Astrology: ಈ ರಾಶಿಯವವರಿಗೆ ಕೆಂಪು ಬಣ್ಣದ ಕಾರು ಲಕ್ಕಿ, ಉಳಿದ ರಾಶಿಗೆ ಯಾವ ಕಲರ್ ಸೂಟ್ ಆಗುತ್ತೆ?
Car Color And Zodiac Sign: ನಾವು ಸಾಮಾನ್ಯವಾಗಿ ಕಾರು ಖರೀದಿ ಮಾಡುವಾಗ ಅದರ ವೈಶಿಷ್ಟ್ಯತೆಗಳನ್ನು ನೋಡುತ್ತೇವೆ. ಯಾವ ಕಾರು ನಮ್ಮ ಬಜೆಟ್ ಒಳಗೆ ಒಳ್ಳೆಯ ಮೈಲೇಜ್ ಕೊಡುತ್ತದೆ ಎಂಬೆಲ್ಲಾ ಬಗ್ಗೆ ನಾವು ಮಾಹಿತಿ ಪಡೆಯುತ್ತೇವೆ.ಅದರ ಬಣ್ಣವನ್ನು ಸಹ ನಾವು ನಮಗೆ ಇಷ್ಟವಾಗುವುದರ ಮೇಲೆ ಆಯ್ಕೆ ಮಾಡುತ್ತೇವೆ. ಆದರೆ ನಿಮ್ಮ ರಾಶಿಗೆ ಯಾವ ಬಣ್ಣದ ಕಾರ್ ಖರೀದಿ ಮಾಡಬೇಕು ಎಂಬುದು ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರು ಬಹಳ ಧೈರ್ಯವಂತರು. ಇವರು ಕೆಂಪು, ಹಳದಿ, ಕೇಸರಿ ಮತ್ತು ಕಿತ್ತಳೆ ಬಣ್ಣದ ಕಾರುಗಳನ್ನು ಆಯ್ಕೆ ಮಾಡಿದರೆ ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಕಾರು ಖರೀದಿ ಮಾಡುವಾಗ ಈ ಬಣ್ಣದ ಶೇಡ್ಗಳನ್ನು ಆಯ್ಕೆ ಮಾಡಿ.
2/ 12
ವೃಷಭ ರಾಶಿ: ಈ ರಾಶಿಯವರಿಗೆ ಆರಾಮದಾಯಕವಾಗಿರಬೇಕು ಎನ್ನುವ ಆಸೆ ಹೊಂದಿರುತ್ತಾರೆ. ಅಲ್ಲದೇ ಈ ರಾಶಿಯವರಿಗೆ ಬಿಳಿ, ಹಸಿರು ಮತ್ತು ಕಪ್ಪು ಮತ್ತು ಈ ಬಣ್ಣಗಳ ಮಿಶ್ರಣದ ಕಾರು ಅದೃಷ್ಟ ತರುತ್ತದೆ.
3/ 12
ಮಿಥುನ ರಾಶಿ: ಈ ರಾಶಿಯವರು ಬಹಳ ಬುದ್ದಿವಂತರು ಎಂದು ಹೆಸರು ಪಡೆದಿದ್ದಾರೆ. ಇವರಿಗೆ ಸಂಬಂಧಗಳ ಪ್ರಾಮುಖ್ಯತೆ ಅರಿವಿದೆ. ಮಿಥುನ ರಾಶಿಯವರು ಕೆಂಪು, ಹಸಿರು, ಬೂದು ಬಣ್ಣಗಳ ಕಾರನ್ನು ಖರೀದಿ ಮಾಡುವುದು ಉತ್ತಮ.
4/ 12
ಕರ್ಕಾಟಕ ರಾಶಿ: ಈ ರಾಶಿಯವರು ಭಾವನೆಗಳಿಗೆ ಬಹಳ ಬೆಲೆ ಕೊಡುತ್ತಾರೆ. ಕಟಕ ರಾಶಿಯವರು ಕಾರು ಖರೀದಿ ಮಾಡುವುದಾದರೆ ಬಿಳಿ, ಕೆಂಪು ಮತ್ತು ಹಳದಿ ಬಣ್ಣ ಸೂಕ್ತವಾಗುತ್ತದೆ.
5/ 12
ಸಿಂಹ ರಾಶಿ: ಸಿಂಹ ರಾಶಿಯವರಿಗೆ ತಮ್ಮ ಬಗ್ಗೆ ಬಹಳ ಹೆಮ್ಮೆ ಇರುತ್ತದೆ. ಅಲ್ಲದೇ, ಅವರಿಗೆ ಗಾಢವಾದ ಬಣ್ಣ ಎಂದರೆ ಇಷ್ಟ. ಆದರೆ ಕೆಂಪು, ಹಳದಿ, ಕೇಸರಿಯಂತಹ ಗಾಢ ಬಣ್ಣಗಳ ಜೊತೆ ಈ ರಾಶಿಯವರಿಗೆ ಬಿಳಿ ಬಣ್ಣದ ಕಾರು ಅದೃಷ್ಟ ತರುತ್ತದೆ.
6/ 12
ಕನ್ಯಾ ರಾಶಿ: ಕನ್ಯಾ ರಾಶಿಯವರು ಬಹಳ ವಿಚಾರವಂತರು ಎಂದು ಹೆಸರು ಪಡೆದಿದ್ದಾರೆ. ಬಹಳ ಶಾಂತ ಸ್ವಭಾವದವರು ಸಹ ಹೌದು, ಈ ರಾಶಿಯವರಿಗೆ ಕೆಂಪು, ಹಸಿರು ಮತ್ತು ಬೂದು ಬಣ್ಣದ ಕಾರು ಬಹಳ ಉತ್ತಮ ಎನ್ನಲಾಗುತ್ತದೆ.
7/ 12
ತುಲಾ ರಾಶಿ: ತುಲಾ ರಾಶಿಯವರು ಬಹಳ ವಿಭಿನ್ನವಾಗಿ ಆಲೋಚನೆ ಮಾಡುವವರು. ಅವರಿಗೆ ಎಲ್ಲವೂ ಡಿಫರೆಂಟ್ ಆಗಿಯೇ ಬೇಕು. ಕಾರನ್ನು ಸಹ ಅವರು ಅದೇ ರೀತಿ ಹುಡುಕುತ್ತಾರೆ. ಆದರೆ ಅವರಿಗೆ ಣ್ಣಗಳು ಬಿಳಿ, ಬೂದು ಮತ್ತು ಕಪ್ಪು ಬಣ್ಣದ ಕಾರು ಬಹಳ ಲಕ್ಕಿ.
8/ 12
ವೃಶ್ಚಿಕ ರಾಶಿ: ಬಹುತೇಕ ಎಲ್ಲಾ ವಿಚಾರಗಳ ಬಗ್ಗೆ ಅರಿವು ಇರುವ ಈ ರಾಶಿಯವರಿಗೆ ಇನ್ನೂ ಹೊಸ ವಿಚಾರಗಳನ್ನು ಕಲಿಯುವ ಬಯಕೆ ಇರುತ್ತದೆ. ಹೊಸ ಕಾರು ಖರೀದಿಸುವಾಗ ಸಹ ಹೊಸದನ್ನು ಹುಡುಕುತ್ತಾರೆ. ಇನ್ನು ಈ ರಾಶಿಯವರಿಗೆ ಕೆಂಪು, ಹಳದಿ, ಕೇಸರಿ ಮತ್ತು ಕಂದು ಬಣ್ಣದ ಕಾರು ಒಳ್ಳೆಯದು.
9/ 12
ಧನು ರಾಶಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಧನು ರಾಶಿಯವರಿಗೆ ಕೆಂಪು, ಹಳದಿ ಮತ್ತು ಬಿಳಿಯ ಬಣ್ಣದ ಕಾರುಗಳು ಅದೃಷ್ಟ ತರುತ್ತದೆ. ಕಾರನ್ನು ಖರೀದಿ ಮಾಡುವಾಗ ಈ 3 ಬಣ್ಣದ ಯಾವುದೇ ಶೇಡ್ಗಳನ್ನು ಸಹ ತೆಗೆದುಕೊಳ್ಳಬಹುದು.
10/ 12
ಮಕರ ರಾಶಿ: ಈ ರಾಶಿಯವರು ನಂಬಿಕೆಗೆ ಬಹಳ ಅರ್ಹರು ಎನ್ನಲಾಗುತ್ತದೆ. ಅವರ ಗುಣಕ್ಕೆ ಅನುಸಾರವಾಗಿ ಅವರು ನೀಲಿ, ಹಸಿರು ಮತ್ತು ಹಳದಿ ಬಣ್ಣದ ಕಾರು ಖರೀದಿ ಮಾಡಿದರೆ ಒಳ್ಳೆಯದಾಗುತ್ತಂತೆ.
11/ 12
ಕುಂಭ ರಾಶಿ: ಕುಂಭ ರಾಶಿಯವರು ಆತುರಪಡದೇ ನೀಲಿ, ಹಸಿರು, ಬಿಳಿ ಮತ್ತು ಕಪ್ಪು ಬಣ್ಣದ ಕಾರುಗಳನ್ನು ಮಾತ್ರ ಖರೀದಿ ಮಾಡಿದರೆ ಅವರ ಜೀವನದಲ್ಲಿ ಉತ್ತಮ ಬೆಳವಣಿಗೆ ಆಗುತ್ತದೆ. ಅಲ್ಲದೇ ವಾಹನದಿಂದ ಸಹ ಯಾವುದೇ ಸಮಸ್ಯೆ ಆಗುವುದಿಲ್ಲ.
12/ 12
ಮೀನ ರಾಶಿ: ಕೆಂಪು, ಹಳದಿ ಅಥವಾ ಕೇಸರಿ ಬಣ್ಣದ ಕಾರನ್ನು ಮೀನಾ ರಾಶಿಯವರು ಖರೀದಿ ಮಾಡಬೇಕು ಎನ್ನಲಾಗುತ್ತದೆ. ಇದರಿಂದ ಅವರಿಗೆ ಬಹಳ ಪ್ರಯೋಜನಗಳಿದೆ.