Chanakya Niti: ಈ ರೀತಿ ಮಾಡಿದ್ರೆ ನಿಮ್ಮ ಸಂಬಂಧದಲ್ಲಿರುವ ಸಮಸ್ಯೆ ಬಗೆಹರಿಯುತ್ತೆ
Chanakya Niti: ಆಚಾರ್ಯ ಚಾಣಕ್ಯರ ಬಗ್ಗೆ ನಾವು ಹೆಚ್ಚು ಹೇಳಬೇಕಿಲ್ಲ. ಅವರ ನೀತಿಗಳು ಇಮದು ಪ್ರಸ್ತುತ. ಹಲವಾರು ವಿಚಾರಗಳ ಬಗ್ಗೆ ಮಾಹಿತಿ ನೀಡಿರುವ ಚಾಣಕ್ಯರು ಸಂಸಾರದ ವಿಚಾರದಲ್ಲಿ ಸಹ ಕೆಲ ಸಲಹೆ ನೀಡಿದ್ದು, ಆಚಾರ್ಯರು ಹೇಳಿದ್ದೇನು ಎಂಬುದು ಇಲ್ಲಿದೆ.
ಚಾಣಕ್ಯನ ನೀತಿಶಾಸ್ತ್ರದಲ್ಲಿ ನೀಡಲಾದ ನಿಯಮಗಳು ಬದುಕಲು ಸರಿಯಾದ ಮಾರ್ಗವನ್ನು ತೋರಿಸುತ್ತವೆ. ನೀವು ಆಚಾರ್ಯ ಚಾಣಕ್ಯ ಅವರ ವಿಧಾನಗಳನ್ನು ಅನುಸರಿಸಿದರೆ, ನೀವು ಪ್ರತಿ ತಿರುವಿನಲ್ಲಿಯೂ ಯಶಸ್ವಿಯಾಗಬಹುದು.
2/ 8
ಒಬ್ಬ ಮನುಷ್ಯನು ಇತರರೊಂದಿಗಿನ ಸಂಬಂಧದಲ್ಲಿ ಸಂತೋಷ, ಶಾಂತಿ ಮತ್ತು ಪ್ರೀತಿಯನ್ನು ಪಡೆಯದಿದ್ದರೆ ಆ ಸಂಬಂಧಗಳಲ್ಲಿ ಬಿರುಕು ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಚಾಣಕ್ಯರ ನಿಯಮಗಳನ್ನು ಅನುಸರಿಸಿ, ಸಮಸ್ಯೆಯನ್ನು ಪರಿಹರಿಸಬಹುದು.
3/ 8
ಯಾವುದೇ ಸಂಬಂಧದಲ್ಲಿ ಗೌರವ ಬಹಳ ಮುಖ್ಯ. ಸಂಬಂಧಗಳು ಗೌರವ ಮತ್ತು ನಂಬಿಕೆಯನ್ನು ಆಧರಿಸಿವೆ ಎಂದು ಹೇಳಲಾಗುತ್ತದೆ. ನಿಮ್ಮ ಸಂಗಾತಿಯನ್ನು ನೀವು ಗೌರವಿಸದಿದ್ದರೆ, ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ.
4/ 8
ಒಬ್ಬ ವ್ಯಕ್ತಿಯು ತನ್ನ ಸಂಗಾತಿಯನ್ನು ಇತರರ ಮುಂದೆ ಪದೇ ಪದೇ ಅವಮಾನಿಸಿದಾಗ, ಅದು ಅವರ ಸ್ವಾಭಿಮಾನಕ್ಕೆ ಧಕ್ಕೆ ಮಾಡಿದ ಹಾಗೆ. ಅಲ್ಲದೇ ಇದರಿಂದ ಅವಮಾನ ಮಾಡಿದ ವ್ಯಕ್ತಿಯ ಘನತೆ ಸಹ ಕಡಿಮೆ ಆಗುತ್ತದೆ. ಅದಕ್ಕಾಗಿಯೇ ಸಂಬಂಧಗಳಲ್ಲಿ ಪರಸ್ಪರ ಗೌರವಿಸುವುದು ಬಹಳ ಮುಖ್ಯ.
5/ 8
ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ ಅಹಂಕಾರ ಬಂದಾಗ ಸಂಬಂಧಗಳು ಹಳಸುವುದು ಸಹಜ. ಏಕೆಂದರೆ ಸಂಬಂಧಗಳಲ್ಲಿ ಅಹಂಕಾರವು ವ್ಯಕ್ತಿಯ ಪ್ರಾಮುಖ್ಯತೆ ಅರ್ಥ ಮಾಡಿಕೊಳ್ಳಲು ಬಿಡುವುದಿಲ್ಲ. ಹಾಗಾಗಿ ಅಹಂಕಾರ ಬಿಟ್ಟು ಸಂಬಂಧವನ್ನು ಉಳಿಸಿಕೊಳ್ಳಬೇಕು.
6/ 8
ಈ ಅಹಂಕಾರ ಎನ್ನುವುದು ಸಂಬಂಧಗಳನ್ನು ಹಾಳು ಮಾಡುತ್ತದೆ. ಇದು ಪ್ರೇಮಿಗಳು ಅಥವಾ ದಂಪತಿಗಳ ನಡುವಿನ ಸಂಬಂಧವು ಹದಗೆಡಲು ಪ್ರಾರಂಭಿಸುತ್ತದೆ. ನಿಮ್ಮ ಸಂಬಂಧದಲ್ಲಿ ಮಾಧುರ್ಯ ಮತ್ತು ಪ್ರೀತಿಯನ್ನು ಕಾಪಾಡಿಕೊಳ್ಳಲು, ಅಹಂಕಾರ ಬಿಡಬೇಕು.
7/ 8
ಆಚಾರ್ಯ ಚಾಣಕ್ಯ ಅವರು ಯಾವುದೇ ಸಂಬಂಧದ ಅಡಿಪಾಯವು ನಂಬಿಕೆ ಎನ್ನುತ್ತಾರೆ. ಅಲ್ಲದೇ ಒಂದು ಸಂಬಂಧ ನಂಬಿಕೆ ಮೇಲೆ ನಿಂತಿದೆ, ಇದು ಪತಿ-ಪತ್ನಿ ಅಥವಾ ಪ್ರೇಮಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.
8/ 8
ಸಂಬಂಧದಲ್ಲಿ ಅಚಲವಾದ ನಂಬಿಕೆ ಇದ್ದರೆ, ಜೀವನದಲ್ಲಿ ಯಾವುದೇ ಕಷ್ಟಗಳನ್ನು ಸುಲಭವಾಗಿ ಎದುರಿಸಬಹುದು. ಮತ್ತೊಂದೆಡೆ, ಸಂಬಂಧದಲ್ಲಿ ವಿಶ್ವಾಸವಿಲ್ಲದಿದ್ದರೆ, ಅನುಮಾನವಿದ್ದರೆ, ಸಂಬಂಧವು ಕ್ಷಣಾರ್ಧದಲ್ಲಿ ಮುರಿದುಹೋಗುತ್ತದೆ.