ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ ಸಂಭ್ರಮ; ಇಲ್ಲಿದೆ ಬ್ರಹ್ಮರಥೋತ್ಸವದ ಚಿತ್ರಗಳು
ಮಾರ್ಗಶಿರ ಮಾಸದಲ್ಲಿ ಬರುವ ಚಂಪಾ ಷಷ್ಠಿ (Champa Shashti) ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ (Kukke Subrahmanya)ಎಂದೇ ಹೆಸರು ಪಡೆದಿದೆ. ಸುಬ್ರಹ್ಮಣ್ಯ ದೇವರ ಆಚರಣೆ ಮಾಡುವ ಈ ಷಷ್ಠಿಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ಕುಕ್ಕೆಯಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಯಲಿದ್ದು ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಆಚರಣೆ ಮಾಡಲಾಗುತ್ತದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಚಂಪಾಷಷ್ಠಿ ಬಲು ವಿಶೇಷ. ಈ ಚಂಪಾ ಷಷ್ಠಿಯಲ್ಲಿ ಭಾಗಿಯಾಗಲು ಸುಬ್ರಹ್ಮಣ್ಯನ ಭಕ್ತರು ದೂರದೂರಿಗಳಿಂದು ಇಂದು ಕುಕ್ಕೆಗೆ ಆಗಮಿಸಿ, ವಿಶೇಷ ಸೇವೆ ನಡೆಸಿ ಬ್ರಹ್ಮರಥೋತ್ಸವದಲ್ಲಿ ಭಾಗಿಯಾಗುತ್ತಾರೆ.
2/ 8
ಸುಬ್ರಹ್ಮಣ್ಯ ಷಷ್ಠಿ ಸಂದರ್ಭದಲ್ಲಿ ಇಲ್ಲಿ ಆಚರಿಸುವ ಮಡೆಸ್ನಾನ ಸಾಕಷ್ಟು ಹೆಸರು ಪಡೆದಿದೆ. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಹರಸಿಕೊಂಡು ದೇವಾಲಯದಲ್ಲಿ ಉರುಳು ಸೇವೆಯನ್ನು ಮಾಡುತ್ತಾರೆ.
3/ 8
ಷಷ್ಠಿ ಅಂಗವಾಗಿ ದೇವರ ರಥೋತ್ಸವ ನಡೆಸಲಾಗುವುದು. ಬೆಳಗಿನ ಜಾವದ ಸಮಯದಲ್ಲಿ ಧಾರ್ಮಿಕ ವಿಧಿ ಅನುಸಾರವಾಗಿ ಇಲ್ಲಿ ಹೂವಿನಿಂದ ಅಲಂಕೃತಗೊಂಡ ತೇರನ್ನು ಎಳೆಯಲಾಗುವುದು. ಈ ರಥೋತ್ಸವದಲ್ಲಿ ಭಾಗಿಯಾಗಲು ಇಲ್ಲಿಗೆ ಸುಬ್ರಹ್ಮಣ್ಯನ ಭಕ್ತರು ಆಗಮಿಸುತ್ತಾರೆ
4/ 8
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ತಲೆ ತಲಾಂತರದಿಂದ ಈ ಆಚರಣೆ ನಡೆಸಲಾಗುತ್ತಿದ್ದು, ಈ ರಥೋತ್ಸವದಲ್ಲಿ ತೇರು ಏಳೆದರೆ ಇಷ್ಟಾರ್ಥ ಫಲಿಸುತ್ತದೆ ಎಂಬ ನಂಬಿಕೆ ಇದೆ.
5/ 8
ಇನ್ನು ಈ ಸುಬ್ರಹ್ಮಣ್ಯ ರಥೋತ್ಸವದ ವಿಶೇಷ ಎಂದರೇ, ಇಲ್ಲಿ ಹೂವಿನ ತೇರಿನಲ್ಲಿ ಕೇವಲ ಸುಬ್ರಹ್ಮಣ್ಯನ ತೇರು ಇಲ್ಲಿನ ಕಾಶಿ ಕಟ್ಟ ಶ್ರೀ ಮಹಾ ಗಣಪತಿ ಸನ್ನಿಧಿಯಲ್ಲಿ ಸಂಪನ್ನ ಮಾಡಲಾಗುವುದು.
6/ 8
ಇನ್ನು ಚಂಪಾ ಷಷ್ಠಿಯ ಸಂದರ್ಭದಲ್ಲಿ ಜಾತ್ರಾ ಸಂದರ್ಭದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಸೇವೆಯನ್ನು ಮಾಡುವ ಮೂಲಕ ದೇವರನ್ನು ಒಲಿಸಲು ಬೇಡಿಕೊಳ್ಳುತ್ತಾರೆ. ಶ್ರೀಕ್ಷೇತ್ರದಿಂದ 2. 5 ಕಿಲೋ ಮೀಟರ್ ದೂರದಲ್ಲಿರುವ ಕುಮಾರಧಾರ ನದಿಯಲ್ಲಿ ಸ್ನಾನಮಾಡಿ, ಬೀದಿಯಲ್ಲಿ ಉರುಳು ಸೇವೆ ಮಾಡುವುದು ಇದರ ವಿಶೇಷ .
7/ 8
ಕಾರ್ತಿಕೇಯ ಮುರುಗನ್, ಸ್ಕಂದ, ವೇಲನ್ ಕುಮಾರನ್ ಎಂದು ವಿವಿಧ ನಾಮಧೇಯಗಳಿಂದ ಕರೆಯುವ ಸುಬ್ರಹ್ಮಣ್ಯನನ್ನು ಆರಾಧನೆಯನ್ನು ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಾಡಲಾಗುವುದು
8/ 8
ಸುಬ್ರಹ್ಮಣ್ಯದಲ್ಲಿ ನೆಲೆ ನಿಂತಿರುವ ಕಾರ್ತಿಕೇಯ ಸ್ವಾಮಿಯನ್ನ ನಾಗ ರೂಪದಲ್ಲಿ ಪೂಜೆ ಮಾಡಲಾಗುತ್ತದೆ.. ಸರ್ಪದೋಷದಿಂದ ಬಳಲುವವರು ಇಲ್ಲಿ ಎರಡು ದಿನಗಳ ಕಾಲ ತಂಗಿ ಸೇವೆ ಕೈಗೊಂಡರೆ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆಯೂ ಇದೆ