ವೃಷಭ: ಆಸ್ಟ್ರೇಲಿಯಾ ಭೂಮಿ ಚಿಹ್ನೆ ವೃಷಭ ರಾಶಿಯು ಆಸ್ಟ್ರೇಲಿಯಾದಲ್ಲಿ ವಾಸಿಸುವುದನ್ನು ಒತ್ತಿ ಹೇಳುತ್ತದೆ. ಭೂಮಿಯ ಚಿಹ್ನೆ ವೃಷಭ ರಾಶಿಯನ್ನು ಪಂಚೇಂದ್ರಿಯಗಳು ಆಳುತ್ತವೆ, ಆದ್ದರಿಂದ ಈ ಚಿಹ್ನೆಯು ನೈಸರ್ಗಿಕ ಸೌಂದರ್ಯ, ಉತ್ತಮ ಆಹಾರ ಮತ್ತು ಉತ್ತಮ ಜಾಗಕ್ಕೆ ಸಮೃದ್ಧವಾಗಿದೆ. ಆಸ್ಟ್ರೇಲಿಯಾದ ಕಡಲತೀರಗಳು, ಉತ್ತಮ ಆಹಾರ, ವೈನ್ ಎಲ್ಲವೂ ಈ ದೇಶದ ಜೀವನವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ.
ಮಿಥುನ: ದಕ್ಷಿಣ ಕೊರಿಯಾ ನಕ್ಷತ್ರ ಚಿಹ್ನೆಯ ಮಿಥುನ ರಾಶಿಗೆ ದಕ್ಷಿಣ ಕೊರಿಯಾ ಹೇಳಿ ಮಾಡಿಸಿದ ದೇಶ. ಹೊಸ ಭಾಷೆಯನ್ನು ಕಲಿಯುವುದು, ಸಂಗೀತ ಮತ್ತು ಫ್ಯಾಷನ್ ಪ್ರವೃತ್ತಿಗಳನ್ನು ಹೊಂದುವುದು ಸೇರಿ ಹೊಸ ಸಂಸ್ಕೃತಿಯನ್ನು ಕಲಿಯಲು ಈ ದೇಶ ಉತ್ತಮವಾಗಿದೆ. ಒಟ್ಟಾರೆ ಈ ನಗರದಲ್ಲಿ ವಾಸಿಸುವುದು ಮಿಥುನ ರಾಶಿಯವರಿಗೆ ಸಂಪೂರ್ಣವಾಗಿ ಸೂಕ್ತವಾಗಿರುತ್ತದೆ ಎನ್ನುತ್ತದೆ ಜ್ಯೊತಿಷ್ಯ.
ಕಟಕ : ಕೆನಡಾ ಕಟಕ ರಾಶಿಯವರಿಗೆ ಎಲ್ಲಕ್ಕಿಂತ ಮೊದಲು ಭದ್ರತೆಯ ಅಗತ್ಯವಿದೆ, ಆದ್ದರಿಂದ ಅವರು ಉತ್ತಮ ಆರೋಗ್ಯವನ್ನು ಒದಗಿಸುವ, ರಾಜಕೀಯ ಸಮಸ್ಯೆಗಳಿಂದ ಕೂಡಿರದ ಮತ್ತು ಉದ್ಯೋಗಾವಕಾಶಗಳನ್ನು ಹೊಂದಿರುವ ಸ್ಥಳಕ್ಕೆ ತೆರಳಲು ಹೆಚ್ಚು ಒತ್ತು ನೀಡುತ್ತಾರೆ. ಹೀಗಾಗಿ ಕೆನಡಾ ಈ ಎಲ್ಲಾ ಆದ್ಯತೆಯನ್ನು ಪೂರೈಸುವುದರಿಂದ ಕಟಕ ರಾಶಿಯವರಿಗೆ ಕೆನಡಾ ಸೂಕ್ತವಾಗಿದೆ. ಕೆನಡಾದಲ್ಲಿ ಸಾಕಷ್ಟು ಭಾರತೀಯವರು ಇರುವುದರಿಂದ ಈ ವಿಚಾರ ಕೂಡ ನಿಮಗೆ ಅಲ್ಲಿ ನೆಲೆಸಲು ಸುಲಭವಾಗಬಹುದು.
ಸಿಂಹ: ಸ್ಪೇನ್ ಸೂರ್ಯನ ಚಿಹ್ನೆ ಸಿಂಹ ರಾಶಿಗೆ ಸ್ಪೇನ್ ಅನುಕೂಲಕರವಾಗಿದೆ. ಇಲ್ಲಿನ ಫ್ಯಾಶನ್, ಪಾರ್ಟಿಗಳು, ಸಂಸ್ಕೃತಿ ಎಲ್ಲವೂ ಈ ದೇಶವನ್ನು ಮತ್ತಷ್ಟು ಸುಂದರಗೊಳಿಸಿವೆ. ಜೊತೆಗೆ ಫುಟ್ಬಾಲ್ ಕ್ರೇಜ್, ವಿವಿಧ ನೃತ್ಯ ಪ್ರಕಾರಗಳು, ಅಪ್ರತಿಮ ಕಲಾವಿದರ ಕಲಾಕೃತಿಗಳಿಂದ ತುಂಬಿರುವ ವಸ್ತುಸಂಗ್ರಹಾಲಯಗಳು, ವೈಭವದ ವಾಸ್ತುಶಿಲ್ಪ ಎಲ್ಲವೂ ಇಲ್ಲಿ ಅದ್ಭುತವಾಗಿರುವುದರಿಂದ ಸಿಂಹ ರಾಶಿಯವರಿಗೆ ಈ ದೇಶ ಸೂಕ್ತವಾಗಿರುತ್ತದೆ.
ಧನು ರಾಶಿ: ಇಂಡೋನೇಷ್ಯಾ ಧನು ರಾಶಿಯವರು ದೈನಂದಿನ ಜೀವನದ ಜಂಜಾಟದಿಂದ ತಪ್ಪಿಸಿಕೊಳ್ಳಲು ಮತ್ತು ವಿಶ್ರಾಂತಿ ಪಡೆಯಲು ಪ್ರಯಾಣಿಸಲು ಇಷ್ಟಪಡುವ ಧನುರಾಶಿಗೆ ಇಂಡೋನೆಷ್ಯಾ ಸೂಕ್ತವಾಗಿರುತ್ತದೆ. ಬಾಲಿ, ಕೊಮೊಡೊ ದ್ವೀಪ, ಗಿಲಿ ದ್ವೀಪಗಳು ಮತ್ತು ಹೆಚ್ಚಿನದನ್ನು ಅನ್ವೇಷಿಸುವ ಮೂಲಕ ಅವರು ವಾರಾಂತ್ಯದಲ್ಲಿ ದೇಶದ ಅನೇಕ ಸುಂದರವಾದ ದ್ವೀಪಗಳಿಗೆ ಹೋಗಬಹುದು. ವೈವಿಧ್ಯಮಯ ಭೂದೃಶ್ಯಗಳು, ಪ್ರಾಚೀನ ಕಡಲತೀರಗಳಿಂದ ಹಿಡಿದು, ಕಾಡುಗಳು ಮತ್ತು ದೇವಾಲಯಗಳನ್ನು ಧನುರಾಶಿಯವರು ನೋಡಬಹುದು.
ಮೀನ: ಇಟಲಿ ಮೀನ ರಾಶಿಯವರು ಸ್ನೇಹಪರ ದೇಶಕ್ಕೆ ತೆರಳಲು ಬಯಸುತ್ತಾರೆ. ಅಂತೆಯೇ ಇವರಿಗೆ ಇಟಲಿ ಆದ್ಯತೆಯ ದೇಶವಾಗುತ್ತದೆ. ಫುಟ್ಬಾಲ್, ವೈನ್, ಸಂಸ್ಕೃತಿ ಎಲ್ಲವೂ ಉತ್ತಮವಾಗಿರುವುದರಿಂದ ಮೀನಾ ರಾಶಿಗೆ ಇಟಲಿ ಸೂಕ್ತವಾಗಿದೆ. ಹಾಗೆಯೇ ಮೀನಾ ರಾಶಿ ಅಲೆದಾಡುವ ಸಂಕೇತವಾಗಿದೆ, ಆದ್ದರಿಂದ ಅವರು ಇಟಲಿಯಲ್ಲಿ ಕರಾವಳಿ, ಹಳ್ಳಿಗಳು ಅಥವಾ ದ್ರಾಕ್ಷಿತೋಟಗಳಿಗೆ ರಸ್ತೆ ಪ್ರವಾಸಗ ಹೋಗಬಹುದು. ಇಟಲಿ ಈ ರಾಶಿಯವರಿಗೆ ಸಾಕಷ್ಟು ಪ್ರಯಾಣದ ಆಯ್ಕೆಗಳನ್ನು ನೀಡುತ್ತದೆ.