Holi 2023: ಹೋಳಿಯ ಬೆಂಕಿಯಲ್ಲಿ ಈ ವಸ್ತುಗಳನ್ನು ಹಾಕಿದ್ರೆ ಹಣದ ಸಮಸ್ಯೆ ಬರಲ್ಲ

Holi 2023: ಹೋಲಿಕಾ ದಹನವನ್ನು ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯದ ಸಂಕೇತವೆಂದು ಪರಿಗಣಿಸಲಾಗಿದೆ. ಹಾಗಾಗಿ ಇದರ ಮುಹೂರ್ತಕ್ಕೆ ವಿಶೇಷ ಗಮನ ನೀಡಲಾಗುತ್ತದೆ. ಹಾಗೆಯೇ ಈ ದಹನದ ಸಮಯದಲ್ಲಿ ಕೆಲ ಮುಖ್ಯವಾದ ಕೆಲಸ ಮಾಡುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಈ ದಿನ ಏನು ಮಾಡಬೇಕು ಎಂಬುದು ಇಲ್ಲಿದೆ

First published:

  • 18

    Holi 2023: ಹೋಳಿಯ ಬೆಂಕಿಯಲ್ಲಿ ಈ ವಸ್ತುಗಳನ್ನು ಹಾಕಿದ್ರೆ ಹಣದ ಸಮಸ್ಯೆ ಬರಲ್ಲ

    ಹೋಳಿ ಜಾತಿ ಧರ್ಮಗಳನ್ನು ಮೀರಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬದ ಮೊದಲು ಹೋಲಿಕಾ ಎಂಬ ರಾಕ್ಷಸನನ್ನು ಸುಡಲಾಗುತ್ತದೆ. ಮರುದಿನ ಹೋಳಿ ಆಚರಿಸಲಾಗುತ್ತದೆ. ಈ ದಿನದ ಪೂಜೆ ಬಹಳ ಮುಖ್ಯ ಎನ್ನಲಾಗುತ್ತದೆ.

    MORE
    GALLERIES

  • 28

    Holi 2023: ಹೋಳಿಯ ಬೆಂಕಿಯಲ್ಲಿ ಈ ವಸ್ತುಗಳನ್ನು ಹಾಕಿದ್ರೆ ಹಣದ ಸಮಸ್ಯೆ ಬರಲ್ಲ

    ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಹೋಲಿಕಾ ದಹನದ ದಿನದಂದು ಕೆಲವು ವಿಶೇಷ ಕೆಲಸಗಳನ್ನು ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೋಳಿಕಾ ದಹನದ ಸಮಯದಲ್ಲಿ ಕೆಲವು ವಸ್ತುಗಳನ್ನು ಅರ್ಪಿಸುವುದರಿಂದ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಕಾಯಿಲೆಗಳಿಂದ ಮುಕ್ತಿಯೊಂದಿಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಅವು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 38

    Holi 2023: ಹೋಳಿಯ ಬೆಂಕಿಯಲ್ಲಿ ಈ ವಸ್ತುಗಳನ್ನು ಹಾಕಿದ್ರೆ ಹಣದ ಸಮಸ್ಯೆ ಬರಲ್ಲ

    ವೈದಿಕ ಪಂಚಾಂಗದ ಪ್ರಕಾರ, ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯು ಮಾರ್ಚ್ 06 ರಂದು ಸಂಜೆ 04:16 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 07 ರಂದು ಸಂಜೆ 06:08 ಕ್ಕೆ ಕೊನೆಗೊಳ್ಳುತ್ತದೆ. ತಿಥಿಯ ಪ್ರಕಾರ ಮಾರ್ಚ್ 07 ರಂದು ಫಾಲ್ಗುಣ ಪೂರ್ಣಿಮಾ ದಿನ ಸ್ನಾನ ಮತ್ತು ದಾನ ಮಾಡುವುದು ಬಹಳ ಮುಖ್ಯ.

    MORE
    GALLERIES

  • 48

    Holi 2023: ಹೋಳಿಯ ಬೆಂಕಿಯಲ್ಲಿ ಈ ವಸ್ತುಗಳನ್ನು ಹಾಕಿದ್ರೆ ಹಣದ ಸಮಸ್ಯೆ ಬರಲ್ಲ

    ಪಂಚಾಂಗದ ಪ್ರಕಾರ ಹೋಳಿಕಾ ದಹನಕ್ಕೆ ಮಾರ್ಚ್ 7 ರಂದು ಸಂಜೆ 06.24 ರಿಂದ 8.51 ರವರೆಗೆ ಶುಭ ಮುಹೂರ್ತ ಇದೆ. ಈ ಮುಹೂರ್ತದಲ್ಲಿ ಕೆಲ ವಸ್ತುಗಳನ್ನು ಸುಡುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

    MORE
    GALLERIES

  • 58

    Holi 2023: ಹೋಳಿಯ ಬೆಂಕಿಯಲ್ಲಿ ಈ ವಸ್ತುಗಳನ್ನು ಹಾಕಿದ್ರೆ ಹಣದ ಸಮಸ್ಯೆ ಬರಲ್ಲ

    ಉತ್ತಮ ಆರೋಗ್ಯಕ್ಕಾಗಿ ಹೋಳಿಕಾ ದಹನದ ದಿನ 10 ಬೇವಿನ ಎಲೆಗಳು, ಆರು ಲವಂಗ ಮತ್ತು ಸ್ವಲ್ಪ ಕರ್ಪೂರವನ್ನು ತೆಗೆದುಕೊಂಡು ಐದು-ಏಳು ಬಾರಿ ಬೆಂಕಿಯಲ್ಲಿ ಹಾಕಿ. ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

    MORE
    GALLERIES

  • 68

    Holi 2023: ಹೋಳಿಯ ಬೆಂಕಿಯಲ್ಲಿ ಈ ವಸ್ತುಗಳನ್ನು ಹಾಕಿದ್ರೆ ಹಣದ ಸಮಸ್ಯೆ ಬರಲ್ಲ

    ವ್ಯಾಪಾರದಲ್ಲಿ ಪ್ರಗತಿ ಬೇಕು ಎಂದರೆ ಹೋಳಿಕಾ ದಹನದ ಸಮಯದಲ್ಲಿ, ಸ್ವಲ್ಪ ಗೋಧಿಯನ್ನು ತೆಗೆದುಕೊಂಡು ಈ ಬೆಂಕಿಯಲ್ಲಿ ಹಾಕಿ. ಇದಾದ ನಂತರ, ಕೆಂಪು ಬಟ್ಟೆಯಲ್ಲಿ ಸ್ವಲ್ಪ ಗೋಧಿಯನ್ನು ಸುತ್ತಿ ನಿಮ್ಮ ಕೆಲಸದ ಸ್ಥಳದಲ್ಲಿ ಇಟ್ಟುಕೊಳ್ಳಿ. ಇದು ಅದೃಷ್ಟವನ್ನು ತರುತ್ತದೆ.

    MORE
    GALLERIES

  • 78

    Holi 2023: ಹೋಳಿಯ ಬೆಂಕಿಯಲ್ಲಿ ಈ ವಸ್ತುಗಳನ್ನು ಹಾಕಿದ್ರೆ ಹಣದ ಸಮಸ್ಯೆ ಬರಲ್ಲ

    ಆರ್ಥಿಕ ತೊಂದರೆಗಳಿಂದ ಮುಕ್ತಿ ಪಡೆಯಲು, ಹೋಳಿಕಾ ದಹನ ಅಗ್ನಿಯನ್ನು ಒಂದು ಬೆತ್ತಕ್ಕೆ ಹಚ್ಚಿಸಿಕೊಂಡು ಮನೆಯ ನೈಋತ್ಯ ದಿಕ್ಕಿನಲ್ಲಿ ಇಟ್ಟುಕೊಳ್ಳಿ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಅಲ್ಲದೇ ಮನೆಗೆ ಇದು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ.

    MORE
    GALLERIES

  • 88

    Holi 2023: ಹೋಳಿಯ ಬೆಂಕಿಯಲ್ಲಿ ಈ ವಸ್ತುಗಳನ್ನು ಹಾಕಿದ್ರೆ ಹಣದ ಸಮಸ್ಯೆ ಬರಲ್ಲ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES