ಬೆಳ್ಳಿ ನಂದಿ: ನಂದಿಯು ಶಿವನ ವಾಹನ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗೆಯೇ, ಪ್ರತಿಯೊಂದು ಶಿವ ದೇವಾಲಯದಲ್ಲಿ, ದೇವರ ಮುಂದೆ ಒಂದು ನಂದಿ ವಿಗ್ರಹ ಇದ್ದೇ ಇರುತ್ತದೆ. ನಂದಿ ಇಲ್ಲದೇ, ಎಲ್ಲಿಯೂ ಶಿವ ಇರುವುದಿಲ್ಲ. ಹಾಗಾಗಿ ಶಿವರಾತ್ರಿಯ ದಿನ ಮನೆಗೆ ಬೆಳ್ಳಿಯ ನಂದಿ ವಿಗ್ರಹ ತಂದರೆ ಮನೆಯಲ್ಲಿ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹಾಗೆಯೇ, ಪೂಜೆಯ ನಂತರ ಹಣ ಇಟ್ಟ ಜಾಗದಲ್ಲಿ ಈ ನಂದಿಯನ್ನು ಇಡಬೇಕು.