ಚಾಣಕ್ಯ ನೀತಿಯಲ್ಲಿನ (Chanakya niti) ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ಇಂದಿಗೂ ರಾಜ್ಯಭಾರ ಮಾಡಲಾಗುತ್ತದೆ. ನೀತಿ ಶಾಸ್ತ್ರದ (Niti Shastra) ಮೂಲಕ ಯಶಸ್ಸಿನ ಪಾಠ ಹೇಳಿದ್ದಾರೆ
2/ 8
ಚಾಣಕ್ಯ ನೀತಿಯ ಪ್ರಕಾರ, ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸುವವರಿಗೆ ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿದೆ. ಆದ್ದರಿಂದ, ನೀವು ದಿನವನ್ನು ಯಶಸ್ವಿಗೊಳಿಸಲು ಬಯಸಿದರೆ, ಕೆಲವು ವಿಷಗಳನ್ನು ಗಮನದಲ್ಲಿ ಇರಿಸಬೇಕು
3/ 8
ಸಮಯವನ್ನು ವ್ಯರ್ಥ ಮಾಡಬಾರದು ಎಂದು ಚಾಣಕ್ಯ ನೀತಿ ಹೇಳುತ್ತದೆ. ಜೀವನದಲ್ಲಿ ಸಮಯದ ಮಹತ್ವವನ್ನು ತಿಳಿದಿಲ್ಲದ ಜನರು ತಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನೀವು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ, ಸಮಯ ಹಾಳು ಮಾಡಬಾರದು
4/ 8
ಚಾಣಕ್ಯ ನೀತಿ. ಸೂರ್ಯೋದಯಕ್ಕೆ ಮುಂಚೆಯೇ ಎಳುವವರು ಅವರು ದಿನದ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುತ್ತಾರೆ. ಮುಂಜಾನೆ ಬೇಗ ಎಳುವವರಿಗೆ ಸೋಮಾರಿತನ ಹತ್ತಿರ ಬರುವುದಿಲ್ಲ. ಆಚಾರ್ಯ ಚಾಣಕ್ಯರ ಪ್ರಕಾರ ಬೇಗ ಮಲಗುವುದು ಮತ್ತು ಬೇಗ ಏಳುವುದು ಉನ್ನತಿಗೆ ಸಹಾಯವಾಗಲಿದೆ
5/ 8
ಒಬ್ಬ ವ್ಯಕ್ತಿಯು ತನ್ನ ಆರೋಗ್ಯದ ಬಗ್ಗೆ ಯಾವಾಗಲೂ ಗಂಭೀರವಾಗಿರಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ. ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸುವ ಜನರು ರೋಗಗಳಿಂದ ಸುತ್ತುವರೆದಿರುತ್ತಾರೆ. ರೋಗದಿಂದ ದೂರವಿರಬೇಕಾದರೆ ಪೌಷ್ಟಿಕ ಆಹಾರ ಸೇವನೆ ಮಾಡಬೇಕು.
6/ 8
ಚಾಣಕ್ಯ ನೀತಿ ಹೇಳುತ್ತದೆ, ಉತ್ತಮ ಮಾತು ಹೊಂದಿರುವ ವ್ಯಕ್ತಿಯು ಶೀಘ್ರದಲ್ಲೇ ಯಶಸ್ಸನ್ನು ಪಡೆಯುತ್ತಾನೆ. ಉತ್ತಮ ಧ್ವನಿ ಎಲ್ಲರಿಗೂ ಪ್ರಿಯ. ಪ್ರೀತಿಯಿಂದ ಮಾತನಾಡುವ ಮೂಲಕ, ಒಬ್ಬ ವ್ಯಕ್ತಿಯು ಅತ್ಯಂತ ದೊಡ್ಡ ಕೆಲಸವನ್ನು ಸಹ ಸುಲಭವಾಗಿ ಮಾಡುತ್ತಾನೆ.
7/ 8
ಚಾಣಕ್ಯ ನೀತಿ ಪ್ರಕಾರ ವಿನಯವು ಎಲ್ಲರಿಗೂ ಇಷ್ಟವಾಗುವ ಗುಣವಾಗಿದೆ. ವಿನಮ್ರ ವ್ಯಕ್ತಿಗೆ ಎಲ್ಲೆಡೆ ಗೌರವ ಸಿಗುತ್ತದೆ. ಈ ಹಿನ್ನಲೆ ಮಾತಿನಲ್ಲಿ ವಿನಯತೆ ಇರಬೇಕು
8/ 8
ಶಿಸ್ತಿನ ಮನೋಭಾವವು ಕೆಲಸದಲ್ಲಿ ಯಶಸ್ಸನ್ನು ನೀಡುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ. ಶಿಸ್ತಿನ ಮೂಲಕ ಸಮಯದ ಮಹತ್ವ ತಿಳಿಯುತ್ತದೆ. ಯಾರ ಜೀವನ ಶಿಸ್ತಿನದ್ದಾಗಿದೆಯೋ, ಅವನ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಂತಹ ಜನರು ಕಷ್ಟಕರವಾದ ಗುರಿಗಳನ್ನು ಸಹ ಸುಲಭವಾಗಿ ಸಾಧಿಸುತ್ತಾರೆ.