Chanakya Niti: ಜೀವನದಲ್ಲಿ ಯಶಸ್ಸು ಬೇಕು ಅಂದ್ರೆ ಚಾಣಕ್ಯರ ಈ ಮಾತು ಕೇಳಿ
Chanakya Success Mantra: ಚಾಣಕ್ಯನ ಪ್ರಕಾರ ಕಲಿಯುಗದಲ್ಲಿ ಕಾಲ ಬದಲಾದಂತೆ ನಾವು ಬದಲಾಗದಿದ್ದರೆ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಸ್ಪರ್ಧೆಯಲ್ಲಿ ಹಿಂದೆ ಉಳಿಯಬಾರದು ಎಂದರೆ ಕೆಲವೊಂದು ಸಲಹೆ ಪಾಲಿಸಬೇಕು. ಚಾಣಕ್ಯನ ಪ್ರಕಾರ ಯಶಸ್ಸು ಪಡೆಯಲು ಏನು ಮಾಡಬೇಕು ಎಂಬುದು ಇಲ್ಲಿದೆ.
ಜೀವನದಲ್ಲಿ ಯಶಸ್ಸು ಬೇಕು ಎಂದು ಹಲವಾರು ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ ಸಕ್ಸಸ್ ಸಿಗುವುದಿಲ್ಲ. ಕೆಲವೊಬ್ಬರು ಅಡ್ಡದಾರಿ ಹಿಡಿಯುತ್ತಾರೆ. ಅದರ ಬದಲು ಜೀವನದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕು ಎನ್ನುತ್ತಾರೆ ತಜ್ಞರು.
2/ 8
ನೀವು ಯಶಸ್ವಿಯಾಗಬೇಕು ಎಂದರೆ ಕೇವಲ ಕಷ್ಟಪಟ್ಟು ಕೆಲಸ ಮಾಡುವುದಲ್ಲದೇ, ಬುದ್ದಿವಂತಿಕೆಯಿಂದ ಸಹ ಕೆಲಸ ಮಾಡಬೇಕು. ಹಾಗೆಯೇ ನಿಮ್ಮ ಕೆಲಸದ ಬಗ್ಗೆ ನಂಬಿಕೆ ಬಹಳ ಅಗತ್ಯ.
3/ 8
ಮೊದಲು ನೀವು ಮಾಡುವ ಕೆಲಸದ ಮೇಲೆ ನಂಬಿಕೆ ಇರಬೇಕು. ಆಗ ಮಾತ್ರ ಜೀವನದಲ್ಲಿ ಸಕ್ಸಸ್ ಪಡೆಯಲು ಸಾಧ್ಯ. ಹಾಗೆಯೇ ನಿಮ್ಮ ಪ್ರಾಮಾಣಿಕತೆ ಸಹ ಇಲ್ಲಿ ಬಹಳ ಮುಖ್ಯವಾಗುತ್ತದೆ. ಕೆಲಸವನ್ನು ನಿಷ್ಠೆಯಿಂದ ಮಾಡುವುದು ಮುಖ್ಯ.
4/ 8
ಕೆಲಸ ದೊಡ್ಡದಿರಲಿ ಚಿಕ್ಕದಿರಲಿ ಅದನ್ನು ಸರಿಯಾಗಿ ಮಾಡುವುದು ಬಹಳ ಉತ್ತಮ. ನೀವು ನಿಮ್ಮ ಕೆಲಸವನ್ನು ನಂಬಬೇಕೇ ಹೊರತು ಅದೃಷ್ಟವನ್ನಲ್ಲ. ಆಗ ಮಾತ್ರ ಯಶಸ್ಸಿನ ಮೆಟ್ಟಿಲು ಹತ್ತಲು ಸಾಧ್ಯವಾಗುತ್ತದೆ.
5/ 8
ಹಾಗೆಯೇ ನಿಮ್ಮ ಕೆಲಸವನ್ನು ಇನ್ನೊಬ್ಬರ ಕೆಲಸಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಇದರಿಂದ ನಿಮಗೆ ಲಾಸ್ ಆಗುತ್ತದೆ. ಪ್ರತಿಯೊಬ್ಬರ ಕೆಲಸವೂ ವಿಭಿನ್ನ ಹಾಗೂ ಕಷ್ಟ. ಯಾರದ್ದೇ ಕೆಲಸ ನಮಗೆ ಸುಲಭ ಅನಿಸುತ್ತದೆ, ಆದರೆ ಮಾಡಲು ಹೋದರೆ ಕಷ್ಟ. ಹಾಗಾಗಿ ಹೋಲಿಕೆ ಮಾಡದೇ ನಿಮ್ಮ ದಾರಿಯಲ್ಲಿ ನಡೆಯಿರಿ.
6/ 8
ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಕೆಲಸವನ್ನು ಮಾಡಬೇಕು. ನಿಮಗೆ ಯಾವುದೇ ಕೆಲಸ ಕಷ್ಟ ಅನಿಸಬಹುದು, ಆದರೆ ನಿಮ್ಮ ಸಾಮರ್ಥ್ಯದ ಮೇಲೆ ಅನುಮಾನಪಡದೇ ಟ್ರೈ ಮಾಡುವುದರಲ್ಲಿ ತಪ್ಪಿಲ್ಲ. ಹಾಗೆಯೇ, ಸಾಮರ್ಥ್ಯವನ್ನು ಮೀರಿ ನೀವು ಯಾವುದೇ ಕೆಲಸವನ್ನು ಮಾಡಬಾರದು.
7/ 8
ಹಾಗೆಯೇ ನೀವು ಯಾವುದೇ ಹೊಸ ಕೆಲಸಕ್ಕೆ ಕೈ ಹಾಕುವ ಮೊದಲು ಎಲ್ಲಾ ಮಾಹಿತಿ ತಿಳಿದುಕೊಂಡಿರುವುದು ಮುಖ್ಯವಾಗುತ್ತದೆ. ಆಗ ಮಾತ್ರ ನಿಮಗೆ ಯಶಸ್ಸು ಸಿಗುತ್ತದೆ. ನಿಮ್ಮ ಜೊತೆ ಯಾರಿದ್ದಾರೆ ಎಂಬುದು ಸಹ ಯಶಸ್ಸು ಪಡೆಯಲು ಸಹಾಯ ಮಾಡುತ್ತದೆ.
8/ 8
ಹಾಗೆಯೇ ನೀವು ಕೆಲಸವನ್ನು ಮಾಡುವಾಗ ವಿಚಾರಗಳನ್ನು ಯಾರ ಬಳಿಯೂ ಹೇಳಿಕೊಳ್ಳಬಾರದು. ಸಾಧ್ಯವಾದಷ್ಟು ಗುಟ್ಟಾಗಿ ಮಾಡುವುದು ಜೀವನದಲ್ಲಿ ಯಶಸ್ಸು ಸಾಧಿಸಲು ಸಹಾಯ ಮಾಡುತ್ತದೆ. ನಿಮ್ಮವರು ಯಾರು ಎಂಬುದು ನಿಮಗೆ ಅರ್ಥವಾಗುವುದಿಲ್ಲ. ಹಾಗಾಗಿ ಯಾರನ್ನು ನಂಬಬೇಡಿ.