Daily Horoscope: ಇಂದು ಬಂಪರ್ ಲಾಟರಿ ಈ ರಾಶಿಯವರಿಗೆ, ಸ್ವಲ್ಪ ಕಾಯಿರಿ ಅಂತಿದೆ ಜ್ಯೋತಿಷ್ಯ ಶಾಸ್ತ್ರ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ನಿಮ್ಮ ಸಂಬಂಧದ ವಿಚಾರದಲ್ಲಿ ಇಂದು ಸ್ವಲ್ಪ ಪರಿಶ್ರಮ ಹಾಕಬೇಕಾಗುತ್ತದೆ. ನಿಮ್ಮ ಸಂಗಾತಿಗೆ ನೀವು ಅವರಿಗಾಗಿ ಎಷ್ಟು ಕಷ್ಟಪಡುತ್ತೀರಿ ಎಂಬುದರ ಅರಿವು ಆಗಬೇಕಿದೆ. ಕೆಲ ವಿಚಾರಗಳಲ್ಲಿ ಹಿನ್ನಡೆ ಆಗಬಹುದು. ನಿಮ್ಮ ಕೆಲಸ ನೀವೇ ಮಾಡಿ. ಅದೃಷ್ಟದ ಚಿಹ್ನೆ: ಕನ್ನಡಿ
2/ 12
ವೃಷಭ: ಈ ದಿನ ನಿಮಗೆ ಆಯಾಸ ಹಾಗೂ ಸಮಸ್ಯೆಗಳು ಜಾಸ್ತಿ ಎನ್ನಬಹುದು. ಕೆಲಸ ಒತ್ತಡದಿಂದ ನಿಮಗೆ ಆರೋಗ್ಯದಲ್ಲಿ ಸಹ ಏರು-ಪೇರಾಗುತ್ತದೆ. ಸುಮ್ಮನೆ ಶಾಪಿಂಗ್ ಮಾಡುವ ಸಾಧ್ಯತೆ ಇದೆ. ನಿಮ್ಮ ಶಕ್ತಿ ಇಂದು ಕುಂದುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ: ಗ್ಲಾಸ್ ಜಾರ್
3/ 12
ಮಿಥುನ: ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಇಂದು ಸಮಯ ಕೊಡುವುದು ರಿಲ್ಯಾಕ್ಸ್ ಅನಿಸುತ್ತದೆ. ಇದು ನಿಮ್ಮ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆಧ್ಯಾತ್ಮಿಕವಾಗಿ ಇಂದು ಸ್ವಲ್ಪ ಸಮಯ ಮೀಸಲಿಡಿ. ಒಂದು ಅದ್ಭುತ ಅವಕಾಶ ನಿಮ್ಮನ್ನ ಹುಡುಕಿ ಬರಲಿದೆ. ಅದೃಷ್ಟ ಚಿಹ್ನೆ: ನೀರಿನ ಪಾತ್ರೆ
4/ 12
ಕಟಕ: ನಿಮ್ಮ ಕೆಲಸದ ಜವಾಬ್ದಾರಿಯನ್ನು ಕಡಿಮೆ ಮಾಡಲು ಇಂದು ಹೊಸ ವ್ಯಕ್ತಿಯ ಆಗಮನವಾಗಬಹುದು. ಇದು ನಿಮಗೆ ನಿಜಕ್ಕೂ ಸ್ವಲ್ಪ ಆರಾಮವನ್ನು ನೀಡುತ್ತದೆ. ಸ್ವಲ್ಪ ಯಾವುದಾದರೂ ಮೋಜಿನ ಆಟದಲ್ಲಿ ಸಮಯ ಕಳೆಯಿರಿ. ಅದೃಷ್ಟದ ಚಿಹ್ನೆ: ಆ್ಯಂಟಿಕ್ ಗಡಿಯಾರ
5/ 12
ಸಿಂಹ: ನಿಮ್ಮ ಕೆಲವನ್ನು ಕ್ಷೇತ್ರದಲ್ಲಿ ಹೆಸರು ಪಡೆದ ಪ್ರಸಿದ್ದ ವ್ಯಕ್ತಿ ಗುರುತಿಸಬಹುದು ಹಾಗೂ ಒಂದು ಅವಕಾಶ ಕೊಡಬಹುದು. ನಿಮಗೆ ಇದು ಮುಳುಗುತ್ತಿರುವ ದೋಣಿಗೆ ಆಸರೆ ಸಿಕ್ಕಂತೆ ಆಗುತ್ತದೆ, ನಿಮ್ಮ ಕೆಲಸದ ಮೇಲೆ ಇದ್ದ ಅನುಮಾನ ನಿವಾರಣೆಯಾಗುತ್ತದೆ. ಅದೃಷ್ಟದ ಚಿಹ್ನೆ: ಆಕಾಶ
6/ 12
ಕನ್ಯಾ: ನೀವು ಬಹಳ ಹಿಂದೆ ನೋವು ಮಾಡಿದ್ದ ವ್ಯಕ್ತಿ ಇಂದಿಗೂ ನಿಮ್ಮ ಕ್ಷಮಿಸಿರುವುದಿಲ್ಲ. ಅವರಿಗಾಗಿ ಸ್ವಲ್ಪ ಪರಿಶ್ರಮ ಹಾಕಿ ಕ್ಷಮೆ ಪಡೆಯಿರಿ. ಇದು ನಿಮಗೆ ಒಳ್ಳೆಯ ಸಮಯವಾಗಿದ್ದು, ಒಂದು ಟ್ರಿಪ್ ಮಾಡಿ. ಅದೃಷ್ಟದ ಚಿಹ್ನೆ: ನಂಬರ್ ಬೋರ್ಡ್
7/ 12
ತುಲಾ: ಕೆಲಸದ ಸ್ಥಳದಲ್ಲಿ ಶಾಂತವಾಗಿರಿ. ನೀವು ಕೊಡುವ ಸಲಹೆಯಿಂದ ಒಂದು ಉತ್ತಮ ಕೆಲಸ ಆಗಲಿದೆ. ಮನೆಯ ಅಕ್ಕ –ಪಕ್ಕ ಕೆಲ ಸಮಸ್ಯೆಗಳು ಆಗಬಹುದು. ಅದೃಷ್ಟದ ಚಿಹ್ನೆ: ರೇಷ್ಮೇ ಕರ್ಚೀಫು
8/ 12
ವೃಶ್ಚಿಕ: ಇಂದು ಶುಭ ಸುದ್ದಿ ಇಂದು ನಿಮಗೆ ಸಿಗಲಿದೆ, ಇದು ಸ್ವಲ್ಪ ನಿಧಾನಗತಿಯ ದಿನವಾಗಿದ್ದರೂ ಸಹ ಒಳ್ಳೆಯ ದಿನವಾಗಲಿದೆ. ಇಂದು ಸ್ವಲ್ಪ ಬೇಗ ಮಲಗುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಅದೃಷ್ಟದ ಚಿಹ್ನೆ: ಬಲೆ
9/ 12
ಧನಸ್ಸು: ಆಫೀಸ್ನಲ್ಲಿ ಕೆಲ ಕೆಲಸಗಳು ಆಗದಿರಬಹುದು, ಆದರೆ ಚಿಂತೆ ಮಾಡಬೇಡಿ. ಸ್ವಲ್ಪ ಕಿರಿಕಿರಿಯ ದಿನವಾಗಿದ್ದರೂ ಸಹ ಎಲ್ಲವೂ ಸರಿಯಾಗುತ್ತದೆ. ಇಂದು ಕೆಲಸ ಜಾಸ್ತಿ ಆಗುತ್ತದೆ. ಅದೃಷ್ಟದ ಚಿಹ್ನೆ: ಹೂವು
10/ 12
ಮಕರ: ನೀವು ಸರಿಯಾಗಿ ಎಲ್ಲವನ್ನು ಅರ್ಥ ಮಾಡಿಕೊಂಡರೆ ಇಂದು ಬಹಳ ಒಳ್ಳೆಯ ದಿನ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಮಗಾಗಿ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಿ. ಅದೃಷ್ಟದ ಚಿಹ್ನೆ: ಶೂ
11/ 12
ಕುಂಭ: ಇಂದು ನಿಮ್ಮ ವ್ಯವಹಾರದ ಪಾಲುದಾರರ ಜೊತೆ ಇನ್ನೊಂದು ಹೊಸ ಯೋಜನೆ ಆರಂಭ ಮಾಡಬಹುದು. ಇಂದು ನಿಮ್ಮ ದಾರಿ ಕ್ಲಿಯರ್ ಎನಿಸುವುದು ಪಕ್ಕಾ. ಅದೃಷ್ಟದ ಚಿಹ್ನೆ: ಫೋಟೋ
12/ 12
ಮೀನ: ನಿಮ್ಮ ಸ್ನೇಹಿತರಿಗೆ ಕುಟುಂಬದ ವಿಚಾರವಾಗಿ ಸಲಹೆಯ ಅಗತ್ಯವಿದೆ. ನಿಮಗೆ ಗೊತ್ತಿಲ್ಲದ ವ್ಯಕ್ತಿ ಹಾಗೂ ವಿಚಾರದಲ್ಲಿ ತಲೆ ಹಾಕಲು ಹೋಗಬೇಡಿ. ಉಳಿಸಿಕೊಂಡಿದ್ದ ಹಣದಿಂದ ನಿಮಗೆ ಸಹಾಯವಾಗುತ್ತದೆ. ಅದೃಷ್ಟದ ಸಮಯ: ಹೂವಿನ ಕುಂಡ