ಜ್ಯೋತಿಷ್ಯದಲ್ಲಿ ಗ್ರಹಗಳ ಸಂಕ್ರಮಣವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಒಂದು ನಿರ್ದಿಷ್ಟ ಸಮಯದಲ್ಲಿ ಎಲ್ಲಾ ಗ್ರಹಗಳು ತಮ್ಮ ರಾಶಿಗಳನ್ನು ಬದಲಾಯಿಸುವ ಮೂಲಕ ಚಲಿಸುತ್ತವೆ. ಹೀಗಾಗಿ ಗ್ರಹಗಳ ಸಂಚಾರವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ, ಆದರೆ ಶನಿಯು ಸುಮಾರು ಎರಡೂವರೆ ವರ್ಷಗಳ ಕಾಲ ಅದೇ ರಾಶಿಯಲ್ಲಿ ಇರುತ್ತಾನೆ.
ಈ ರೀತಿಯಾಗಿ ಒಂಬತ್ತು ಗ್ರಹಗಳು ಸಹ ಕಾಲಕಾಲಕ್ಕೆ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಬುಧನ 28 ದಿನಗಳ ಕಾಲ ಒಂದು ರಾಶಿಯಲ್ಲಿ ಇರುತ್ತಾನೆ. ನಂತರ ಇನ್ನೊಂದು ರಾಶಿಗೆ ಕಾಲಿಡುತ್ತಾನೆ. ಮಾರ್ಚ್ 31 ರಂದು ಬುಧನು ರಾಶಿಯನ್ನು ಬದಲಾಯಿಸಿದ್ದಾನೆ. ನಿನ್ನೆ ಮಧ್ಯಾಹ್ನ 03.01 ಗಂಟೆಗೆ ಬುಧ ಮೇಷ ರಾಶಿಗೆ ಪ್ರವೇಶ ಮಾಡಿದ್ದಾನೆ. ಜೂನ್ 7 ರಂದು ಸಂಜೆ 07:58 ರವರೆಗೆ ಬುಧ ಮೇಷ ರಾಶಿಯಲ್ಲಿರುತ್ತಾನೆ. ಅದರ ನಂತರ ಬುಧನು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ.