Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು

Chandika Yaga: ಹಿಂದೂ ಧರ್ಮದಲ್ಲಿ ಅನೇಕ ಪೂಜೆಗಳು, ಹವನಗಳಿದೆ. ಒಂದೊಂದು ಹವನ ಹಾಗೂ ಹೋಮಗಳಿಗೆ ಅದರದ್ದೇ ಆದ ಅರ್ಥ ಹಾಗೂ ಮಹತ್ವವಿದೆ. ಇನ್ನು ಕಾಂಗ್ರೆಸ್​ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಚುನಾವಣೆಯ ಬೆನ್ನಲ್ಲೇ ಚಂಡಿಕಾ ಯಾಗ ಮಾಡಿಸಿದ್ದು, ಇದೀಗ ಸುದ್ದಿಯಾಗಿದೆ. ಇಷ್ಟಕ್ಕೂ ಈ ಚಂಡಿಕಾ ಯಾಗ ಎಂದರೇನು? ಅದರ ಮಹತ್ವೇನು ಎಂಬುದು ಇಲ್ಲಿದೆ.

First published:

  • 18

    Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು

    ರಾಜ್ಯ ರಾಜಕಾರಣದಲ್ಲಿ ಚುನಾವಣೆಯ ಬೆಂಕಿಹೊತ್ತಿ ಉರಿಯುತ್ತಿದ್ದು, ಗೆಲುವಿಗಾಗಿ ಒಂದೆಲ್ಲಾ ಒಂದು ದಾರಿಯನ್ನು ಅನುಸರಿಸುತ್ತಿದ್ದಾರೆ. ಹಾಗೆಯೇ, ರಾಜಕಾರಣಿಗಳು ಅಧಿಕಾರಕ್ಕಾಗಿ ದೇವರ ಮೊರೆ ಹೋಗಿದ್ದು, ವಿವಿಧ ಪೂಜೆಗಳನ್ನು ಮಾಡಿಸುತ್ತಿದ್ದಾರೆ.

    MORE
    GALLERIES

  • 28

    Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು

    ಕಳೆದ ಕೆಲ ತಿಂಗಳ ಹಿಂದಷ್ಟೇ ಮಾಜಿ ಸಿಎಂ ಕುಮಾರಸ್ವಾಮಿ ಚಂಡಿಕಾ ಯಾಗವನ್ನು ಮಾಡಿಸಿದ್ದರು. ಈಗ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಕೂಡ ಶೃಂಗೇರಿಯಲ್ಲಿ ಈ ಚಂಡಿಕಾ ಯಾಗ ಮಾಡಿಸಿದ್ದು, ಗೆಲುವಿಗಾಗಿ ದೇವರ ಬಳಿ ಬೇಡಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಈ ಚಂಡಿಕಾ ಯಾಗವನ್ನು ಯಾರು ಮಾಡಿಸಬೇಕು? ಇದರಿಂದ ಏನೆಲ್ಲಾ ಲಾಭವಿದೆ ಎಂಬುದು ಇಲ್ಲಿದೆ.

    MORE
    GALLERIES

  • 38

    Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು

    ಚಂಡಿಕಾ ದೇವಿಯು ಮಧುಕೈಟಭ, ಮಹಿಷಾಸುರ, ಶುಂಭ, ನಿಶುಂಭ ಸೇರಿದಂತೆ ಅನೇಕ ರಾಕ್ಷಸರನ್ನು ಲೋಕ ಕಲ್ಯಾಣ ಮಾಡಿದ ವಿಚಾರ ಎಲ್ಲರಿಗೂ ಗೊತ್ತಿದೆ. ಈ ಚಂಡಿಕಾ ದೇವಿಯನ್ನು ವರ್ಣಿಸುವ 700 ಶ್ಲೋಕಗಳಿದ್ದು, ಅದನ್ನು ಮಂತ್ರರೂಪಕವಾಗಿ ಹೇಳುತ್ತಾ ಮಾಡುವ ಯಜ್ಞವೇ ಈ ಚಂಡಿಕಾ ಯಾಗ.

    MORE
    GALLERIES

  • 48

    Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು

    ಚಂಡಿಕಾ ಯಾಗವನ್ನು ಯಾರು ಮಾಡಬೇಕು?: ಪುರಾಣಗಳ ಪ್ರಕಾರ ಈ ಯಾಗವನ್ನು ಸುಖಾಸುಮ್ಮನೆ ಮಾಡಲಾಗುವುದಿಲ್ಲ. ಶತ್ರು ಕಾಟ, ಮಾಟ ಮಂತ್ರದಿಂದ ಸಮಸ್ಯೆ ಆಗಿದ್ದರೆ, ಜೀವ ಭಯ ಇದ್ದರೆ ಇದನ್ನು ಮಾಡಬಹುದು. ಹಾಗೆಯೇ ಜ್ಯೋತಿಷಿಗಳ ಸಲಹೆ ಮೇರೆಗೆ ಬೇರೆ ಸಮಸ್ಯೆ ಇದ್ದರೂ ಸಹ ಈ ಯಾಗ ಮಾಡಿಸಬಹುದು.

    MORE
    GALLERIES

  • 58

    Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು

    ಈ ಯಾಗದ ವಿಧಗಳು: ಚಂಡಿಕಾ ಯಾಗದಲ್ಲಿ ಸಹ ಕೆಲ ವಿಧಗಳಿದೆ. ಶತ ಚಂಡಿಕಾ ಯಾಗ, ಪ್ರಯೂತ ಚಂಡಿಯಾಗ, ಆಯುತ ಚಂಡಿಯಾಗ ಎಂದು. ಪರಿಣಿತರ ಸಲಹೆ ಮೇರೆಗೆ ಈ ಯಾಗಗಳನ್ನು ಮಾಡಿಸಬೇಕು.

    MORE
    GALLERIES

  • 68

    Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು

    ಯಾವಾಗ ಈ ಯಾಗ ಮಾಡಬೇಕು? ಈ ಯಾಗವನ್ನು ಮಾಡಲು ಸಹ ಒಂದು ದಿನವಿರುತ್ತದೆ. ಎಲ್ಲಾ ದಿನಗಳಲ್ಲಿ ಅಥವಾ ಹಬ್ಬ ಹರಿದಿನಗಳಲ್ಲಿ ಈ ಯಾಗವನ್ನು ಮಾಡಬಾರದು. ಮಾಘ ಅಮಾವಾಸ್ಯೆ, ಜ್ಯೇಷ್ಠ ಅಮಾವಾಸ್ಯೆ, ನವರಾತ್ರಿ, ಅಷ್ಟಮಿ, ನವಮಿ, ಚತುರ್ದಶಿ ದಿನ ಈ ಯಾಗವನ್ನು ಮಾಡಬಹುದು.

    MORE
    GALLERIES

  • 78

    Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು

    ಯಾಗದಿಂದ ಪ್ರಯೋಜನಗಳು: ಕೆಟ್ಟ ಶಕ್ತಿಗಳನ್ನು ಹೋಗಲಾಡಿಸಿ ಜೀವನದಲ್ಲಿ ಶಾಂತಿ ಹೆಚ್ಚಿಸುತ್ತದೆ. ಮಾಟ ಮಂತ್ರದಿಂದ ಸಮಸ್ಯೆ ಆಗಿದ್ದರೆ ಅದಕ್ಕೆ ಸಹ ಇದರಿಂದ ಪರಿಹಾರ ಸಿಗುತ್ತದೆ. ಒಟ್ಟಾರೆ ಬದುಕಿನ ಅನೇಕ ಸಮಸ್ಯೆಗಳಿಗೆ ಇದು ಮುಕ್ತಿ ನೀಡುತ್ತದೆ.

    MORE
    GALLERIES

  • 88

    Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES