ಹಾಗೆಯೇ, ಯಾವುದೋ ಒಂದು ನಿರ್ಧಾರ ಮಾಡುವಾಗ ಸ್ವಲ್ಪ ಗೊಂದಲ ಉಂಟಾಗಬಹುದು. ನಿಮಗೆ ಇಂದು ನಿರ್ಧಾರ ಮಾಡಲು ಹೆಚ್ಚಿನ ಸಮಯ ಬೇಕಾಗಬಹುದು. ಅದೃಷ್ಟದ ಚಿಹ್ನೆ: ಗುಲಾಬಿ ಗಿಡ
5/ 12
ಸಿಂಹ: ನಿಮಗೆ ಬೇಕಾದ ರೀತಿ ಎಂಜಾಯ್ ಮಾಡಲು ಇದು ಸೂಕ್ತವಾದ ದಿನ. ಇಂದು ನಿಮಗೆ ಕೆಲಸ ಸುಲಭವಾಗಿ ಆಗುತ್ತದೆ. ನಿಮ್ಮ ಕಾರ್ಯಕ್ಷಮತೆಯನ್ನು ಇಂದು ಮೇಲಾಧಿಕಾರಿ ಹೊಗಳಬಹುದು. ನಿಮಗೆ ಬಹುಮಾನ ಸಿಗಬಹುದು. ಅದೃಷ್ಟದ ಚಿಹ್ನೆ: ಸೂರ್ಯಕಾಂತಿ ಹೂವು
6/ 12
ಕನ್ಯಾ: ಈ ಹೊಸ ದಿನವನ್ನು ವಿಭಿನ್ನವಾಗಿ ಆರಂಭಿಸುತ್ತೀರಿ. ನಿಮಗೆ ಈ ದಿನ ಬಹಳ ಲಾಭ ಸಿಗಲಿದೆ ಎನ್ನಬಹುದು. ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡುವುದು ಬಹಳ ಉತ್ತಮ. ಅದೃಷ್ಟದ ಚಿಹ್ನೆ: ಕಟ್ಟಡ
7/ 12
ತುಲಾ: ನಿಮಗೆ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹಾಗೂ ಬುದ್ದಿ ಇದೆ. ಹಾಗಾಗಿ ತಲೆ ಕೆಡಿಸಿಕೊಳ್ಳದೇ ನಿರ್ಧಾರ ಮಾಡಿ. ನಿಮಗಾಗಿ ಇಂದು ಬಹಳ ಆಶ್ಚರ್ಯ ಕಾದಿದೆ ಎನ್ನಬಹುದು. ನಿಮ್ಮ ಆತ್ಮೀಯರಿಗೆ ಸ್ವಲ್ಪ ತೊಂದರೆ ಆಗಬಹುದು. ಅದೃಷ್ಟದ ಚಿಹ್ನೆ: ಪರ್ಸ್
8/ 12
ವೃಶ್ಚಿಕ: ಈಗಾಗಲೇ ಮಾತು ಕೊಟ್ಟಿರುವ ಕೆಲಸವನ್ನು ಮೊದಲು ಮುಗಿಸಿ. ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ವೈಮನಸ್ಸು ಉಂಟಾಗಬಹುದು. ನೀವು ಭೂಮಿಗೆ ಸಂಬಂಧಪಟ್ಟ ಕೆಲಸ ಮಾಡುತ್ತಿದ್ದರೆ ಸ್ವಲ್ಪ ಎಚ್ಚರ. ಅದೃಷ್ಟದ ಚಿಹ್ನೆ: ಹವಳ
9/ 12
ಧನಸ್ಸು: ಈ ದಿನ ನಿಮಗೆ ಬಹಳ ಅತ್ಯುತ್ತಮವಾದ ಅವಕಾಶಗಳು ಸಿಗುತ್ತದೆ. ನಿಮಗೆ ಈ ಅವಕಾಶ ಸಣ್ಣದು ಎಂದು ಅನಿಸಬಹುದು, ಆದರೆ ಮುಂದಿನ ದಿನಗಳಲ್ಲಿ ಇದು ದೊಡ್ಡ ಲಾಭ ನೀಡಲಿದೆ. ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಇಂದು ನಿರ್ಧಾರ ತೆಗೆದುಕೊಳ್ಳಿ. ಅದೃಷ್ಟದ ಚಿಹ್ನೆ: ಎಂಬ್ರಾಯ್ಡರಿ ವರ್ಕ್
10/ 12
ಮಕರ: ಇಂದು ನಿಮ್ಮ ಎನರ್ಜಿ ಹೊಸ ಹೊಸ ಕೆಲಸ ಮಾಡಲು ಸಹಾಯ ಮಾಡುತ್ತದೆ. ಇದನ್ನು ನೀವು ಬಳಸಿಕೊಂಡು ಲಾಭ ಪಡೆಯಬಹುದು. ನಿಮಗೆ ಹೇಳದೇ ಫ್ರೆಂಡ್ ಮನೆಗೆ ಬರಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಇರಲಿ ಕಾಳಜಿ. ಅದೃಷ್ಟದ ಸಂಖ್ಯೆ: ಜೇನು
11/ 12
ಕುಂಭ: ನಿಮ್ಮ ಹತ್ತಿರದ ವ್ಯಕ್ತಿಯನ್ನು ಇಂದು ಬಹಳ ಮಿಸ್ ಮಾಡಿಕೊಳ್ಳುತ್ತೀರಿ. ನೀವು ನಿಮ್ಮ ಕನಸಿನ ಲೋಕದಿಂದ ಹೊರ ಬರಬೇಕು. ಸತ್ಯವನ್ನು ಅರಿಯುವುದು ಮುಖ್ಯ. ನಿಮ್ಮ ಹೊಸ ಬದುಕಿಗೆ ದಾರಿ ನೀಡುವ ಅವಕಾಶ ಬರಬಹುದು. ಅದೃಷ್ಟದ ಚಿಹ್ನೆ: ಸೆಣಬಿನ ಬ್ಯಾಗ್
12/ 12
ಮೀನ: ನಿಮ್ಮ ಭಾವನೆಯನ್ನು ಹೇಳಿಕೊಂಡರೆ ಎಲ್ಲಿ ನಿಮಗೆ ನೋವಾಗುತ್ತದೆಯೋ ಎನ್ನುವ ಭಯ ನಿಮ್ಮನ್ನ ಕಾಡುತ್ತದೆ. ಆದರೆ ಹೇಳಿಕೊಳ್ಳದಿದ್ದರೆ ಆತಂಕದ ಸಮಸ್ಯೆ ಕಾಡಬಹುದು. ನಿಮಗೆ ಏನು ಅನಿಸುತ್ತದೆ ಎಂಬುದನ್ನ ಬರೆದು ಹೇಳಿ ಬಿಡಿ. ಅದೃಷ್ಟದ ಚಿಹ್ನೆ: ಕೆರೆ