Chanakya Niti: ಜೀವನದ ಯಶಸ್ಸಿಗೆ ಕತ್ತೆಯ ಈ ಪಾಠ ನೆನಪಿನಲ್ಲಿಡಬೇಕಂತೆ
ಚಾಣಕ್ಯ ತಮ್ಮ ಜ್ಞಾನ ಮತ್ತು ನೀತಿಶಾಸ್ತ್ರದ ಅನುಭವದ ಆಧಾರದ ಮೇಲೆ, ಜೀವನದ ಪ್ರತಿಯೊಂದು ಸಂದರ್ಭವನ್ನು ಎದುರಿಸಲು ಅನೇಕ ಪಾಠ ತಿಳಿಸಿದ್ದಾರೆ. ಜೀವನದ ಸಂತೋಷ ಮತ್ತು ದುಃಖದಲ್ಲಿ ವಿಚಲಿತರಾಗದಂತೆ ಹೇಗೆ ಬದುಕು ಸಾಗಿಸಬೇಕು ಎಂದು ಸಲಹೆ ನೀಡಿದ್ದಾರೆ, ಹಾಗೆಯೇ ಅವರು ಯಶಸ್ಸನ್ನು ಪಡೆಯಲು ಕೂಡ ಅನೇಕ ಮಾತು ತಿಳಿಸಿದ್ದಾರೆ. ಇವುಗಳನ್ನು ಅಳವಡಿಸಿಕೊಂಡರೆ ವ್ಯಕ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗವನ್ನು ಮುಟ್ಟಬಹುದು.
ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಯಶಸ್ವಿಯಾಗಲು ಯಾವ ವಿಷಯಗಳನ್ನು ತಪ್ಪಿಸಬೇಕು ಮತ್ತು ತನ್ನಲ್ಲಿ ಯಾವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇದರಿಂದ ಅವನು ಸಂತೋಷದ ಜೀವನವನ್ನು ನಡೆಸಬಹುದು.
2/ 6
ನೀತಿಶಾಸ್ತ್ರದ ಪ್ರಕಾರ, ಕತ್ತೆಯ ಜೀವನವು ಮೂರು ವಿಷಯಗಳನ್ನು ಕಲಿಸುತ್ತದೆ. ಒಂದು, ನಿಮ್ಮ ಹೊರೆಯನ್ನು ಬೇರೆಯವರ ಮೇಲೆ ಹೊರಲು ಬಿಡಬೇಡಿ, ಎರಡನೆಯದು, ಕೆಲವು ಕೆಲಸ ಮಾಡುವಾಗ ಅನ್ಯ ಚಿಂತೆ ಬೇಡ. ಮೂರನೆಯದು ಜೀವನದಲ್ಲಿ ಯಾವುದೇ ಕೆಲಸದಲ್ಲೂ ತೃಪ್ತಿ ಕಾಣಬೇಕು
3/ 6
ಆಚಾರ್ಯ ಚಾಣಕ್ಯರ ಪ್ರಕಾರ, ಬುದ್ಧಿವಂತನು ತನ್ನ ಇಂದ್ರಿಯಗಳನ್ನು ಬಕ ಪಕ್ಷಿಯಂತೆ ನಿಯಂತ್ರಿಸುವ ಮೂಲಕ ತನ್ನ ಗುರಿಯ ಮೇಲೆ ಕಣ್ಣಿಡುತ್ತಾನೆ. ಇದರಿಂದ ಅವನು ತನ್ನ ಗುರಿಯಿಂದ ಸ್ವಲ್ಪವೂ ವಿಮುಖನಾಗುವುದಿಲ್ಲ.
4/ 6
ನೀತಿಶಾಸ್ತ್ರದ ಪ್ರಕಾರ, ಜೀವನದಲ್ಲಿ ಕೆಲವು ವಿಷಯಗಳನ್ನು ಕಾಳಜಿ ವಹಿಸಬೇಕು. ಪಾಪಿಯ ಮಿತ್ರನಾಗುವುದಕ್ಕಿಂತ ಮಿತ್ರನಿಲ್ಲದೇ ಇರುವುದು ಮೇಲು. ಹಾಗೆಯೇ ಮೂರ್ಖನಿಗೆ ಶಿಷ್ಯನಿಲ್ಲದ ಗುರುವಿರುವುದಕ್ಕಿಂತ ಗುರುವಾಗುವುದೇ ಮೇಲು.
5/ 6
ಚಾಣಕ್ಯರ ಪ್ರಕಾರ, ದುರಾಸೆಯ ವ್ಯಕ್ತಿಯನ್ನು ಉಡುಗೊರೆಗಳನ್ನು ನೀಡಿ ತೃಪ್ತಿಪಡಿಸಿ, ಗಟ್ಟಿಮುಟ್ಟಾದ ವ್ಯಕ್ತಿಯನ್ನು ಕೈಮುಗಿದು ತೃಪ್ತಿಪಡಿಸಿ. ಹಾಗೆಯೇ ಮೂರ್ಖನನ್ನು ಗೌರವದಿಂದ ಸಂತೃಪ್ತಿಗೊಳಿಸಬಹುದು, ಆದರೆ ವಿದ್ವಾಂಸನು ಸತ್ಯವನ್ನು ನುಡಿಯುವುದರಿಂದ ಮಾತ್ರ ತೃಪ್ತನಾಗುತ್ತಾನೆ.
6/ 6
ವ್ಯಕ್ತಿಯು ತನ್ನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಪರಿಣಾಮಗಳನ್ನು ಅನುಭವಿಸುತ್ತಾನೆ. ಅವನ ಸ್ವಂತ ಕ್ರಿಯೆಗಳಿಂದ ಅವನು ಜಗತ್ತಿನಲ್ಲಿ ಬಂಧಿತನಾಗಿರುತ್ತಾನೆ ಮತ್ತು ಅವನ ಸ್ವಂತ ಕ್ರಿಯೆಗಳಿಂದ ಅವನು ಬಂಧನದಿಂದ ಮುಕ್ತನಾಗುತ್ತಾನೆ.