ಜನದಟ್ಟಣೆ ತಪ್ಪಿಸಲು ಪ್ರಯಾಣಿಕರ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ. ಚಾರ್ಧಾಮ್ ಯಾತ್ರೆಗೆ ಮೊದಲ ಹಂತದಲ್ಲಿ ಕೇದಾರನಾಥಕ್ಕೆ ಪ್ರತಿದಿನ ಕೇವಲ 9000 ಮತ್ತು ಬದರಿನಾಥಕ್ಕೆ 10000 ನೋಂದಾಣಿಗೆ ಅವಕಾಶ ನೀಡಲಾಗಿದೆ. ಕೇದಾರನಾಥ ಮತ್ತು ಬದರಿನಾಥದಲ್ಲಿ ಪ್ರಯಾಣಿಕರ ಸಾಮರ್ಥ್ಯವನ್ನು ಕ್ರಮವಾಗಿ 15000 ಮತ್ತು 18000 ಎಂದು ನಿಗದಿಪಡಿಸಲಾಗಿದೆ. ಅಂದರೆ ಎರಡೂ ಧಾಮಗಳಿಗೆ ಪ್ರತಿದಿನ ಕೇವಲ 55 ರಿಂದ 60 ಪ್ರತಿಶತದಷ್ಟು ನೋಂದಣಿಗಳು ನಡೆಯುತ್ತವೆ. ಉಳಿದ ನೋಂದಣಿಯು ಎಲ್ಲಾ ನಾಲ್ಕು ಧಾಮಗಳಿಗೆ ಭೇಟಿ ನೀಡಲು ಒಟ್ಟಿಗೆ ಬರುವ ಭಕ್ತರಿಗೆ ಇರುತ್ತದೆ.
ವೆಬ್ಸೈಟ್ ಮೂಲಕ ನೋಂದಾಯಿಸುವುದು ತುಂಬಾ ಸುಲಭವಾದ ಪ್ರಕ್ರಿಯೆ ಆಗಿದ್ದು. ಇದಕ್ಕಾಗಿ ನೀವು registrationandtouristcare.uk.gov.in ಗೆ ಹೋಗಬೇಕು. ಇದರ ನಂತರ, ನೀವು ನೋಂದಣಿ/ಲಾಗಿನ್ಗೆ ಮಾಡಬೇಕು. ನಂತರ ಹೆಸರು, ವಿಳಾಸ, ಫೋನ್ ಸಂಖ್ಯೆ ಸೇರಿದಂತೆ ಇತರ ಮಾಹಿತಿಯನ್ನು ಕೊಟ್ಟು ನೀವೇ ನೋಂದಾಯಿಸಿಕೊಳ್ಳಬಹುದು. ಆದರೆ ಒಂದು ಮೊಬೈಲ್ ಸಂಖ್ಯೆ ಅಡಿಯಲ್ಲಿ ಎಷ್ಟು ಪ್ರಯಾಣಿಕರನ್ನು ನೋಂದಾಯಿಸಲಾಗುತ್ತದೆ ಎಂಬುದರ ಕುರಿತು ಯಾವುದೇ ಸಂಖ್ಯೆಯನ್ನು ನಿರ್ಧರಿಸಲಾಗಿಲ್ಲ.
ನೀವು WhatsApp ಮೂಲಕ ಸಹ ಚಾರ್ಧಾಮ್ ಯಾತ್ರೆಗೆ ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ನೀವು 8394833833 ಗೆ ವಾಟ್ಸಾಪ್ ಮಾಡಬಹುದು. ನೋಂದಾಯಿಸಲು, ನೀವು ಯಾತ್ರಾ ಎಂದು ಟೈಪ್ ಮಾಡಬೇಕು ಮತ್ತು ಅದನ್ನು ಈ WhatsApp ಸಂಖ್ಯೆಗೆ ಕಳುಹಿಸಬೇಕು. ಇದರ ನಂತರ, ಮೆಸೇಜ್ ಮೂಲಕ ಕೆಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ, ಅದಕ್ಕೆ ಉತ್ತರಿಸಿ ನೀವು ಸುಲಭವಾಗಿ ಚಾರ್ಧಾಮ್ ಯಾತ್ರೆಗೆ ನೋಂದಾಯಿಸಿಕೊಳ್ಳಬಹುದು.