Chanakya Niti: ಈ 7 ವಿಚಾರಗಳಿಂದ ದೂರ ಇದ್ರೆ ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ

Chanakya Niti: ಆಚಾರ್ಯ ಚಾಣಕ್ಯರ ನೀತಿಗಳ ಬಗ್ಗೆ ನಾವು ಹೆಚ್ಚಾಗಿ ಹೇಳಬೇಕಿಲ್ಲ. ಅವರು ತಮ್ಮ ಪುಸ್ತಕದಲ್ಲಿ ಸಮಾಜ ಕಲ್ಯಾಣಕ್ಕೆ ಸಂಬಂಧಿಸಿದ ಅನೇಕ ನೀತಿಗಳನ್ನು ನೀಡಿದ್ದಾರೆ. ಈ ತತ್ವಗಳನ್ನು ಅರ್ಥಮಾಡಿಕೊಂಡು ಅನುಸರಿಸುವ ವ್ಯಕ್ತಿಯು ಜೀವನದಲ್ಲಿ ಸಾಧನೆ ಮಾಡಬಹುದು. ಆಚಾರ್ಯ ಚಾಣಕ್ಯರ ಪ್ರಕಾರ ಕೆಲ ವಸ್ತುಗಳಿಂದ ದೂರ ಇದ್ದರೆ ಸಕ್ಸಸ್​ ನಮ್ಮದಾಗುತ್ತದೆ.

First published:

  • 18

    Chanakya Niti: ಈ 7 ವಿಚಾರಗಳಿಂದ ದೂರ ಇದ್ರೆ ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ

    ಆಚಾರ್ಯ ಚಾಣಕ್ಯ ಮಹಾನ್ ವಿದ್ವಾಂಸರಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿ ಮಾಡುವಲ್ಲಿ ಆಚಾರ್ಯ ಚಾಣಕ್ಯರ ಪಾತ್ರ ಬಹಳ ಮುಖ್ಯ. ಚಾಣಕ್ಯರ ನೀತಿ ತತ್ವಗಳನ್ನು ಅನುಸರಿಸುವ ವ್ಯಕ್ತಿ ಜೀವನದಲ್ಲಿ ಎಂದಿಗೂ ವಿಫಲವಾಗುವುದಿಲ್ಲ.

    MORE
    GALLERIES

  • 28

    Chanakya Niti: ಈ 7 ವಿಚಾರಗಳಿಂದ ದೂರ ಇದ್ರೆ ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ

    ಅಗ್ನಿ: ಚಾಣಕ್ಯ ತನ್ನ ಪುಸ್ತಕದಲ್ಲಿ ಬೆಂಕಿಯ ಜೊತೆ ಎಚ್ಚರವಾಗಿರಿ ಎಂದು ಹೇಳಿದ್ದಾರೆ. ಅವರ ಪ್ರಕಾರ ಬೆಂಕಿಯೊಂದಿಗೆ ಆಟವಾಡುವುದು ಒಳ್ಳೆಯದಲ್ಲ ಎಂದಿದ್ದಾರೆ. ಬೆಂಕಿ ಬೆಳಕನ್ನು ನೀಡುತ್ತದೆ ಆದರೆ ಅದರೊಂದಿಗೆ ಆಟವಾಡುವುದು ನಿಮ್ಮನ್ನು ಸುಡಬಹುದು, ಹಾಗಾಗಿ ಬಹಳ ಎಚ್ಚರವಾಗಿರಬೇಕು.

    MORE
    GALLERIES

  • 38

    Chanakya Niti: ಈ 7 ವಿಚಾರಗಳಿಂದ ದೂರ ಇದ್ರೆ ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ

    ನೀರು: ನೀರು ಮನುಷ್ಯನ ಜೀವನದ ಆಧಾರ, ಆದರೆ ನೀರಿನ ಬಳಿ ಮನೆ ಕಟ್ಟಬೇಡಿ ಎಂದು ಚಾಣ್ಯಕ್ಯರು ಸಲಹೆ ನೀಡಿದ್ದಾರೆ. ಏಕೆಂದರೆ ಯಾವುದೇ ಪ್ರಾಕೃತಿಕ ಸಮಸ್ಯೆ ಬಂದರೆ ನೀರಿನಿಂದ ಮನೆ ಕೊಚ್ಚಿ ಹೋಗಬಹುದು. ಹಾಗಾಗಿ ನೀರಿನ ವಿಚಾರದಲ್ಲಿ ಸಹ ಬಹಳ ಜಾಗರೂಕರಾಗಿರಬೇಕು.

    MORE
    GALLERIES

  • 48

    Chanakya Niti: ಈ 7 ವಿಚಾರಗಳಿಂದ ದೂರ ಇದ್ರೆ ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ

    ಮಹಿಳೆಯರೊಂದಿಗೆ ಮಾತನಾಡುವಾಗ ಎಚ್ಚರ: ಚಾಣಕ್ಯರ ಪ್ರಕಾರ ಪುರುಷರು ಮಹಿಳೆಯರ ಜೊತೆ ಮಾತನಾಡುವಾಗ ಬಹಳ ಎಚ್ಚರ ವಹಿಸಬೇಕು. ಅವರ ಜೊತೆ ತುಂಬಾ ಗೌರವದಿಂದ ನಡೆದುಕೊಳ್ಳಬೇಕು. ಹೆಣ್ಣನ್ನು ಗೌರವಿಸುವುದರಿಂದ ಮಾತ್ರ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಲು ಸಾಧ್ಯ. ಹೆಣ್ಣನ್ನು ಗೌರವಿಸದಿದ್ದರೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ.

    MORE
    GALLERIES

  • 58

    Chanakya Niti: ಈ 7 ವಿಚಾರಗಳಿಂದ ದೂರ ಇದ್ರೆ ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ

    ಮೂರ್ಖರನ್ನು ದೂರವಿಡಿ: ಮೂರ್ಖ ಜನರಿಂದ ದೂರವಿರಬೇಕು ಎನ್ನುತ್ತಾರೆ ಚಾಣಕ್ಯರು. ಯಾವುದೇ ಕಾರಣಕ್ಕೂ ಅಂತಹ ಜನರೊಂದಿಗೆ ಮಾತನಾಡುವಾಗ ಯಾವುದೇ ರಹಸ್ಯಗಳನ್ನು ಬಿಚ್ಚಿಡಬಾರದು. ಅಲ್ಲದೇ ಮಾತನಾಡುವಾಗ ಸಹ ಜಾಗರೂಕರಾಗಿರಬೇಕು. ಏಕೆಂದರೆ ಅವರು ನೀವು ಮಾಡುವ ಎಲ್ಲದರಲ್ಲೂ ತಪ್ಪು ಹುಡುಕಲು ಪ್ರಯತ್ನಿಸುತ್ತಾರೆ.

    MORE
    GALLERIES

  • 68

    Chanakya Niti: ಈ 7 ವಿಚಾರಗಳಿಂದ ದೂರ ಇದ್ರೆ ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ

    ಹಾವುಗಳು: ಚಾಣಕ್ಯನ ನೀತಿಯ ಪ್ರಕಾರ ಹಾವುಗಳ ಜೊತೆ ಆಟ ಆಡಬಾರದು. ಅವು ಬಹಳ ಅಪಾಯಕಾರಿ. ಹಾವುಗಳೊಂದಿಗೆ ಆಟ ಆಡಿದರೆ ಅದು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಇದು ಯಾವುದೇ ಕ್ಷಣದಲ್ಲಿ ನಿಮ್ಮನ್ನು ಕಚ್ಚಬಹುದು. ಹಾಗಾಗಿ ಕೂತುಹಲಕ್ಕೆ ಕೂಡ ಈ ಕೆಲಸ ಮಾಡಬಾರದು.

    MORE
    GALLERIES

  • 78

    Chanakya Niti: ಈ 7 ವಿಚಾರಗಳಿಂದ ದೂರ ಇದ್ರೆ ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ

    ಮಾತು: ನಿಮ್ಮ ಮಾತು ತುಂಬಾ ಮಧುರವಾಗಿರಬೇಕು. ನಿಮ್ಮ ಮಾತಿನಿಂದ ಇತರರನ್ನು ನೋಯಿಸಬೇಡಿ. ಅಲ್ಲದೇ, ಹಿರಿಯರೊಂದಿಗೆ ಮಾತನಾಡುವಾಗ ಬಹಳ ಜಾಗರೂಕರಾಗಿರಿ. ಅದರಲ್ಲೂ ಸಮಾಜದಲ್ಲಿ ಹೆಸರುವಾಸಿಯಾದ ವ್ಯಕ್ತಿಗಳೊಂದಿಗೆ ಜಗಳ ಮಾಡುವುದು ಒಳ್ಳೆಯದಲ್ಲ. ನಿಮ್ಮ ಮಾತಿನಿಂದ ಅವರಿಗೆ ನೋವಾದರೆ ಭವಿಷ್ಯದಲ್ಲಿ ಸಮಸ್ಯೆ ಆಗುತ್ತದೆ.

    MORE
    GALLERIES

  • 88

    Chanakya Niti: ಈ 7 ವಿಚಾರಗಳಿಂದ ದೂರ ಇದ್ರೆ ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES