Budhaditya Yoga: ಬುಧಾದಿತ್ಯ ಯೋಗದಿಂದ ಈ 4 ರಾಶಿಯವರಿಗೆ ಹಣದ ಹೊಳೆ!
Budhaditya Yoga: ಈಗಾಗಲೇ ಕೆಲ ರಾಶಿಗಳಲ್ಲಿ ಬುಧಾದಿತ್ಯ ಯೋಗ ರೂಪುಗೊಂಡಿದ್ದು, ಯೋಗದ ಶುಭ ಪರಿಣಾಮದಿಂದಾಗಿ ಆ ರಾಶಿಯ ಜನರಿಗೆ ಬಹಳ ಲಾಭವಾಗಲಿದೆ. ತಮ್ಮ ಬುದ್ದಿವಂತಿಕೆ, ಅನುಭವ ಹಾಗೂ ದಕ್ಷತೆಯಿಂದ ತಮ್ಮ ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಾರೆ.
ಬುಧಾದಿತ್ಯ ಯೋಗವು ಈಗಾಗಲೇ ಅಂದರೆ ಡಿಸೆಂಬರ್ 16ರಿಂದ ಧನು ರಾಶಿಯಲ್ಲಿ ರೂಪುಗೊಂಡಿದ್ದು, ಈ ಯೋಗದಿಂದ ವಿವಿಧ ರಾಶಿಗಳಿಗೆ ಲಾಭವಾಗಲಿದೆ. ಇದು ವರ್ಷಾಂತ್ಯದ ವರೆಗೆ ಇರಲಿದ್ದು, ಇದರಿಂದ ಆರ್ಥಿಕ ಸಮಸ್ಯೆಗಳು ಬರುವುದಿಲ್ಲ ಎನ್ನಲಾಗುತ್ತದೆ.
2/ 7
ಈಗಾಗಲೇ ಕೆಲ ರಾಶಿಗಳಲ್ಲಿ ಬುಧಾದಿತ್ಯ ಯೋಗ ರೂಪುಗೊಂಡಿದ್ದು, ಯೋಗದ ಶುಭ ಪರಿಣಾಮದಿಂದಾಗಿ ಆ ರಾಶಿಯ ಜನರಿಗೆ ಬಹಳ ಲಾಭವಾಗಲಿದೆ. ತಮ್ಮ ಬುದ್ದಿವಂತಿಕೆ, ಅನುಭವ ಹಾಗೂ ದಕ್ಷತೆಯಿಂದ ತಮ್ಮ ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಾರೆ.
3/ 7
ಮೇಷ: ಬುಧಾದಿತ್ಯ ಯೋಗದ ಕಾರಣದಿಂದ ಮೇಷ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಬಹಳ ಲಾಭ ಪಡೆಯಲಿದ್ದಾರೆ. ಹೊಸ ಹೊಸ ಅವಕಾಶಗಳು ನಿಮ್ಮನ್ನ ಹುಡುಕಿ ಬರಲಿದ್ದು, ಹಣದ ಸಮಸ್ಯೆ ಸಹ ಆಗುವುದಿಲ್ಲ.
4/ 7
ಕುಂಭ ರಾಶಿ: ಧನು ರಾಶಿಯಲ್ಲಿ ರೂಪುಗೊಂಡ ಈ ಯೋಗದ ಕಾರಣದಿಂದ ನಿಮಗೆ ಆರ್ಥಿಕವಾಗಿ ಲಾಭವಾಗಲಿದೆ. ಈ ಸಮಯದಲ್ಲಿ ನೀವು ಮಾಡುವ ಯಾವುದೇ ಹೂಡಿಕೆಯು ನಿಮಗೆ ಲಾಭ ನೀಡಲಿದೆ. ಉದ್ಯೋಗ ಬದಲಿಸುವ ಆಲೋಚನೆಯಲ್ಲಿ ಇದ್ದರೆ ಇದು ಸೂಕ್ತವಾದ ಸಮಯ.
5/ 7
ಮೀನ ರಾಶಿ: ಈ ಬುಧಾದಿತ್ಯ ಯೋಗದ ಕಾರಣದಿಂದ ಮೀನ ರಾಶಿಯವರು ಜೀವನದಲ್ಲಿ ಪ್ರಗತಿ ಸಾಧಿಸಲು ಸಹಾಯವಾಗುತ್ತದೆ. ಉದ್ಯಮಿಗಳಿಗೆ ಲಾಭವಾದರೆ, ಉದ್ಯೋಗಿಗಳಿಗೆ ಭಡ್ತಿ ಸಿಗುತ್ತದೆ. ಆದರೆ ಹಾಗೆಯೇ ಜವಾಬ್ದಾರಿಗಳು ಸಹ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಸಹ ಚೆನ್ನಾಗಿರುತ್ತದೆ.
6/ 7
ಮಿಥುನ ರಾಶಿ: ಮಿಥುನ ರಾಶಿಯ 7ನೇ ಮನೆಯಲ್ಲಿ ಈ ಬುಧಾದಿತ್ಯ ಯೋಗ ರೂಪುಗೊಂಡಿದ್ದು, ತುಂಬಾ ಮಂಗಳಕರವಾಗಿರಲಿದೆ ಎನ್ನಲಾಗುತ್ತಿದೆ. ಕೆಲಸದಲ್ಲಿ ಉತ್ತಮ ಲಾಭ ಸಿಗಲಿದ್ದು, ಹೊಸ ಯೋಜನೆ ಆರಂಭವಾಗುವ ಸಾಧ್ಯತೆ ಇರುತ್ತದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)