Chanakya Niti: ಇವುಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಮುನ್ನ ಒಮ್ಮೆ ಯೋಚಿಸಬೇಕಂತೆ
Chanakya Niti: ಸರ್ವಕಾಲಕ್ಕೂ ದಾರಿ ತೋರುವ ಅನೇಕ ವಿಷಯಗಳ ಕುರಿತು ಚಾಣಕ್ಯ ತಿಳಿಸಿದ್ದಾನೆ. ಚಾಣಕ್ಯನ ಈ ಮಾರ್ಗಗಳನ್ನು ಅನುಸರಿಸಿದರೆ, ಯಶಸ್ಸು ಲಭ್ಯ. ಇದೇ ವೇಳೆ ವ್ಯಕ್ತಿಯನ್ನು ತೊಂದರೆಗೆ ಸಿಲುಕಿಸುವ ವಿಚಾರಗಳ ಕುರಿತು ತಿಳಿಸಿದ್ದಾನೆ ಚಾಣಕ್ಯ.
ಚಾಣಕ್ಯ ನೀತಿಯಲ್ಲಿ ವ್ಯಕ್ತಿಯೊಬ್ಬನ ಜೀವನದ ಯಶಸ್ಸಿನ ಮಂತ್ರಗಳನ್ನು ತಿಳಿಸಲಾಗಿದೆ. ಸರ್ವಕಾಲಕ್ಕೂ ದಾರಿ ತೋರುವ ಅನೇಕ ವಿಷಯಗಳ ಕುರಿತು ಚಾಣಕ್ಯ ತಿಳಿಸಿದ್ದಾನೆ. ಚಾಣಕ್ಯನ ಈ ಮಾರ್ಗಗಳನ್ನು ಅನುಸರಿಸಿದರೆ, ಯಶಸ್ಸು ಲಭ್ಯ. ಇದೇ ವೇಳೆ ವ್ಯಕ್ತಿಯನ್ನು ತೊಂದರೆಗೆ ಸಿಲುಕಿಸುವ ವಿಚಾರಗಳ ಕುರಿತು ತಿಳಿಸಿದ್ದಾನೆ ಚಾಣಕ್ಯ.
2/ 8
ನಿಮ್ಮ ಆರ್ಥಿಕ ಪರಿಸ್ಥಿತಿ ಬಗ್ಗೆ ತಿಳಿಸಬೇಡಿ: ವ್ಯಕ್ತಿಯೊಬ್ಬನ ಆರ್ಥಿಕ ಸ್ಥಿತಿ ಅನುಸರಿಸಿ ಆತನ ಜೊತೆಗೆ ಇರುವ ಮಂದಿ ಅನೇಕರು. ಈ ಹಿನ್ನಲೆ ನೀವು ಆರ್ಥಿಕ ಸಂಕಷ್ಟಕ್ಕೆ ಒಳಗಾದಾಗ ಈ ಕುರಿತು ತಿಳಿಸಬೇಡಿ. ಇದರಿಂದ ಅನೇಕರು ದೂರಾಗುವ ಸಾಧ್ಯತೆ ಹೆಚ್ಚು.
3/ 8
ಮನದೊಳಗೆ ಇರಲಿ ದುಃಖ : ದುಃಖವಿಲ್ಲದ ಯಾವುದೇ ವ್ಯಕ್ತಿ ಇಲ್ಲ. ನಿಮ್ಮ ಮನಸ್ಸಿನಲ್ಲಿ ಏನಾದರೂ ದುಃಖವಿದ್ದರೆ, ನಿಮ್ಮ ದುಃಖವನ್ನು ನೀವು ಯಾರಿಗೂ ಹೇಳಬಾರದು. ಏಕೆಂದರೆ ಪ್ರತಿಯೊಬ್ಬರೂ ತೊಂದರೆಗೊಳಗಾದ ವ್ಯಕ್ತಿಯಿಂದ ದೂರವಿರಲು ಇಷ್ಟಪಡುತ್ತಾರೆ. ಆದ್ದರಿಂದ ನಿಮ್ಮ ಸಮಸ್ಯೆ ಬೇರೆಯವರೊಂದಿಗೆ ಹೇಳುವಾಗ ಎಚ್ಚರ
4/ 8
ರಹಸ್ಯಗಳು ನಿಮ್ಮಲ್ಲೇ ಇರಲಿ: ವ್ಯಕ್ತಿಯೊಬ್ಬ ತೆರೆದ ಪುಸ್ತಕದಂತೆ ಇರಬಾರದು. ಆತನ ಕೆಲವು ರಹಸ್ಯಗಳನ್ನು ಯಾರಿಗೂ ತಿಳಿಯದಂತೆ ಇರಿಸಬೇಕು.
5/ 8
ಸೋಲು ಹಂಚಿಕೊಳ್ಳಬೇಡ: ವ್ಯಕ್ತಿಯ ಸೋಲು ಆತನ ಗೆಲುವಿಗೆ ಕಾರಣ. ಆದರೆ, ಕೆಲವೊಮ್ಮೆ ಈ ಸೋಲಿನ ಕುರಿತು ಗೇಲಿ ಮಾಡುವ ಹೆಚ್ಚಿನ ಜನರು ನಿಮ್ಮೊಂದಿಗೆ ಇರುತ್ತಾರೆ. ಅಲ್ಲದೆ, ಅವರು ಈ ವಿಷಯವನ್ನು ಅನೇಕ ಸ್ಥಳಗಳಲ್ಲಿ ಹೇಳಬಹುದು.
6/ 8
ಕುಟುಂಬದ ವೈಯಕ್ತಿಕ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಏಕೆಂದರೆ ಇದು ನಿಮ್ಮ ಕುಟುಂಬದ ಪರಿಸರವನ್ನು ಹದಗೆಡಿಸಬಹುದು. ಇದರಿಂದ ನೀವು ಅನೇಕ ಪರಿಣಾಮ ಎದುರಿಸಬಹುದು.
7/ 8
ಸಮಯ: ಸಮಯ ಎಂಬುದು ಅತ್ಯಮೂಲ್ಯವಾದದ್ದು. ಅದನ್ನು ಬಳಕೆ ಮಾಡುವಾಗ ಸೂಕ್ತ ವ್ಯಕ್ತಿಗಳಿಗೆ ಉಪಯೋಗಿಸಿ. ಅಮೂಲ್ಯ ಸಮಯವೂ ದಾಟಿದರೆ ಅದರಿಂದ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ.
8/ 8
ಅನಗತ್ಯವಾಗಿ ಹಣ: ಹಣ ಎಂಬುದು ಮನುಷ್ಯನ ಜೀವನಕ್ಕೆ ಅವಶ್ಯ. ಹಾಗೇಂದ ಮಾತ್ರಕ್ಕೆ ಹಣವನ್ನು ಹಂಚಿಕೊಳ್ಳದಿರುವುದಲ್ಲ. ಹಣದ ಬಳಕೆ ಸದ್ಬಳಕೆಯಾಗುವಂತೆ ನೋಡಬೇಕು. ಸೂಕ್ತ ವ್ಯಕ್ತಿಗೆ ಸಿಗುವ ಹಣದ ಸಹಾಯ ಮಾತ್ರ ದಾನದ ಮಹತ್ವ ಹೆಚ್ಚಿಸುತ್ತದೆ.