Merry Christmas 2022: ಕ್ರಿಸ್ಮಸ್ನಲ್ಲಿ ರಂಜಿಸಲು ಬರೋ ಸಾಂತಾ ಕ್ಲಾಸ್, ಮಕ್ಕಳ ಫೇವರಿಟ್ ತಾತನ ಕಹಾನಿಯೂ ಬಹಳ ಇಂಟರೆಸ್ಟಿಂಗ್
Merry Christmas 2022: ಕ್ರಿಸ್ಮಸ್ ಹಬ್ಬಕ್ಕೆ 3 ದಿನಗಳು ಬಾಕಿ ಇದೆ. ಈಗಾಗಲೇ ಆಚರಣೆಗೆ ಸಿದ್ದತೆ ಭರದಿಂದ ಸಾಗಿದೆ. ಕ್ರಿಸ್ಮಸ್ ಹಬ್ಬ ಎಂದರೆ ಮಕ್ಕಳಿಗೆ ಬಹಳ ಇಷ್ಟ. ಈ ಸಂತಾ ಕ್ಲಾಸ್ ಬಂದು ಗಿಫ್ಟ್ ಕೊಟ್ಟು ಹೋಗುತ್ತಾರೆ ಎನ್ನುವ ನಂಬಿಕೆ ಇದೆ. ಅಷ್ಟಕ್ಕೂ ಮಕ್ಕಳ ಫೇವರೇಟ್ ಸಂತಾ ಕ್ಲಾಸ್ ಯಾರು, ಈ ಸಂಪ್ರದಾಯ ಆರಂಭವಾಗಿದ್ದು ಹೇಗೆ ಎಂಬುದು ಇಲ್ಲಿದೆ.
ಡಿಸೆಂಬರ್ 25ರಂದು ವಿಶ್ವದಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಮಕ್ಕಳು ಸಂತಾ ಕ್ಲಾಸ್ ಎಂಬ ಗಿಫ್ಟ್ ಕೊಡುವ ಅಜ್ಜನಿಗಾಗಿ ಕಾಯುತ್ತಾರೆ. ಸಂತಾ ಕ್ಲಾಸ್ಗೆ ಸಹ ಮಕ್ಕಳು ಎಂದರೆ ಬಹಳ ಇಷ್ಟ. ಹಾಗಾಗಿ ಮಕ್ಕಳಿಗೆ ವಿವಿಧ ರೀತಿ ಸ್ವೀಟ್ಸ್, ಬಟ್ಟೆ ಹಾಗೂ ಉಡುಗೊರೆಗಳನ್ನು ತರುತ್ತಾರೆ ಎನ್ನುವ ನಂಬಿಕೆ ಇದೆ.
2/ 8
ಸಂತಾ ಕ್ಲಾಸ್ ಎಂದರೆ ಎಲ್ಲರಿಗೂ ನೆನಪಿಗೆ ಬರುವುದು ಕೆಂಪು ಬಣ್ಣದ ಉಡುಗೆ ತೊಟ್ಟ ಬಿಳಿಯ ಗಡ್ಡದ ತಾತ. ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಸಂತಾ ಕ್ಲಾಸ್ ಬರುತ್ತಾರೆ ಎನ್ನುವ ನಂಬಿಕೆ ಇದೆ. ಆದರೆ ಈ ಸಂತಾ ಕ್ಲಾಸ್ ಎಂದರೆ ಯಾರು ಗೊತ್ತಾ?
3/ 8
ಇತಿಹಾಸಗಳ ಪ್ರಕಾರ ಕ್ರಿ.ಪೂ 300ರಲ್ಲಿ ಟರ್ಕಿಯ ಮೈರಾ ನಗರದಲ್ಲಿ ಸೇಂಟ್ ನಿಕೋಲಸ್ ಎನ್ನುವ ವ್ಯಕ್ತಿ ವಾಸವಾಗಿದ್ದ, ಆತ ಬಹಳ ದೊಡ್ಡ ಶ್ರೀಮಂತ. ಯಾವಾಗಲೂ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವುದರಲ್ಲಿ ಎತ್ತಿದ ಕೈ. ಯೇಸು ಕ್ರಿಸ್ತನ ಮಾತನ್ನು ಚಾಚು ತಪ್ಪದೇ ಪಾಲಿಸುವ ವ್ಯಕ್ತಿ ಎಂದು ಹೆಸರುಗಳಿಸಿದ್ದ.
4/ 8
ನಿಕೋಲಸ್ಗೆ ಯಾರಿಗೂ ಕಷ್ಟ ಬರಬಾರದು ಎನ್ನುವ ಮನಸ್ಸು, ಪ್ರತಿಯೊಬ್ಬರಿಗೂ ಏನಾದರೂ ಸಹಾಯ ಮಾಡಬೇಕು ಎನ್ನುವ ಆಸೆ ಹುಟ್ಟಿತು. ಅದಕ್ಕೆ ಯಾರಿಗೇ ತೊಂದರೆ ಇದ್ದರೂ ಸಹ ಅವರಿಗೆ ತಿಳಿಯದಂತೆ ಹೋಗಿ ಸಹಾಯ ಮಾಡುತ್ತಿದ್ದ. ಅದರಲ್ಲೂ ಮಕ್ಕಳಿಗಂತೂ ಹಲವಾರು ರೀತಿಯ ಉಡುಗೊರೆ ಕೊಡುತ್ತಿದ್ದ.
5/ 8
ಊರಿನಲ್ಲಿ ಯಾರಿಗಾದರೂ ಸಮಸ್ಯೆ ಇದೆ ಎಂದು ತಿಳಿದರೆ ರಾತ್ರಿ ಹೋಗಿ ಅವರಿಗೂ ತಿಳಿಯದಂತೆ ಸಹಾಯ ಮಾಡಿ ಬರುತ್ತಿದ್ದ. ಅದೆಷ್ಟೋ ಮನೆಗಳ ಬಳಿ ಹಣವನ್ನು ಇಟ್ಟು ಬರುತ್ತಿದ್ದ. ಇದು ಊರಿನ ಜರನಿಗೆ ಗೊತ್ತಿರಲಿಲ್ಲ. ಎಲ್ಲರಿಗೂ ಆಶ್ಚರ್ಯವಾಗುತ್ತಿತ್ತು.
6/ 8
ಹೀಗಿರುವಾಗ ಒಬ್ಬ ವ್ಯಕ್ತಿಗೆ ಮೂವರು ಹೆಣ್ಣು ಮಕ್ಕಳು, ಅವರ ಮದುವೆ ಮಾಡಲು ಹಣವಿಲ್ಲದೇ ಪರದಾಡುತ್ತಿದ್ದ. ಅವರಿಗೆ ಸಹಾಯ ಮಾಡಲು ಹಣವಿಡಲು ಹೋದಾಗ, ನಿಕೋಲಸ್ ಆ ವ್ಯಕ್ತಿಯ ಕೈನಲ್ಲಿ ಸಿಕ್ಕಿ ಬೀಳುತ್ತಾರೆ. ಆಗ ಈ ವಿಚಾರವನ್ನು ಯಾರಿಗೂ ಹೇಳಬೇಡಿ ಎಂದು ಕೇಳಿಕೊಂಡರೂ ಸಹ ಅದು ಪ್ರಚಾರವಾಗುತ್ತದೆ.
7/ 8
ಕಷ್ಟದಲ್ಲಿ ಇರುವ ವ್ಯಕ್ತಿಗೆ ಸಹಾಯ ಮಾಡಲು ರಾತ್ರಿ ನಿಕೋಲಸ್ ಬರುವ ವಿಚಾರ ಊರಿಂದ ಊರಿಗೆ ಹರಡುತ್ತದೆ. ನಂತರದ ದಿನಗಳಲ್ಲಿ ಇದು ಸಂಪ್ರದಾಯವಾಗಿ ಬದಲಾಗುತ್ತದೆ. ಚರ್ಚ್ನ ಪಾದ್ರಿಗಳು ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಮಕ್ಕಳಿಗೆ ಗಿಫ್ಟ್ ಕೊಡುವ ಪದ್ದತಿ ಆರಂಭವಾಗುತ್ತದೆ. ಈಗಲೂ ಕೆಲ ದೇಶದಲ್ಲಿ ಈ ಪದ್ಧತಿ ಜಾರಿ ಇದೆ.
8/ 8
ಒಟ್ಟಾರೆಯಾಗಿ ಮಕ್ಕಳ ಹಾಗೂ ಜನರ ಸಂತೋಷಕ್ಕಾಗಿ ಆರಂಭವಾದ ಈ ಪದ್ಧತಿ ವಿವಿಧ ಕಡೆಗಳಲ್ಲಿ ವಿಭಿನ್ನವಾಗಿ ಸಹ ಆಚರಣೆ ಮಾಡಲಾಗುತ್ತದೆ. ಸಂಭ್ರಮದ ಹಬ್ಬ ಕ್ರಿಸ್ಮಸ್ ಆಚರನೆಯ ಮೆರಗನ್ನು ಇದು ಹೆಚ್ಚಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.