Astrological Prediction 2023: ಹೊಸವರ್ಷ ಮೇಷ ರಾಶಿಯವರ ಪಾಲಿಗೆ ಹೇಗಿರುತ್ತೆ? ಭವಿಷ್ಯ ಏನು ಹೇಳುತ್ತೆ?
Astrological Prediction 2023: ಹೊಸವರ್ಷದ ಹೊಸ್ತಿಲಲ್ಲಿ ನಿಂತಿರುವ ನಮಗೆ ನಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಬಹಳ ಆಸಕ್ತಿ ಇರುತ್ತದೆ. ಒಂದೊಂದು ರಾಶಿಗೂ ಒಂದೊಂದು ಫಲಾಫಲಗಳಿರುತ್ತದೆ. ಸದ್ಯ ಮೇಷ ರಾಶಿಯವರಿಗೆ 2023 ಹೇಗಿರಲಿದೆ ಎಂಬುದು ಇಲ್ಲಿದೆ. ಇನ್ನು ಸುಧಾಮ ಎಚ್.ಎಸ್. ಇವರು ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಈ ಸಂವತ್ಸರದಲ್ಲಿ ಮೇಷ ರಾಶಿಯವರು ಅತ್ಯಂತ ಸುಖದ ಜೀವನವನ್ನು ನಡೆಸುತ್ತಾರೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಈ ವರ್ಷ ಹಲವಾರು ಹಳೆಯ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಎನ್ನಬಹುದು.
2/ 8
ಜನ್ಮದಲ್ಲಿ ಗುರು ಲಾಭದಲ್ಲಿರುವ ಶನಿ ಬಹುತೇಕ ಸಂದರ್ಭಗಳಲ್ಲಿ ಅನುಕೂಲಕರ ಫಲಗಳನ್ನೇ ಕೊಡುತ್ತಾರೆ ಎನ್ನಬಹುದು. ಅಲ್ಲದೇ ಈ ಸಮಯದಲ್ಲಿ ಆರ್ಥಿಕವಾಗಿ ಸಹ ಸದೃಢರಾಗಲು ಸಾಧ್ಯವಾಗುತ್ತದೆ.
3/ 8
ಅಲ್ಲದೇ, ನಿಮ್ಮ ಸದ್ಗುಣಗಳಿಂದ ಎಲ್ಲಾ ಕಡೆ ಗೌರವಾದರಗಳು ಸಿಗುತ್ತವೆ. ನೀವು ಹೋದ ಕಡೆಯಲ್ಲಾ ಪ್ರಶಂಸೆಗೆ ಪಾತ್ರರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಜನರಿಗೆ ಬಹಳ ಇಷ್ಟವಾಗುತ್ತೀರಿ. ಈ ವರ್ಷ ನಿಮಗೆ ಚೆನ್ನಾಗಿರಲಿದೆ ಎನ್ನಬಹುದು.
4/ 8
ಆರೋಗ್ಯದ ಸಮಸ್ಯೆಯಿಂದ ಕಷ್ಟ ಅನುಭವಿಸುತ್ತಿರುವವರು ಈ ವರ್ಷದಲ್ಲಿ ಅದರಿಂದ ಮುಕ್ತಿ ಪಡೆಯುವುದು ಖಚಿತ. ಆದರೂ ಸಹ ಯಾವುದೇ ರೀತಿಯಾಗಿ ನಿವು ಆರೋಗ್ಯದ ವಿಚಾರದಲ್ಲಿ ನೆಗ್ಲೆಕ್ ಮಾಡಬೇಡಿ. ಇದರಿಂದ ಸುಮ್ಮನೆ ಸಮಸ್ಯೆಗಳು ಬರಬಹುದು.
5/ 8
ವಸ್ತ್ರ ವ್ಯವಹಾರದವರಿಗೆ ಸುಗ್ಗಿ ಎಂದೇ ಹೇಳಬಹುದು ಯಥೇಚ್ಛವಾಗಿ ಭೋಗದ ವಸ್ತುಗಳ ಆಗಮನ ಆಗುತ್ತದೆ. ಸಂಪತ್ತು ನಿಮ್ಮ ಬಳಿ ಸ್ಥಿರವಾಗಿ ನಿಲ್ಲುತ್ತದೆ ಎರಡು ಮೂರು ಕಡೆಯಿಂದ ಹಣ ಬರುತ್ತದೆ. ಇರುವುದರಲ್ಲೇ ಸಂತೃಪ್ತ ಜೀವನ ನಿಮ್ಮದಾಗುತ್ತದೆ.
6/ 8
ಹಾಗೆಯೇ ಅರ್ಧ ವರ್ಷದ ಕಾಲು ನರ ಸ್ನಾಯುವಿಗೆ ಸಂಬಂಧಪಟ್ಟ ಕಾಯಿಲೆಗಳು ಬಾಧಿಸಬಹುದು ನಿಮ್ಮ ಅತ್ಯಂತ ಆತ್ಮೀಯರಿಂದ ಮೋಸ ಹೋಗುವ ಸಾಧ್ಯತೆಗಳಿದ್ದು ಜಾಗೃತೆ ವಹಿಸಬೇಕು.
7/ 8
ಎಲ್ಲಾವೂ ಸರಿಯಾಗಿದ್ದರೂ ಸಹ ಮಕ್ಕಳ ವಿಚಾರದಲ್ಲಿ ನಿಮಗೆ ಪೂರ್ಣ ಸಮಾಧಾನ ಇರುವುದಿಲ್ಲ. ಯಾವುದೊ ಒಂದು ಕೊರತೆ ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಅರ್ಧ ವರ್ಷದ ನಂತರ ನಿಮಗೆ ಸಮಸ್ಯೆಗಳು ಹೆಚ್ಚಾಗಬಹುದು.
8/ 8
ನಿಮಗೆ ಸಂಘ ಸಂಸ್ಥೆಗಳಲ್ಲಿ ಅಧಿಕಾರ ಪ್ರಾಪ್ತವಾಗುವ ಯೋಗವಿರುತ್ತದೆ. ಸುಬ್ರಹ್ಮಣ್ಯೇಶ್ವರನನ್ನು ನಿರಂತರವಾಗಿ ಆರಾಧಿಸಿದರೆ ಅತ್ಯಂತ ಅನುಕೂಲ ಫಲಗಳನ್ನು ಪಡೆಯಬಹುದು