Career Astrology: ನೀವು ಮಾಡೋ ಕೆಲಸದಲ್ಲಿ ಸಕ್ಸಸ್ ಸಿಗಬೇಕು ಎಂದರೆ ಈ ಸಿಂಪಲ್ ಟಿಪ್ಸ್ ಪಾಲಿಸಿ
Vastu tips: ಭಾರತೀಯರಲ್ಲಿ ಎಲ್ಲಾ ಶುಭ ಕೆಲಸಕ್ಕೂ ಜ್ಯೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರದ ಸಲಹೆಗಳನ್ನು ಪಡೆಯುವ ಅಭ್ಯಾಸವಿದೆ. ಇದು ಅವರವರ ವೈಯಕ್ತಿಕ ನಂಬಿಕೆ. ಇದನ್ನು ಪಾಲಿಸುವವರಿಗೆ ವೃತ್ತಿಜೀವನದ ಯಶಸ್ಸಿಗೆ ಸಂಬಂಧಿಸಿದಂತೆ ಕೆಲವೊಂದು ಸಲಹೆಗಳು ಇಲ್ಲಿವೆ.
ಪ್ರತಿಯೊಬ್ಬ ಉದ್ಯೋಗಿಗೂ ತಮ್ಮ ಕರಿಯರ್ ನಲ್ಲಿ ಯಶಸ್ಸು ಸಿಗಲಿ ಎಂಬ ಆಸೆ ಇರುತ್ತದೆ. ಇದಕ್ಕಾಗಿ ಶ್ರಮವಹಿಸಿ ಕೆಲಸವನ್ನು ಮಾಡುತ್ತಾರೆ. ಜೊತೆಗೆ ವಾಸ್ತು, ಜ್ಯೋತಿಷ್ಯದ ಬಲವೂ ಇದ್ದರೆ ಯಶಸ್ಸು ಸಿಗುವುದು ಸುಲಭವಂತೆ. ಈ ನಿಟ್ಟಿನಲ್ಲಿ ಒಂದಷ್ಟು ಸಲಹೆಗಳು ಇಲ್ಲಿವೆ.
2/ 8
ಕಚೇರಿಯಲ್ಲಿ ಯಾವಾಗಲೂ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳಿ. ಪಶ್ಚಿಮಾಭಿಮುಖವಾಗಿಯೂ ಕುಳಿತುಕೊಳ್ಳಬಹುದು. ಆದರೆ ದಕ್ಷಿಣಾಭಿಮುಖವಾಗಿ ಕುಳಿತುಕೊಳ್ಳಬಾರದು ಎನ್ನುತ್ತೆ ವಾಸ್ತುಶಾಸ್ತ್ರ.
3/ 8
ಆಫೀಸ್ ನಲ್ಲಿ ನಿಮ್ಮ ಮೇಜಿನ ಮೇಲೆ ನೀವು ಸಸ್ಯಗಳನ್ನು ಇರಿಸಬಹುದು. ಆದರೆ ಅದರ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಈ ಸಸ್ಯಗಳು ಒಣಗದಂತೆ ನೋಡಿಕೊಳ್ಳಬೇಕು.
4/ 8
ನಿಮ್ಮ ಮೇಜಿನ ಕೆಳಗೆ ಎಂದಿಗೂ ಡಸ್ಟ್ ಬಿನ್ ಇಡಬೇಡಿ. ಅಕಸ್ಮಾತ್ ಇಟ್ಟರೆ ದಿನಕ್ಕೆ ಒಮ್ಮೆಯಾದರೂ ಅದನ್ನು ಬದಲಾಯಿಸಿ. ಸಾಂದರ್ಭಿಕ ಚಿತ್ರ
5/ 8
ಕಚೇರಿಗೆ ಮನೆಯಿಂದ ಹೊರಡುವಾಗ ಯಾವಾಗಲೂ ಪೋಷಕರ ಆಶೀರ್ವಾದ ಪಡೆಯಿರಿ. ಪುರಾಣಗಳ ಪ್ರಕಾರ, ಪೋಷಕರ ಆಶೀರ್ವಾದವನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಹಾಗಾಗಿ ಈ ರೀತಿ ಮನೆಯಿಂದ ಕಚೇರಿಗೆ ಹೋಗುವುದನ್ನು ರೂಢಿಸಿಕೊಳ್ಳಿ.
6/ 8
ಮನೆಯ ಮೇಲ್ಛಾವಣಿಯಲ್ಲಿ ಪಕ್ಷಿಗಳಿಗೆ ಕಾಳುಗಳು, ನೀರನ್ನು ಇಡುವುದು ಒಳ್ಳೆಯದು. ಇದು ಮನೆಯಲ್ಲಿ ಮಂಗಳವನ್ನು ತರುವುದು ಮಾತ್ರವಲ್ಲದೆ ವೃತ್ತಿಜೀವನದ ಪ್ರಗತಿಗೆ ಸಹಾಯ ಮಾಡುತ್ತದೆ.
7/ 8
ನೀವು ಮನೆಯಿಂದ ಹೊರಡುವಾಗ ಸ್ವಲ್ಪ ಬೆಲ್ಲ ಮತ್ತು ನೀರು ಕುಡಿದ ನಂತರ ಮನೆಯಿಂದ ಹೊರಡಿ. ಇದನ್ನು ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಾಂಧರ್ಬಿಕ ಚಿತ್ರ
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)