Astrological Prediction 2023: ಹೊಸವರ್ಷದಲ್ಲಿ ಈ ರಾಶಿಯವರಿಗೆ ಕಿರಿಕಿರಿಯೇ ಜಾಸ್ತಿ
Capricorn 2023: ಹೊಸವರ್ಷದ ಹೊಸ್ತಿಲಲ್ಲಿ ನಿಂತಿರುವ ನಮಗೆ ನಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಬಹಳ ಆಸಕ್ತಿ ಇರುತ್ತದೆ. ಒಂದೊಂದು ರಾಶಿಗೂ ಒಂದೊಂದು ಫಲಾಫಲಗಳಿರುತ್ತದೆ. ಸದ್ಯ ಮಕರ ರಾಶಿಯವರಿಗೆ 2023 ಹೇಗಿರಲಿದೆ ಎಂಬುದು ಇಲ್ಲಿದೆ. ಇನ್ನು ಸುಧಾಮ ಎಚ್.ಎಸ್. ಇವರು ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು
ಮಕರ ರಾಶಿಯವರಿಗೆ ಈ ಹೊಸವರ್ಷ ಮಿಶ್ರಫಲಗಳನ್ನು ನೀಡಲಿದೆ ಎನ್ನಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2023ರಲ್ಲಿ ಈ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು.
2/ 9
ಇನ್ನು ಸಾಡೇಸಾತಿನ ಕಡೆಯ ಪರ್ಯಾಯದಲ್ಲಿರುವ ನಿಮಗೆ ಚತುರ್ಥದಲ್ಲಿರುವ ಗುರು ಸಣ್ಣ ಆಶಾದಾಯಕನಾಗಿದ್ದಾನೆ, ಹಾಗಾಗಿ ಸ್ವಲ್ಪ ನೆಮ್ಮದಿಯನ್ನು ಸಹ ಕಾಣಬಹುದು.
3/ 9
ಹಾಗೆಯೇ, ದ್ವಿತೀಯದಲ್ಲಿರುವ ಶನಿಯ ಪ್ರಭಾವದಿಂದ ಕೌಟುಂಬಿಕ ಸುಖದ ಕೊರತೆ ಉಂಟಾಗಬಹುದು. ದೇಶ ಅಥವಾ ಸ್ವಗ್ರಾಮ ಬಿಡುವ ಯೋಗ ಇದೆ ಎನ್ನಬಹುದು. ತಾಳ್ಮೆ ಕಳೆದುಕೊಳ್ಳಬೇಡಿ.
4/ 9
ಈ ವರ್ಷ ಹಿತ ಶತ್ರುಗಳ ಬಾಧೆ ಇರಲಿದ್ದು, ಪೂರ್ವಾರ್ಜಿತ ಸಂಪತ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗೆಯೇ, ರೋಗ ರುಜಿನಗಳು ಸಹ ಕಾಡುವ ಸಾಧ್ಯತೆ ಹೆಚ್ಚಿದೆ.
5/ 9
ಸಂಸಾರದಲ್ಲಿ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ಅಲೆದಾಟ ಹೆಚ್ಚಾಗುತ್ತದೆ. ಹಾಗೆಯೇ ಕೆಟ್ಟ ಮಾತುಗಳನ್ನು ಆಡುವುದು ಹಾಗೂ ಕೇಳುವುದು ಸಮಸ್ಯೆ ಉಂಟು ಮಾಡುತ್ತದೆ.
6/ 9
ಅಪವಾದ ಭೀತಿ ಮುಂತಾದ ದುಷ್ಫಲಗಳಿವೆ. ಜೊತೆಗೆ ವ್ಯವಹಾರಸ್ಥರಿಗೆ ನಷ್ಟಭೀತಿ, ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ ಹಿನ್ನಡೆ ಸ್ಥಾನಪಲ್ಲಟ ಮುಂತಾದ ಸಮಸ್ಯೆಗಳು ಆಗುತ್ತದೆ.
7/ 9
ವಿಪರೀತ ಖರ್ಚು ವೆಚ್ಚಗಳಿಂದ ಎಷ್ಟು ಆದಾಯವಿದ್ದರೂ ಸಾಲದು ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದರೂ ಸುಖದ ಸ್ಥಾನದಲ್ಲಿರುವ ಗುರುವಿನಿಂದಾಗಿ ನೂತನ ,ಮನೆ ನಿರ್ಮಾಣ ಯೋಗ ಅಥವಾ ಭೂಮಿವೇಶನ ಖರೀದಿ ಯೋಗವಿರುತ್ತದೆ.
8/ 9
ಬಂಧು ಬಾಂಧವರು ಗುರು ಹಿರಿಯರ ಸಹಕಾರದಿಂದಾಗಿ ಆರ್ಥಿಕ ಮಟ್ಟದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಬರುತ್ತದೆ. ಶತ್ರುಪೀಡೆ ನಿರಂತರವಾಗಿವಿದ್ದರೂ ಅಂತಿಮ ಜಯ ನಿಮ್ಮದಾಗಿರುತ್ತದೆ.
9/ 9
ವರ್ಷಾರ್ಧದ ನಂತರ ಮೂರರ ರಾಹುವಿನಿಂದಾಗಿ ಇನ್ನಷ್ಟು ಪರಿಸ್ಥಿತಿ ಸುಧಾರಿಸುವ ಲಕ್ಷಣಗಳಿದ್ದು. ಮಹಾಲಿಂಗೇಶ್ವರನನ್ನು ಆರಾಧಿಸುವುದು ನಿಮಗೆ ಸ್ವಲ್ಪ ನೆಮ್ಮದಿ ನೀಡುತ್ತದೆ.