ಅನೇಕ ಜನರು ತಮ್ಮ ಸ್ನೇಹಿತರನ್ನು ಕುರುಡಾಗಿ ನಂಬುತ್ತಾರೆ. ಆದರೆ ಕೆಲವೊಮ್ಮೆ ಈ ಕುರುಡುತನವೇ ನಿಮ್ಮ ನಂಬಿಕೆಯನ್ನು ಮುರಿಯಬಹುದು. ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಕೆಲವೊಂದು ಆಳವಾದ ರಹಸ್ಯಗಳನ್ನು ನಿಮ್ಮ ಸ್ನೇಹಿತರೊಂದಿಗೆ ಎಂದಿಗೂ ಹಂಚಿಕೊಳ್ಳಬೇಡಿ. ಎಷ್ಟೇ ಉತ್ತಮ ಸ್ನೇಹಿತರು ಅವರಾಗಿದ್ದರೂ ಅವಕಾಶ ಸಿಕ್ಕಾಗ ಸ್ನೇಹಿತರು ನಿಮ್ಮ ಗುಟ್ಟನ್ನು ಇತರರ ಮುಂದೆ ತೆರೆದಿಡುತ್ತಾರೆ ಎಂಬುದು ಮರೆಯಬಾರದು.