ಕರ್ಕಾಟಕ ರಾಶಿ: ಬುಧ ಈ ರಾಶಿಯ ಹತ್ತನೇ ಮನೆಯಲ್ಲಿ ಹಿಮ್ಮುಖವಾಗಲಿದ್ದು, ಜೊತೆಗೆ ಈ ರಾಶಿಯಲ್ಲಿ ಬುಧ ಮೂರನೇ ಮತ್ತು ಹನ್ನೆರಡನೆಯ ಮನೆಯ ಅಧಿಪತಿ. ಹಾಗಾಗಿ ಈ ರಾಶಿಯವರು ತಮ್ಮ ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಕೆಲವು ಅಡೆತಡೆಗಳನ್ನು ಎದುರಿಸುತ್ತಾರೆ. ಅಲ್ಲದೇ, ಅನಾವಶ್ಯಕ ಖರ್ಚು ಹೆಚ್ಚಾಗಲಿದೆ. ಇಷ್ಟೇ ಅಲ್ಲದೇ, ವೈವಾಹಿಕ ಜೀವನದಲ್ಲೂ ಕೆಲವು ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಸ್ವಲ್ಪ ಎಚ್ಚರ.
ವೃಷಭ ರಾಶಿ: ಈ ರಾಶಿಯಲ್ಲಿ ಎರಡನೇ ಮತ್ತು ಐದನೇ ಮನೆಯ ಅಧಿಪತಿ ಬುಧ, ಅಲ್ಲದೇ ಇದು ಹನ್ನೆರಡನೇ ಮನೆಯಲ್ಲಿ ಹಿಮ್ಮುಖವಾಗಲಿದೆ, ಹಾಗಾಗಿ ಈ ರಾಶಿಯ ಜನರು ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಷ್ಟಕ್ಕೆ ಕಾರಣವಾಗುವ ವ್ಯಾಪಾರದಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡುವುದನ್ನು ತಪ್ಪಿಸಿ. ಅಲ್ಲದೇ, ಅನಾವಶ್ಯಕ ಖರ್ಚು ಹೆಚ್ಚಾಗಲಿದೆ. ಇದಲ್ಲದೇ ಕುಟುಂಬದಲ್ಲಿಯೂ ಕಲಹಗಳು ಉಂಟಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ.