Budhaditya Yoga: ಈ 5 ರಾಶಿಯವರ ಬದುಕೇ ಬದಲಾಗಲಿದೆ, ಹುಡುಕಿ ಬರಲಿದೆ ಝಣ ಝಣ ಕಾಂಚಾಣ

Budh Gochar 2023: ಗ್ರಹಗಳ ರಾಜಕುಮಾರ ಎಂದು ಬುಧ ಗ್ರಹವನ್ನು ಕರೆಯಲಾಗುತ್ತದೆ. ಈ ಬುಧ ಗ್ರಹ ಫೆಬ್ರವರಿ 27 ರಂದು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಇದರಿಂದ ಬುಧಾದಿತ್ಯ ಯೋಗ ರೂಪುಗೊಳ್ಳಲಿದೆ. ಈ ಯೋಗದಿಂದ ಅನೇಕ ರಾಶಿಗಳ ಬದುಕು ಬದಲಾಗಲಿದೆ. ಯಾವ ರಾಶಿಗೆ, ಯಾವ ರೀತಿ ಲಾಭ ಆಗಲಿದೆ ಎಂಬುದು ಇಲ್ಲಿದೆ.

First published:

  • 18

    Budhaditya Yoga: ಈ 5 ರಾಶಿಯವರ ಬದುಕೇ ಬದಲಾಗಲಿದೆ, ಹುಡುಕಿ ಬರಲಿದೆ ಝಣ ಝಣ ಕಾಂಚಾಣ

    ಫೆಬ್ರವರಿ ಸಂಜೆ 04.55ಕ್ಕೆ ಕುಂಭ ರಾಶಿಯಲ್ಲಿ ಬುಧ ಸಂಕ್ರಮಣ ನಡೆಯಲಿದೆ. ಬುಧ ಸದ್ಯ ಮಕರ ರಾಶಿಯಲ್ಲಿದ್ದಾನೆ. ಫೆಬ್ರವರಿ 27 ರ ಸಂಜೆಯಿಂದ ಮಾರ್ಚ್ 16 ರ ಬೆಳಗ್ಗೆಯವರೆಗೆ ಬುಧ ಮತ್ತು ಶನಿ ಕುಂಭ ರಾಶಿಯಲ್ಲಿ ಇರುತ್ತಾರೆ. ನಂತರ ಬುಧನು ಮಾರ್ಚ್ 16 ರಂದು ಬೆಳಗ್ಗೆ 10.54 ಕ್ಕೆ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.

    MORE
    GALLERIES

  • 28

    Budhaditya Yoga: ಈ 5 ರಾಶಿಯವರ ಬದುಕೇ ಬದಲಾಗಲಿದೆ, ಹುಡುಕಿ ಬರಲಿದೆ ಝಣ ಝಣ ಕಾಂಚಾಣ

    ಫೆಬ್ರವರಿ 27 ರಂದು ಕುಂಭ ರಾಶಿಯಲ್ಲಿ ನಡೆಯುವ ಈ ಬುಧದ ಸಂಕ್ರಮಣವು ಮಂಗಳಕರ ಸಂಯೋಗವನ್ನು ಸೃಷ್ಟಿಸುತ್ತದೆ, ಹೀಗಾಗಿ ಇದರಿಂದ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತದೆ. ಈ ಬುಧಾದಿತ್ಯ ರಾಜಯೋಗವು ವ್ಯಾಪಾರ, ಉದ್ಯೋಗ ಮತ್ತು ಆದಾಯದ ವಿಚಾರವಾಗಿ 5 ರಾಶಿಯವರಿಗೆ ವಿಶೇಷ ಲಾಭವನ್ನು ನೀಡುತ್ತದೆ.

    MORE
    GALLERIES

  • 38

    Budhaditya Yoga: ಈ 5 ರಾಶಿಯವರ ಬದುಕೇ ಬದಲಾಗಲಿದೆ, ಹುಡುಕಿ ಬರಲಿದೆ ಝಣ ಝಣ ಕಾಂಚಾಣ

    ಮೇಷ: ಈ ರಾಶಿಯವರಿಗೆ ಬುಧ ಸಂಕ್ರಮಣ ಲಾಭದಾಯಕವಾಗಿರುತ್ತದೆ. ಉದ್ಯೋಗಿಗಳ ಸಂಬಳ ಹೆಚ್ಚಾಗಬಹುದು. ಈ ಸಮಯದಲ್ಲಿ ನೀವು ಹಣದ ವಿಷಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನೀವು ಯಾವುದೇ ವಿವಾದದಲ್ಲಿ ಭಾಗಿಯಾಗಿದ್ದರೆ, ಚಿಂತಿಸಬೇಡಿ, ನಿಮ್ಮ ಪರವಾಗಿ ಅದು ಬದಲಾಗಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಜನರು ಹೊಸ ಹೊಸ ಅವಕಾಶವನ್ನು ಪಡೆಯುತ್ತಾರೆ.

    MORE
    GALLERIES

  • 48

    Budhaditya Yoga: ಈ 5 ರಾಶಿಯವರ ಬದುಕೇ ಬದಲಾಗಲಿದೆ, ಹುಡುಕಿ ಬರಲಿದೆ ಝಣ ಝಣ ಕಾಂಚಾಣ

    ವೃಷಭ: ಕುಂಭ ರಾಶಿಯಲ್ಲಿ ಬುಧ ಸಂಕ್ರಮಣ ನಿಮಗೆ ಯಶಸ್ಸು ಹೆಚ್ಚಿಸಲಿದೆ. ಈ ಸಮಯದಲ್ಲಿ ವ್ಯವಹಾರದಲ್ಲಿ ಗಣನೀಯ ಯಶಸ್ಸು ಇರುತ್ತದೆ. ಲಾಭ ಪಡೆಯಲು ಉತ್ತಮ ಅವಕಾಶಗಳು ದೊರೆಯಲಿವೆ. ಇದು ನಿಮ್ಮ ಆರ್ಥಿಕ ಸ್ಥಿತಿ ಬದಲಾಗುತ್ತದೆ. ಉದ್ಯೋಗಸ್ಥರು ತಮ್ಮ ಕೆಲಸದಲ್ಲಿ ವಿಶ್ವಾಸವನ್ನು ಗಳಿಸುತ್ತಾರೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

    MORE
    GALLERIES

  • 58

    Budhaditya Yoga: ಈ 5 ರಾಶಿಯವರ ಬದುಕೇ ಬದಲಾಗಲಿದೆ, ಹುಡುಕಿ ಬರಲಿದೆ ಝಣ ಝಣ ಕಾಂಚಾಣ

    ಮಿಥುನ: ಕುಂಭ ರಾಶಿಯಲ್ಲಿ ಬುಧಾದಿತ್ಯ ಯೋಗವು ನಿಮ್ಮ ರಾಶಿಯ ಜನರಿಗೆ ಸಂಪೂರ್ಣ ಲಾಭ ನೀಡುತ್ತದೆ. ಉದ್ಯೋಗಿಗಳಿಗೆ ಒಳ್ಳೆಯ ದಿನಗಳು ಬರಲಿವೆ. ಜೀವನದಲ್ಲಿ ಪ್ರಗತಿ ಇರುತ್ತದೆ ಮತ್ತು ಆರ್ಥಿಕ ಸ್ಥಿತಿ ಸಹ ಬಲವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ವ್ಯಾಪಾರದಲ್ಲಿ ಹೂಡಿಕೆ ಲಾಭದಾಯಕವಾಗಲಿದೆ.

    MORE
    GALLERIES

  • 68

    Budhaditya Yoga: ಈ 5 ರಾಶಿಯವರ ಬದುಕೇ ಬದಲಾಗಲಿದೆ, ಹುಡುಕಿ ಬರಲಿದೆ ಝಣ ಝಣ ಕಾಂಚಾಣ

    ತುಲಾ: ಬುಧ ಸಂಕ್ರಮಣ ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ. ಆದಾಯ ಹೆಚ್ಚಳದಿಂದ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಯಶಸ್ಸನ್ನು ಪಡೆಯುತ್ತಾರೆ. ವ್ಯವಹಾರದಲ್ಲಿ ಇಟ್ಟ ಹೆಜ್ಜೆ ಯಶಸ್ಸನ್ನು ತರುತ್ತದೆ. ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

    MORE
    GALLERIES

  • 78

    Budhaditya Yoga: ಈ 5 ರಾಶಿಯವರ ಬದುಕೇ ಬದಲಾಗಲಿದೆ, ಹುಡುಕಿ ಬರಲಿದೆ ಝಣ ಝಣ ಕಾಂಚಾಣ

    ಧನು ರಾಶಿ: ಬುಧ ಸಂಕ್ರಮಣದಿಂದಾಗಿ ನಿಮ್ಮ ಮಾತು ಹೆಚ್ಚು ಪ್ರಭಾವ ಬೀರುತ್ತದೆ. ಜನರು ನಿಮ್ಮಿಂದ ಪ್ರಭಾವಿತರಾಗುತ್ತಾರೆ. ಆದರೆ ಆತುರದಲ್ಲಿ ಯಾವುದನ್ನೂ ತಪ್ಪಾಗಿ ಹೇಳಬಾರದು ಎಂಬುದನ್ನು ನೆನಪಿಡಿ. ಉದ್ಯೋಗಸ್ಥರಿಗೆ ಹುದ್ದೆ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಈ ಸಮಯದಲ್ಲಿ, ನೀವು ಅನೇಕ ಕಾರ್ಯಗಳನ್ನು ಕೌಶಲ್ಯದಿಂದ ಮತ್ತು ಬುದ್ಧಿವಂತಿಕೆಯಿಂದ ನಿರ್ವಹಿಸುತ್ತೀರಿ, ಅದು ಮೆಚ್ಚುಗೆ ಪಡೆಯುತ್ತದೆ.

    MORE
    GALLERIES

  • 88

    Budhaditya Yoga: ಈ 5 ರಾಶಿಯವರ ಬದುಕೇ ಬದಲಾಗಲಿದೆ, ಹುಡುಕಿ ಬರಲಿದೆ ಝಣ ಝಣ ಕಾಂಚಾಣ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES