ಮದುವೆ ವಿಚಾರದಲ್ಲಿ ಈ ತಪ್ಪು ಮಾಡಿದರೆ ಜೀವನ ಪರ್ಯಂತ ಸಂಕಷ್ಟ ಎನ್ನುತ್ತಾರೆ ಚಾಣಕ್ಯ
ಮದುವೆ (Marriage) ಎಂಬುದು ಜೀವನ ಪರ್ಯಂತ ಸಾಗುವ ಬಂಧ. ಈ ಸಂಬಂಧ ಶಾಶ್ವತವಾಗಿ ಸುಮಧುರವಾಗಿರಬೇಕು ಎಂದರೇ ಕೆಲವು ವಿಷಯಗಳ ಬಗ್ಗೆ ಜಾಗೃತೆ ವಹಿಸುವುದು ಅಗತ್ಯ. ಅದರಲ್ಲೂ ಸಂಗಾತಿ (Partner) ಆಯ್ಕೆ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಿದರೆ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಇದೇ ಕಾರಣಕ್ಕೆ ಚಾಣಕ್ಯರು ನೀತಿ ಶಾಸ್ತ್ರದಲ್ಲಿ ಸಂಗಾತಿ ಆಯ್ಕೆ ವಿಚಾರದಲ್ಲಿ ಕೆಲವು ಮಾನದಂಡಗಳನ್ನು ಅನುಸರಿಸುವಂತೆ ಸೂಚಿಸಿದ್ದಾರೆ.
ಚಾಣಕ್ಯರ ಪ್ರಕಾರ ಮದುವೆಗೆ ಬಾಹ್ಯ ಸೌಂದರ್ಯಕ್ಕಿಂತ ಗುಣಗಳನ್ನು ಪರೀಕ್ಷಿಸಬೇಕು. ಗಂಡು- ಹೆಣ್ಣಿನ ಸಂಬಂಧ ನಂಬಿಕೆ ಮೇಲೆ ಇರುತ್ತದೆ. ಸೌಂದರ್ಯದ ಮೇಲೆ ಅಲ್ಲ. ಸೌಂದರ್ಯಕ್ಕೆ ಮರುಳಾಗಿ ಮದುವೆಯ ನಿರ್ಧಾರವನ್ನು ತೆಗೆದುಕೊಂಡರೆ ಅದು ದೊಡ್ಡ ತಪ್ಪು.
2/ 5
ಚಾಣಕ್ಯನ ಪ್ರಕಾರ, ಜೀವನ ಸಂಗಾತಿಯನ್ನು ಆಯ್ಕೆಮಾಡುವಾಗ ಮಹಿಳೆಯರು ಸಹ ಗಮನ ಹರಿಸಬೇಕು. ಸಂಗಾತಿ ಇಚ್ಛೆಗೆ ಅನುಸಾರವಾಗಿ ಮದುವೆಯಾಗಬೇಕು. ಬಲವಂತದ ಮದುವೆಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅವರು ಹೇಳುತ್ತಾರೆ.
3/ 5
ಚಾಣಕ್ಯನ ಪ್ರಕಾರ, ಸಂಗಾತಿ ನಡುವೆ ಪರಸ್ಪರ ಪ್ರೀತಿ ಮತ್ತು ಕಾಳಜಿ ಅಗತ್ಯ. ಸಂಬಂಧದಲ್ಲಿ ಅತಿ ಜಗಳ ಇರಬಾರದು. ಕುಟುಂಬದ ಸಂತೋಷದ ಬಗ್ಗೆ ಕಾಳಜಿ ಇರಬೇಕು
4/ 5
ಇಬ್ಬರು ಪರಸ್ಪರ ಕುಟುಂಬಗಳನ್ನು ಗೌರವದಿಂದ ಕಾಣಬೇಕು. ಸಂಗಾತಿಯ ನಡುವಿನ ಸಂಬಂಧದಲ್ಲಿ ಕುಟುಂಬಗಳ ಪಾತ್ರ ಕೂಡ ಹೆಚ್ಚಿರುವ ಹಿನ್ನಲೆ ಇಬ್ಬರ ಕುಟುಂಬಗಳ ಬಗ್ಗೆ ಇಬ್ಬರು ವಿಶೇಷ ಒಲವು ಹೊಂದಿರಬೇಕು
5/ 5
ಪರಸ್ಪರರ ಮೇಲೆ ಇರಲಿ ಪ್ರೇಮ: ಪ್ರೀತಿ ಇಲ್ಲದ ಸಂಬಂಧ ಯಾವುದು ಶಾಶ್ವತ ಅಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ಅವಶ್ಯ.