Guru Raghavendra Swamy: ರಾಯರ ಪೂಜೆ ವೇಳೆ ಈ ಮಂತ್ರ ಜಪಿಸಿದ್ರೆ ಕಷ್ಟ ಪರಿಹಾರ
ಕಲಿಯುಗದ ಕಾಮಧೇನು ಮಂತ್ರಾಲಯದ ಗುರು ರಾಘವೇಂದ್ರರ (Mantralaya Raghavendra swamy) ಆರಾಧನೆ ಮಾಡದವರಿಲ್ಲ. ರಾಘವೇಂದ್ರರ ಆರಾಧ್ಯ ದೈವ ಮೂಲ ರಾಮ ಅಂದರೆ ಮಹಾ ವಿಷ್ಣು. ಜೀವನದಲ್ಲಿ ಎಂತಹ ಕಷ್ಟಗಳೇ ಬಂದರೂ ಶ್ರೀ ಗುರು ರಾಯರ ಸ್ಮರಣೆ ಮಾಡಿದರೆ ಎಂತಹ ಕಷ್ಟಗಳಿಂದಲೂ ಪರಿಹಾರ ಆಗುತ್ತದೆ. ಇನ್ನು ಗುರುವಾರದ ಸಮಯದಲ್ಲಿ ಪೂಜೆ ವೇಳೆ ಈ ಮಂತ್ರ ಜಪಿಸಿದರೆ ಇಷ್ಟಾರ್ಥ ಸಿದ್ದಿಸುತ್ತದೆ ಎಂಬ ನಂಬಿಕೆ ಇದೆ.
ರಾಘವೇಂದ್ರ ಗಾಯತ್ರಿ ಮಂತ್ರ ತುಂಬಾ ಶ್ರೇಷ್ಠವಾದದ್ದು ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ ಮೂರು ಬಾರಿ ಅಥವಾ ಐದು ಬಾರಿ ಒಂಬತ್ತು ಬಾರಿ ಇಪ್ಪತ್ತು ಬಾರಿ ಹನ್ನೊಂದು ಬಾರಿ ಹೀಗೆ ನಿಮಗೆ ಆದಷ್ಟು ಬಾರಿ ಪಠಿಸಿದರೆ ಕಷ್ಟ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ.
2/ 5
ಓಂ ವೆಂಕಟನಾಥಾಯ ವಿಧ್ಮಹೇ ಸಚಿದಾನಂದಾಯ ಧಿಮಹಿ ತನು ರಾಘವೇಂದ್ರ ಪ್ರಚೋದಯಾತ್ ಮಂತ್ರ ತುಂಬಾ ಶಕ್ತಿಯನ್ನು ಹೊಂದಿದ್ದು, ಇದರ ಪಠಣದಿಂದ ಸಂಕಷ್ಟ ನಿವಾರಣೆ ಆಗುತ್ತದೆ ಎನ್ನಲಾಗಿದೆ.
3/ 5
ಇನ್ನು ಈ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನವೂ ಪಠಿಸಲು ಆಗಲಿಲ್ಲ ಅಂದರೆ ರಾಯರ ವಿಶೇಷ ದಿನವಾದ ಗುರುವಾರ ಪಠಿಸಬಹುದು. ಇಲ್ಲ ಶುಕ್ಲ ಪಕ್ಷ ದಿನಗಳಲ್ಲಿ ಪಠಿಸುವುದರಿಂದ ಒಳಿತು ಆಗುತ್ತದೆ ಎಂಬ ನಂಬಿಕೆ ಇದೆ.
4/ 5
ಗುರುವಾರದಂದು ಶ್ರೀ ರಾಘವೇಂದ್ರ ಸ್ವಾಮಿಯನ್ನು ಪೂಜಿಸುವುದರಿಂದ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯು ಪ್ರಾಪ್ತವಾಗುತ್ತದೆ. ಈ ಹಿನ್ನಲೆ ಈ ದಿನ ಪೂಜೆ ವೇಳೆ ಈ ಮಂತ್ರ ಜಪಿಸಿದರೆ ಶುಭ ಆಗಲಿದೆ ಎನ್ನಲಾಗುವುದು
5/ 5
ರಾಯರನ್ನು ಅವರನ್ನು ಶುದ್ಧ ಮನಸ್ಸಿನಿಂದ ಪೂಜೆ ಮಾಡಿ ಈ ವ್ರತವನ್ನು ಆರುವಾರಗಳ ಕಾಲ ನೆರವೇರಿಸಿದರೆ ಎಲ್ಲ ಕಷ್ಟಗಳು ಪರಿಹಾರ ಆಗುತ್ತದೆ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)