Chanakya Niti: ಶತ್ರುವಿನಿಂದ ಇರಲಿ ಅಂತರ; ಚಾಣಕ್ಯ ನೀತಿಯ ಈ ಐದು ವಿಷಯ ಸದಾ ನೆನಪಿರಲಿ
ಚಾಣಕ್ಯ ನೀತಿಯಲ್ಲಿನ (Chankya niti) ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ಇಂದಿಗೂ ರಾಜ್ಯಭಾರ ಮಾಡಲಾಗುತ್ತದೆ. ನೀತಿ ಶಾಸ್ತ್ರದ (Niti Shastra) ಮೂಲಕ ಅವರು ಜೀವನದಲ್ಲಿ ಎದುರಾಗುವ ಸಂತೋಷ ಮತ್ತು ದುಃಖದಿಂದ ಮನುಷ್ಯ ವಿಚಲಿತರಾಗಬಾರದು ಎಂಬ ನೀತಿಯನ್ನು ಅವರು ತಿಳಿಸಿದ್ದಾರೆ. ಇದೇ ವೇಳೆ ಶತ್ರುಗಳ ಕುರಿತು ತಿಳಿಸಿರುವ ಅವರು ಯಾವ ಸಮಯದಲ್ಲಿ, ಧರ್ಮ ಮತ್ತು ಕರುಣೆ ಇಲ್ಲದ ವ್ಯಕ್ತಿಯನ್ನು ದೂರವಿಡಬೇಕು ಎಂಬುದನ್ನು ಹೇಳಿದ್ದಾರೆ. ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯ ವಿವರಿಸಿದ ನೀತಿಗಳು ಇಂದಿಗೂ ಪ್ರಸ್ತುತವಾಗಿವೆ
ಚಾಣಕ್ಯ ನೀತಿಯ ಪ್ರಕಾರ, ನಿಮ್ಮ ದೇಹವು ಆರೋಗ್ಯವಾಗಿ ನಿಯಂತ್ರಣದಲ್ಲಿದ್ದಾಗ ಜೀವನದಲ್ಲಿ ಗುರಿಯನ್ನು ಸಾಧಿಸಬೇಕು. ಏಕೆಂದರೆ ಸಾವಿನ ನಂತರ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ. (ಫೋಟೋ: shutterstock.com)
2/ 5
ಜ್ಞಾನವನ್ನು ಸಂಪಾದಿಸುವುದು ಕಾಮಧೇನುವಿನಂತೆ, ಪ್ರತಿ ಋತುವಿನಲ್ಲಿ ಜ್ಞಾನ ನಿಮಗೆ ಅಮೃತವನ್ನು ನೀಡುತ್ತದೆ. ತಾಯಿಯಂತೆ ಈ ಜ್ಞಾನ ನಮ್ಮ ರಕ್ಷಕಿ ಮತ್ತು ಉಪಕಾರಿ. ಅದಕ್ಕಾಗಿಯೇ ಜ್ಞಾನವನ್ನು ರಹಸ್ಯ ಸಂಪತ್ತು ಎಂದು ಕರೆಯಲಾಗುತ್ತದೆ. (ಫೋಟೋ: shutterstock.com)
3/ 5
ಸಾಧುಗಳನ್ನು ಅನುಸರಿಸುವುದರಿಂದ ಭಕ್ತಿ ಮೂಡುತ್ತದೆ. ಅವರ ಇಡೀ ಕುಟುಂಬವು ಆ ಪುಣ್ಯದಿಂದ ಧನ್ಯವಾಗುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ (ಫೋಟೋ- shutterstock.com)
4/ 5
ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಧ್ಯಾನ ಮಾಡುವಾಗ ಒಬ್ಬಂಟಿಯಾಗಿ ಮಾಡಬೇಕು. ಅಭ್ಯಾಸ ಮಾಡುವಾಗ ಇತರರೊಂದಿಗೆ ಮಾಡಬೇಕು. ಹಾಡುವಾಗ ಮೂರು ಜನ ಸೇರಿ ಹಾಡಬೇಕು. ಕೃಷಿಯನ್ನು ನಾಲ್ಕು ಅಥವಾ ಅನೇಕರು ಸೇರಿ ಮಾಡಬೇಕು (ಫೋಟೋ shutterstock.com)
5/ 5
ಚಾಣಕ್ಯ ನೀತಿಯ ಪ್ರಕಾರ, ಧರ್ಮ ಮತ್ತು ಕರುಣೆ ಇಲ್ಲದ ವ್ಯಕ್ತಿಯನ್ನು ಜೀವನದಿಂದ ತೆಗೆದು ಹಾಕಬೇಕು. ಅದರಂತೆ ಆಧ್ಯಾತ್ಮಿಕ ಜ್ಞಾನವಿಲ್ಲದ ಗುರು, ಪ್ರೀತಿಯಿಲ್ಲದ ಹೆಂಡತಿಯನ್ನು. ಅಕ್ಕತೆ ಇಲ್ಲದ ಸಂಬಂಧಿಕರನ್ನು ತೆಗೆದುಹಾಕಬೇಕು (ಫೋಟೋ- shutterstock.com)