Budha Gochar: ಫೆಬ್ರವರಿಯಲ್ಲಿ ಈ 8 ರಾಶಿಗೆ ಬಂಪರ್ ಲಾಭ, ಬಯಸಿದ್ದೆಲ್ಲಾ ಸಿಗಲಿದೆ
Budha Gochar: ಫೆಬ್ರವರಿ ಎರಡನೇ ವಾರದಲ್ಲಿ ಬುಧ ಸಂಕ್ರಮಣ ನಡೆಯಲಿದೆ. ಬುಧ ಫೆಬ್ರವರಿ 07 ರಂದು ಬೆಳಗ್ಗೆ 07.38 ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಜ್ಯೋತಿಷ್ಯದ ಪ್ರಕಾರ ಫೆಬ್ರವರಿ 07 ರಿಂದ ಫೆಬ್ರವರಿ 27 ರವರೆಗೆ ಬುಧ ಮಕರ ರಾಶಿಯಲ್ಲಿ ಇರುತ್ತಾನೆ. ಈ ಸಮಯದಲ್ಲಿ 8 ರಾಶಿಯ ಜನರು ವ್ಯಾಪಾರ, ಉದ್ಯೋಗದಲ್ಲಿ ಲಾಭ ಪಡೆಯಬಹುದು. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಮೇಷ: ಮಕರ ರಾಶಿಗೆ ಬುಧನ ಪ್ರವೇಶ ನಿಮಗೆ ಲಾಭದಾಯಕವಾಗಿರುತ್ತದೆ. ನಿಮ್ಮ ಬುದ್ಧಿವಂತಿಕೆಯ ಕಾರಣದಿಂದ ವೇಗವಾಗಿ ಕೆಲಸ ಆಗುತ್ತದೆ ಹಾಗೂ ಲಾಭ ಸಹ ಸಿಗಲಿದೆ. ಅಲ್ಲದೇ, ನಿರ್ಧಾರಗಳನ್ನು ಪ್ರಶಂಸಿಸಲಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ.
2/ 8
ವೃಷಭ ರಾಶಿ: ಬುಧ ಸಂಕ್ರಮಣದಿಂದ ನಿಮ್ಮ ಜೀವನ ಸುಖಮಯವಾಗಿರುತ್ತದೆ. ನೀವು ವೃತ್ತಿಜೀವನದಲ್ಲಿ ಯಶಸ್ಸು ಪಡೆಯಲಿದ್ದೀರಿ. ಕಷ್ಟಪಟ್ಟು ದುಡಿಯುವವರಿಗೆ ಪ್ರತಿಫಲ ದೊರೆಯುತ್ತದೆ. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
3/ 8
ಮಿಥುನ: ಬುಧ ಸಂಕ್ರಮಣ ನಿಮ್ಮ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ತರುತ್ತದೆ. ಜೀವನದಲ್ಲಿ ಕೆಲವು ಉತ್ತಮ ಬದಲಾವಣೆಗಳು ಕಂಡುಬರುತ್ತವೆ, ಆರ್ಥಿಕವಾಗಿ ಸಹ ಲಾಭ ಸಿಗಲಿದೆ,
4/ 8
ಕನ್ಯಾ ರಾಶಿ: ಮಕರ ರಾಶಿಯಲ್ಲಿ ಬುಧ ಸಂಕ್ರಮಣವು ನಿಮ್ಮ ರಾಶಿಯ ಜನರಿಗೆ ಆರ್ಥಿಕ ವಿಚಾರವಾಗಿ ಸಹಾಯಕವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗುತ್ತದೆ. ಪ್ರೇಮ ಜೀವನ ಅಥವಾ ವೈವಾಹಿಕ ಜೀವನದಲ್ಲಿ ಶಾಂತಿ ಇರುತ್ತದೆ.
5/ 8
ವೃಶ್ಚಿಕ: ಬುಧ ಸಂಕ್ರಮಣ ನಿಮ್ಮನ್ನ ಆರ್ಥಿಲವಾಗಿ ಬಲಪಡಿಸುತ್ತದೆ. ಅನಗತ್ಯ ವೆಚ್ಚವನ್ನು ನಿಯಂತ್ರಿಸುವ ಮೂಲಕ ಉಳಿತಾಯವನ್ನು ಹೆಚ್ಚಿಸುವತ್ತ ಗಮನಹರಿಸಿ. ಫೆಬ್ರವರಿ 07 ರಿಂದ ಫೆಬ್ರವರಿ 27 ರ ನಡುವೆ ನೀವು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಬೇಕು, ಆಗ ಮಾತ್ರ ಅದು ಲಾಭದಾಯಕವಾಗಿರುತ್ತದೆ.
6/ 8
ಧನು ರಾಶಿ: ಬುಧ ನಿಮ್ಮ ವೃತ್ತಿ ಜೀವನದ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ಜವಾಬ್ದಾರಿಗಳನ್ನು ನೀವು ಪೂರ್ಣ ಶ್ರದ್ಧೆಯಿಂದ ಪೂರೈಸಿದರೆ, ನಿಮ್ಮ ಕೆಲಸಕ್ಕೆ ತಕ್ಕ ಫಲ ಸಿಗುತ್ತದೆ. ಈ ಸಮಯದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ಮುಂದಿನ ದಿನಗಳಲ್ಲಿ ಪರಿಣಾಮ ಬೀರಲಿದೆ.
7/ 8
ಮಕರ: ಬುಧ ನಿಮ್ಮ ರಾಶಿಗೆ ಪ್ರವೇಶ ಮಾಡುವುದರಿಂದ ನಿಮ್ಮ ಆದಾಯವು ಹೆಚ್ಚಾಗಬಹುದು. ಹಣಕಾಸಿನ ವಿಚಾರವಾಗಿ ನೀವು ಗಟ್ಟಿಯಾಗುತ್ತೀರಿ. ಹಠಾತ್ ಆರ್ಥಿಕ ಲಾಭಗಳು ಇರಬಹುದು. ಶತ್ರುಗಳ ಕಾಟ ಈ ಸಮಯದಲ್ಲಿ ಇರುವುದಿಲ್ಲ,
8/ 8
ಮೀನ: ಬುಧ ಸಂಕ್ರಮಣವು ನಿಮಗೆ ಹೊಸ ಉದ್ಯೋಗವನ್ನು ಪಡೆಯಲು ಸಹಾಯ ಮಾಡುತ್ತದೆ. ವ್ಯಾಪಾರದಲ್ಲಿ ಹೊಸದನ್ನು ಮಾಡಬೇಕೆಂದು ಯೋಚಿಸುವವರಿಗೆ, ಸಮಯವು ಸೂಕ್ತವಾಗಿರುತ್ತದೆ. ಯಶಸ್ಸು ಸಿಗಲಿದೆ.