Unique Rituals: ಕೋಲ್ಕತ್ತಾದ ಈ ಚೀನೀ ಕಾಳಿ ಮಂದಿರದಲ್ಲಿ ದೇವರಿಗೆ ಅರ್ಪಣೆ ಆಗತ್ತೆ ನ್ಯೂಡಲ್ಸ್
ನಮ್ಮ ದೇಶದಲ್ಲಿ ವಿವಿಧ ಧರ್ಮಗಳು ಮತ್ತು ಸಂಸ್ಕೃತಿಗಳನ್ನು ಕಾಣಬಹುದಾಗಿದ್ದು, ಇಲ್ಲಿ ಅನೇಕ ದೇಗುಲಗಳನ್ನು ಕಾಣಬಹುದಾಗಿದೆ. ಈ ದೇಗುಲಗಳ ಆಚರಣೆಯಲ್ಲಿ ವಿಶೇಷತೆಗಳು ಉಂಟು. ಇದೇ ರೀತಿಯ ವಿಶೇಷತೆಯೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಚೀನಿ ಕಾಳಿ ಮಂದಿರದಲ್ಲಿ ಕಾಣಬಹುದು.
ಕೋಲ್ಕತ್ತಾದ ತಂಗ್ರಾ ಪ್ರದೇಶದಲ್ಲಿ ವಾಸಿಸುವ ಚೀನೀ ಸಮುದಾಯಗಳು ಇಲ್ಲಿ ಕಾಳಿಯನ್ನು ಆರಾಧಿಸುತ್ತಾರೆ. ಇದೇ ಕಾರಣದಿಂದ ಈ ದೇಗುಲಕ್ಕೆ ಚೀನಿ ಕಾಳಿ ಮಂದಿರ ಎಂಬ ಹೆಸರು ಬಂದಿದೆ.
2/ 8
ಇದು ಚೀನಿಯರ ದೇಗುಲವಾದರೂ ಇಲ್ಲಿ ಕಾಳಿ ದೇವಿಯನ್ನು ಪೂಜಿಸಲು ಹಿಂದೂ ಆಚರಣೆಗಳನ್ನು ಅನುಸರಿಸುತ್ತಾರೆ. ಜೊತೆಗೆ ಮೇಣದಬತ್ತಿಗಳು, ಚೈನೀಸ್ ಅಗರಬತ್ತಿಗಳನ್ನು ಬೆಳಗಿಸುತ್ತಾರೆ.
3/ 8
ಈ ದೇಗುಲದ ವಿಶೇಷ ಎಂದರೆ, ಇಲ್ಲಿ ದೇವಿಗೆ ಪ್ರಸಾದವಾಗಿ ಚೈನೀಸ್ ಶೈಲಿಯಲ್ಲಿ ಬೇಯಿಸಿದ ನೂಡಲ್ಸ್, ಚೋಪ್ಸುಯಿ ಮತ್ತು ತರಕಾರಿಗಳನ್ನು ನೀಡಲಾಗುವುದು. ಅಲ್ಲದೇ, ಭಕ್ತರಿಗೂ ಕೂಡ ಇದೇ ನ್ಯೂಡಲ್ಸ್ ಅನ್ನು ಪ್ರಸಾದವಾಗಿ ನೀಡುವ ಸಂಪ್ರದಾಯ ಇದೆ.
4/ 8
ಈ ಪ್ರದೇಶವೂ ಚೀನಾ ಟೌನ್ ಎಂದೇ ಇಲ್ಲಿ ಪ್ರಸಿದ್ದಿಯಾಗಿದೆ. ಇಲ್ಲಿ ಟಿಬೆಟಿಯನ್ ಮತ್ತು ಪೂರ್ವ ಏಷ್ಯಾದ ಸಂಸ್ಕೃತಿಯ ಮಿಶ್ರಣವನ್ನು ನೋಡಬಹುದು,
5/ 8
ಈ ದೇವಾಲಯ ಮತ್ತು ವಿಗ್ರಹವು ಭಾರತದ ಇತರ ಯಾವುದೇ ಕಾಳಿ ದೇವಿಯ ದೇವಾಲಯದಲ್ಲಿರುವಂತೆಯೇ ಇದೆ. ಆದರೆ, ಪ್ರಸಾದ ಮಾತ್ರ ವಿಭಿನ್ನವಾಗಿದೆ.
6/ 8
ಬಂಗಾಳಿಯ ಅರ್ಚಕರೇ ಈ ದೇಗುಲದಲ್ಲಿ ಪೂಜಾ ಕೈಂಕಾರ್ಯ ನೇರವೇರಿಸುತ್ತಾರೆ. ಇಲ್ಲಿ ದುಷ್ಟಶಕ್ತಿಗಳನ್ನು ಕೊಲ್ಲಲು ಇಲ್ಲಿ ಕೈಯಿಂದ ಮಾಡಿದ ಕಾಗದಗಳನ್ನು ಸುಡಲಾಗುತ್ತದೆ.
7/ 8
ದೀಪಾವಳಿ ಆಚರಣೆಯ ಸಮಯದಲ್ಲಿ, ಎತ್ತರದ ಮೇಣದಬತ್ತಿಗಳನ್ನು ಚೈನೀಸ್ ಧೂಪದ್ರವ್ಯದ ಬೆಳಗಿಸಲಾಗುತ್ತದೆ. ಈ ದೇಗುಲ ಹಿಂದೂ ದೇಗುಲಗಳಿಗಿಂತ ಭಿನ್ನವಾಗಿಲ್ಲ
8/ 8
ದೇವಾಲಯವು 80 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. 60 ವರ್ಷಗಳ ಕಾಲ, ಇಲ್ಲಿ ದೇಗುಲ ನಿರ್ಮಾಣ ಮಾಡುವ ಮೊದಲು ಮರದ ಕೆಳಗೆ ಎರಡು ಗ್ರಾನೈಟ್ ಕಲ್ಲುಗಳನ್ನು ಪೂಜಿಸುತ್ತಿದ್ದರು. ಸುಮಾರು 20 ವರ್ಷಗಳ ಹಿಂದೆ, ಬಂಗಾಳಿ ಮತ್ತು ಚೈನೀಸ್ ಸಮುದಾಯದ ಜನರು ಒಟ್ಟಾಗಿ ಚೀನೀ ಕಾಳಿ ದೇವಸ್ಥಾನವನ್ನು ನಿರ್ಮಿಸಿದರು.