ಮೇಷ: ಬುಧ ಹಿಮ್ಮುಖವಾಗಿ ಚಲನೆ ಮಾಡಿದಾಗ, ಮೇಷ ರಾಶಿಯವರು ಎಲ್ಲಾ ರೀತಿಯಲ್ಲೂ ಯಶಸ್ಸು ಪಡೆಯುತ್ತಾರೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರೆ ಅದರಿಂದ ಲಾಭ ಸಿಗುತ್ತದೆ. ಅಲ್ಲದೇ ವೃತ್ತಿಯಲ್ಲಿ ಉತ್ತಮ ಅವಕಾಶಗಳು ಸಿಗುತ್ತದೆ. ನಿರುದ್ಯೋಗಿಗಳಿಗೆ ಹೊಸ ಕೆಲಸ ಸಿಗಲಿದೆ. ಸದ್ಯ ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಇನ್ಕ್ರಿಮೆಂಟ್ ಸಿಗಬಹುದು. ಆದಾಯದಲ್ಲಿ ಭಾರೀ ಏರಿಕೆಯಾಗಲಿದೆ.