Daily Horoscope: ಇಂದು ಒಂದು ನಿರ್ಧಾರಕ್ಕೆ ಬರಲೇಬೇಕಿದೆ, ಈ ರಾಶಿಯವರು ತುಸು ಎಚ್ಚರ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ನಿಮ್ಮ ಆರ್ಥಿಕತೆಯ ಬಗ್ಗೆ ಹೆಚ್ಚು ಗಮನ ನೀಡುವುದು ಉತ್ತಮ ಹಾಗೂ ಸಂಬಂಧಪಟ್ಟ ದಾಖಲೆಯನ್ನು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ. ನೀವು ಕೆಲ ವಿಚಾರವನ್ನು ಮುಂದೂಡುತ್ತಿದ್ದರೂ ಸಹ ನಿಮ್ಮ ಬೆನ್ನು ಬಿಡದೇ ಹಿಂದೆ ಬರುತ್ತದೆ.ಅದೃಷ್ಟದ ಚಿಹ್ನೆ: ಗುಲಾಬಿ
2/ 12
ವೃಷಭ: ನಿಮಗೆ ಈ ದಿನ ಒಂದು ಅಥವಾ 2 ವಿಚಾರಗಳ ಕಾರಣದಿಂದ ಆಶ್ಚರ್ಯವಾಗುತ್ತದೆ ಹಾಗೂ ಮನಸಿಗೆ ರಿಲ್ಯಾಕ್ಸ್ ಅನಿಸುತ್ತದೆ. ಆಫೀಸ್ನಲ್ಲಿ ಸೀನಿಯರ್ ಹೇಳುವ ಮಾತನ್ನು ನೆಗ್ಲೆಕ್ಟ್ ಮಾಡಬೇಡಿ. ಇದರಿಂದ ಮುಂದಿನ ದಿನಗಳಲ್ಲಿ ನಿಮಗೆ ಸಹಾಯವಾಗುತ್ತದೆ. ನಿಮಗಾಗಿ ಇಂದು ಸಮಯ ಮೀಸಲಿಡಿ. ಅದೃಷ್ಟದ ಚಿಹ್ನೆ: ಮರದ ಬಾಕ್ಸ್
3/ 12
ಮಿಥುನ: ಇಂದು ನೀವು ಯಾವುದೇ ರೀತಿಯ ಸಣ್ಣ ಯೋಜನೆಯನ್ನು ಪ್ಲ್ಯಾನ್ ಮಾಡಿದ್ದರೂ ಸಹ ಇಂದು ಯಶಸ್ಸು ಸಿಗಲಿದೆ. ನೀವು ನಿಮ್ಮ ಸಂಗಾತಿಗೆ ಕೆಲ ವಿಚಾರಗಳನ್ನು ನೇರವಾಗಿ ಹೇಳುವ ಅವಶ್ಯಕತೆ ಇದೆ. ಇಬ್ಬರ ಮಧ್ಯೆ ಇಂದು ಸಂಬಂಧ ಗಟ್ಟಿಯಾಗಲಿದೆ. ಅದೃಷ್ಟದ ಚಿಹ್ನೆ: ಟೈ
4/ 12
ಕಟಕ: ನಿಮಗೆ ತುಂಬಾ ಹತ್ತಿರವಿರುವ ಹಾಗೂ ನಂಬಿಕೆಗೆ ಅರ್ಹರಾದ ವ್ಯಕ್ತಿಯೊಬ್ಬರು ಇಂದು ನಿಮ್ಮ ಜೊತೆ ಪಾಲುದಾರಿಕೆಯಲ್ಲಿ ಕೆಲಸ ಮಾಡಲು ಆಹ್ವಾನ ಕೊಡಬಹುದು. ಆರ್ಥಿಕವಾಗಿ ಇಂದು ಒಳ್ಳೆಯ ದಿನ. ಬ್ಯುಸಿನೆಸ್ ಮಾಡುತ್ತಿದ್ರೆ ಕೆಲ ನಿರ್ಧಾರಗಳ ಬಗ್ಗೆ ಯೋಚನೆ ಮಾಡಿ. ಅದೃಷ್ಟದ ಚಿಹ್ನೆ: ಬುಕ್
5/ 12
ಸಿಂಹ: ಇಂದು ನಿಮ್ಮ ಕಾರಣದಿಂದ ಇನ್ನೊಬ್ಬರ ಚಿಂತೆ ದೂರವಾಗುತ್ತದೆ. ಒಂದು ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದನ್ನ ಬಹಳ ದಿನಗಳಿಂದ ಮುಂದೂಡುತ್ತಿದ್ದೀರಿ, ಇಂದು ಅಗತ್ಯವಾಗಿ ನಿರ್ಧಾರ ತೆಗೆದುಕೊಳ್ಳಲೇಬೇಕು. ಕಳೆದು ಹೋದ ವಸ್ತುವೊಂದು ಇಂದು ಸಿಗಲಿದೆ. ಅದೃಷ್ಟದ ಚಿಹ್ನೆ: ಬೆಳ್ಳಿಯ ಪಾತ್ರೆ
6/ 12
ಕನ್ಯಾ: ಇಂದು ನೀವು ಹೆಚ್ಚಿನ ಮಾಹಿತಿ ಇಲ್ಲದೇ ಬೇರೆ ವಿಚಾರದ ಬಗ್ಗೆ ನಿರ್ಧಾರ ಮಾಡಬೇಕೆಂದಿದ್ದರೆ, ಅದರಲ್ಲಿ ಆಶ್ಚರ್ಯ ಕಾದಿರಲಿದೆ. ನಿಮಗಾಗಿ ಹೊಸ ಅವಕಾಶವೊಂದು ಕಾದಿದ್ದು, ನಿಮ್ಮ ಕೆಲಸವನ್ನು ಇನ್ನೂ ಹಲವೆಡೆ ಹರಡಲು ಸಹಾಯ ಮಾಡುತ್ತದೆ. ಅದೃಷ್ಟದ ಚಿಹ್ನೆ: ಕಂಚಿನ ವಸ್ತು
7/ 12
ತುಲಾ: ನೀವು ಅಂದುಕೊಂಡ ಸಮಯಕ್ಕಿಂತ ಮೊದಲು ಸಂತಸದ ಸುದ್ದಿ ಬರುತ್ತದೆ ಹಾಗಾಗಿ ಆಚರಣೆ ಮಾಡಲೇಬೇಕು. ಆದರೆ ಕುಟುಂಬದಲ್ಲಿ ಒಬ್ಬರು ಕೋಪ ಮಾಡಿಕೊಳ್ಳುವ ಸಾಧ್ಯತೆ ಇದೆ. ಯಾವುದೇ ಮುಖ್ಯವಾದ ನಿರ್ಧಾರವನ್ನು ಮಾಡುವಾಗ ಸ್ವಲ್ಪ ಎಚ್ಚರಿಕೆ ಅಗತ್ಯ. ಅದೃಷ್ಟದ ಚಿಹ್ನೆ: ಹೊಸ ಪಾತ್ರೆ
8/ 12
ವೃಶ್ಚಿಕ: ನಿಮ್ಮ ಬೆಸ್ಟ್ ಫ್ರೆಂಡ್ ಸ್ವಲ್ಪ ನೋವನ್ನು ಅನುಭವಿಸಬಹುದು. ಕಹಿ ಘಟನೆಯೊಂದು ಅವರ ಜೀವನದಲ್ಲಿ ನಡೆಯಲಿದೆ. ನಿಮ್ಮ ಸಲಹೆ ಅವರಿಗೆ ಬಹಳ ಅಗತ್ಯವಿದೆ. ಅದೃಷ್ಟದ ಚಿಹ್ನೆ: ಸಕ್ಕರೆ
9/ 12
ಧನಸ್ಸು: ಈ ದಿನ ಕಾರಣವಿಲ್ಲದೇ ಭಾವುಕರಾಗುವ ಸಾಧ್ಯತೆ ಇದೆ. ಆದರೆ ಇಂದು ಜೀವನದಲ್ಲಿ ಯಶಸ್ಸು ಲಭಿಸಲಿದೆ. ಹಾಗೆಯೇ ನಿಮ್ಮವರು ಯಾರು ಎಂಬುದನ್ನ ಈ ದಿನ ಅರ್ಥ ಮಾಡಿಕೊಳ್ಳಬಹುದು. ಅದೃಷ್ಟದ ಚಿಹ್ನೆ: ಸೂರ್ಯ
10/ 12
ಮಕರ: ನೀವು ಯಾರನ್ನು ಬಹಳ ನಂಬಿಕೆಯ ವ್ಯಕ್ತಿ ಎಂದು ತಿಳಿದುಕೊಂಡಿದ್ದೀರೋ ಅವರೇ ಇಂದು ನಿಮಗೆ ಮೋಸ ಮಾಡಬಹುದು. ಕುಟುಂಬದವರಿಂದ ಬಂದ ವಿಚಾರದಿಂದ ಸ್ವಲ್ಪ ರಿಲ್ಯಾಕ್ಸ್ ಆಗುತ್ತೀರಿ. ಹೊಸ ಯೋಜನೆಯಲ್ಲಿ ಹೂಡಿಕೆ ಮಾಡುವುದಾದರೆ ಇಂದು ಒಳ್ಳೆಯ ದಿನ ಅದೃಷ್ಟದ ಚಿಹ್ನೆ: ಬಟ್ಟೆ
11/ 12
ಕುಂಭ: ನಿಮ್ಮ ನಿರ್ಧಾರದ ಬಗ್ಗೆ ಹೆಚ್ಚು ಗೊಂದಲ ಬೇಡ. ನಿಮ್ಮ ಆಫೀಸ್ನಲ್ಲಿ ಸೀನಿಯರ್ ಕೆಲಸವನ್ನು ಹೊಗಳಬಹುದು. ಹೊಸ ಜವಾಬ್ದಾರಿ ನಿಮ್ಮನ್ನ ಹುಡುಕಿ ಬರಬಹುದು. ನಿಮ್ಮ ಅಭಿಪ್ರಾಯವನ್ನು ನೀವೇ ಹೇಳಿ. ಅದೃಷ್ಟದ ಚಿಹ್ನೆ: ಗ್ಲಾಸ್
12/ 12
ಮೀನ: ನಿಮಗಾಗಿ ಇಂದು ಸಮಯ ಮೀಸಲಿಡುವ ಅವಶ್ಯಕತೆ ಇದೆ. ಹೊಸ ಯೋಜನೆಯನ್ನು ಹಾಕಿ. ನಿಮ್ಮ ಕನಸಿನ ಹತ್ತಿರ ನೀವಿದ್ದೀರಿ, ಬೇಗ ನನಸಾಗಲಿದೆ. ಅದೃಷ್ಟದ ಚಿಹ್ನೆ: ಸ್ಫಟಿಕ