Varaha Swamy: ತಿರುಪತಿಯಲ್ಲಿ ತಿಮ್ಮಪ್ಪನಿಗೂ ಮುಂಚೆ ವರಾಹ ಸ್ವಾಮಿಯ ದರ್ಶನ ಮಾಡ್ಲೇಬೇಕು, ಇದಕ್ಕೊಂದು ಕಾರಣವಿದೆ
Bhu Varaha swamy Temple: ತಿರುಪತಿ ದೇವಸ್ಥಾನಕ್ಕೆ ಹೋಗುವ ಮೊದಲು ಭೂ ವರಾಹ ಸ್ವಾಮಿ ದೇವಸ್ಥಾನಕ್ಕೆ ಹೀಗಿ ದರ್ಶನ ಪಡೆಯಬೇಕು ಎಂದು ಎಲ್ಲರು ಹೇಳುವುದನ್ನ ಕೇಳಿರುತ್ತೇವೆ. ಆದರೆ ಇದಕ್ಕೆ ಕಾರಣ ಮಾತ್ರ ಹಲವಾರು ಜನರಿಗೆ ಗೊತ್ತಿಲ್ಲ. ಏಕೆ ಮೊದಲು ವರಾಹ ಸ್ವಾಮಿಯ ದರ್ಶನ ಆಗಬೇಕು ಎಂಬುದು ಇಲ್ಲಿದೆ.
ಶ್ರೀ ಭೂ ವರಾಹ ಸ್ವಾಮಿ ದೇವಸ್ಥಾನ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಉತ್ತರ ದಿಕ್ಕಿನ ಏಳು ಬೆಟ್ಟಗಳಲ್ಲಿನ ಪುಷ್ಕರಿಣಿಯ ದಡದಲ್ಲಿದ್ದು, ತಿಮ್ಮಪ್ಪನ ದರ್ಶನಕ್ಕೂ ಮೊದಲು ಭಕ್ತಾಧಿಗಳು ವರಾಹ ಸ್ವಾಮಿಯ ದರ್ಶನ ಮಾಡುವುದು ವಾಡಿಕೆ.
2/ 7
ಎಲ್ಲರಿಗೂ ಗೊತ್ತಿರುವಂತೆ ವಿಷ್ಣುವಿನ ಮೂರನೇ ಅವತಾರ ವರಾಹ. ಹಿರಣ್ಯಾಕ್ಷ ಭೂ ದೇವಿಯನ್ನು ಕದ್ದು ಪಾತಾಳದಲ್ಲಿ ಅಡಗಿಸಿ ಇಟ್ಟಾಗ, ವರಾಹ ರೂಪ ತಾಳಿದ ವಿಷ್ಣು ಭೂ ದೇವಿಯನ್ನು ಕಾಪಾಡುತ್ತಾನೆ.
3/ 7
ಶ್ರೀ ಭೂ ವರಾಹ ಸ್ವಾಮಿಯು ಕಾಡುಹಂದಿಯ ರೂಪದಲ್ಲಿ ಭಗವಾನ್ ಶ್ರೀ ಮಹಾ ವಿಷ್ಣುವಿನ ಅವತಾರವಾಗಿದ್ದು. ಏಳು ಬೆಟ್ಟಗಳ ಮೂಲ ಒಡೆಯ ಈ ವರಾಹ ಸ್ವಾಮಿ. ಭಗವಾನ್ ಶ್ರೀ ವೆಂಕಟೇಶ್ವರ ಸ್ವಾಮಿಯು ಭೂಮಿಗೆ ಇಳಿದಾಗ ಶ್ರೀ ಭೂವರಾಹ ಸ್ವಾಮಿಯು ಬೆಟ್ಟಗಳ ಮೇಲೆ ನೆಲೆಸಿದ್ದರು
4/ 7
ಈ ದೇವಾಲಯದಲ್ಲಿ ಭೂ ತಾಯಿ ಸಮೀಪವಾಗಿ ವರಾಹ ಸ್ವಾಮಿ ನೆಲೆಸಿದ್ದು, ದಂತಕಥೆಯ ಪ್ರಕಾರ, ತಿರುಮಲವನ್ನು ಮೂಲತಃ ಆದಿವರಾಹಕ್ಷೇತ್ರ ಎಂದರೆ ಶ್ರೀ ಭೂ ವರಾಹ ಸ್ವಾಮಿಯ ವಾಸಸ್ಥಳ ಎಂದು ಕರೆಯಲಾಗುತ್ತಿತ್ತು.
5/ 7
ಇನ್ನು ಬ್ರಹ್ಮಪುರಾಣದ ಪ್ರಕಾರ, ಶ್ರೀ ವೆಂಕಟೇಶ್ವರ ಸ್ವಾಮಿ ಎಲ್ಲಿ ವಾಸ ಮಾಡುವುದು ಎಂದು ಯೋಚನೆ ಮಾಡುತ್ತಿದ್ದಾಗ, ವರಾಹ ಸ್ವಾಮಿಯನ್ನು ಕೋರಿಕೊಂಡಿದ್ದರಂತೆ. ಹಾಗಾಗಿ ಈ ಬೆಟ್ಟಗಳ ಮೇಲೆ ನೆಲೆಸಲು ವರಾಹ ಸ್ವಾಮಿ ಅವಕಾಶ ನೀಡಿದ್ದರು ಎನ್ನಲಾಗುತ್ತದೆ.
6/ 7
ಅಲ್ಲದೇ ಈ ಬೆಟ್ಟಗಳ ಮೇಲೆ ನೆಲೆಸಲು ಅವಕಾಶ ನೀಡಿದ ಕಾರಣದಿಂದ ಕೃತಜ್ಞತಾ ಪೂರ್ವಕವಾಗಿ, ಭಗವಾನ್ ಶ್ರೀ ವೆಂಕಟೇಶ್ವರ ಸ್ವಾಮಿಯು ಭಗವಾನ್ ಶ್ರೀ ಭೂ ವರಾಹ ಸ್ವಾಮಿಗೆ ಪ್ರಥಮ ದರ್ಶನ ಮತ್ತು ಮೊದಲ ನೈವೇದ್ಯ ಮಾಡಲಾಗುವುದು ಎಂದು ವಚನ ನೀಡುತ್ತಾರೆ.
7/ 7
ಹೀಗಾಗಿ ಸಂಪ್ರದಾಯದ ಪ್ರಕಾರ, ಯಾತ್ರಾರ್ಥಿಗಳು ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಭೇಟಿ ಮಾಡುವ ಮೊದಲು ಶ್ರೀ ಭೂ ವರಾಹ ಸ್ವಾಮಿಯ ದರ್ಶನವನ್ನು ಮಾಡುವುದು ಕಡ್ಡಾಯವಾಗಿದೆ.