ಭಾರತ, ಚೀನಾ ಮತ್ತು ಭೂತಾನ್‌ನಂತಹ ದಕ್ಷಿಣ ಏಷ್ಯಾದಂತಹ ಹಲವಾರು ದೇಶಗಳಲ್ಲಿ ಈ ಎಲೆಗಳಿಗೆ ಇಳುವರಿ ಮತ್ತು ಬೇಡಿಕೆ ತುಂಬಾ ಹೆಚ್ಚು. ಇನ್ನು ಈ ಬೇ ಎಲೆಗಳನ್ನು ನಮ್ಮ ದೇಶದಲ್ಲಿ ಮಾತ್ರವಲ್ಲದೆ ಇತರೆ ದೇಶಗಳಲ್ಲೂ ಔಷಧೀಯ ಉದ್ದೇಶಕ್ಕಾಗಿಯೂ ಬಳಸುತ್ತಾರೆ. ಈ ಎಲೆಗಳಲ್ಲಿ ಆರೋಗ್ಯದ ಪ್ರಯೋಜವೂ ಹಲವಾರು ಇದೆ. ಹಾಗೆಯೇ ಈ ಎಲೆಗಳಿಂದ ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಹಲವಾರು ಲಾಭಗಳಾಗುತ್ತದೆ.
ಈ ಮಸಾಲೆ ಎಲೆಗಳನ್ನು ಹುರಿಯುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಪ್ರಾಚೀನ ಭಾರತೀಯ ಅರೋಮಾಥೆರಪಿ ತಂತ್ರಗಳು ಇಂದು ಪ್ರಪಂಚದಾದ್ಯಂತ ಜನಪ್ರಿಯವಾಗಿವೆ. ಈ ಚಿಕಿತ್ಸೆಯ ಪ್ರಕಾರ, ವಿವಿಧ ರೀತಿಯ ಪರಿಮಳಗಳು ನಮ್ಮ ಮನಸ್ಸು ಮತ್ತು ದೇಹದ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಸಾಮಾನ್ಯವಾಗಿ ನಾವು ಎಲ್ಲಾದ್ರೂ ಹೋದಾಗ ಅಲ್ಲಿ ಸ್ವಲ್ಪ ಏನಾದರು ಅಡುಗೆ ಮಾಡಿದಾಗ ಅಥವಾ ಬೇರೆ ಯಾವುದಾದ್ರೂ ಪರಿಮಳ ಬಂದ್ರೆ ಸಾಕು ಅದು ನಮ್ಮನ್ನು ತಕ್ಷಣ ಆಕರ್ಷಿಸುತ್ತದೆ.
ಇನ್ನು ಈ ರೀತಿಯ ಪರಿಮಳದ ಎಲೆಗಳನ್ನು ಬಳಸುವುದರಿಂದ ಮನೆಯಲ್ಲಿ ಶಾಂತಿ, ಗೊಂದಲಗಳಿಂದ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿದೆ. ಅದರಲ್ಲೂ ಆರ್ಥಿಕವಾಗಿ ನಷ್ಟ ಹೊಂದಿದವರು, ಲಾಭಗಳಿಸಲು ಇದು ಸಹಕಾರಿಯಾಗುತ್ತದೆ. ಮನೆಯಲ್ಲಿ ಪ್ರತಿದಿನ ಎಲೆಗಳನ್ನು ಸುಡುವುದರಿಂದ ಏನು ಪ್ರಯೋಜನ ಎಂಬುದು ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಅನೇಕ ಸಂದರ್ಭಗಳಲ್ಲಿ ಬೇ ಎಲೆಯ ಹೊಗೆ ನಮ್ಮ ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ಹೇಳಲಾಗಿದೆ. ಹಾಗೆಯೇ ಇದು ಮಧುಮೇಹವನ್ನು ನಿಯಂತ್ರಿಸುತ್ತದೆ. ಇನ್ನು ಮನೆಯಲ್ಲಿರೋ ಕೀಟಗಳನ್ನು ಓಡಿಸಲು ಪ್ರಯೋಜನಕಾರಿ.
ಇದಕ್ಕಾಗಿ ನಾವು ಈ ಬೇ ಎಲೆಗಳನ್ನು ತೆಗೆದುಕೊಂಡು ಮನೆಯ ಮೂಲೆಯಲ್ಲಿ ಸುಡಬೇಕು. ಸ್ವಲ್ಪ ಹೊತ್ತಿನ ಬಳಿಕ ಇದರ ಹೊಗೆ ಮನೆಯೆಲ್ಲಾ ಹರಡುತ್ತದೆ. ಇದರಿಂದ ಮನೆಯಲ್ಲಿರುವ ಜನರಲ್ಲಿನ ಮಾನಸಿಕ ಸಮಸ್ಯೆಗಳನ್ನು ಸುಧಾರಿಸುತ್ತದೆ. ಹಾಗೆಯೇ ಕೀಲುನೋವು, ಹೀಗೆ ಇನ್ನಿತರ ದೇಹದ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಇನ್ನು ಈ ಹುರಿದ ಬೇ ಎಲೆಗಳ ಹೊಗೆಯು ವೈರಲ್ ಸೋಂಕಿನಂತಹ ಕಾಯಿಗಳನ್ನು ಗುಣಪಡಿಸುತ್ತದೆ.