ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಬೆಂಗಳೂರಿನಿಂದಲೇ ನೇರ ರೈಲು ಸಂಚಾರ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಆದರೆ, ಈಗ ಬೆಂಗಳೂರಿನಿಂದಲೇ ಕಾಶಿಗೆ ನೇರ ರೈಲು ಸಂಚಾರ ಆರಂಭವಾಗಲಿದೆ. ಅಲ್ಲದೇ, ಯಾತ್ರಾರ್ಥಿಗಳು ರಾಜ್ಯ ಸರ್ಕಾರದ ಸಹಾಯಧನದಲ್ಲಿ ಈ ಕಾಶಿ ಯಾತ್ರೆ ನಡೆಸಬಹುದಾಗಿದೆ.
2/ 8
ಧಾರ್ಮಿಕ ದತ್ತಿ ಇಲಾಖೆ ಭಾರತ್ ಗೌರವ್ ರೈಲು ಯೋಜನೆ ಬಳಸಿಕೊಂಡು ಈ ಕಾಶಿಯಾತ್ರೆ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಈ ಸಂಬಂಧ ಈಗಾಗಲೇ ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಇದೇ ಶ್ರಾವಣದಲ್ಲಿ ಅಂದರೆ, ಆಗಸ್ಟ್ನಲ್ಲಿ ಮೊದಲ ಕಾಶಿ ಯಾತ್ರೆ ಪ್ರವಾಸ ಆರಂಭವಾಗಲಿದೆ.
3/ 8
ಈ ಪ್ರವಾಸ ಏಳು ದಿನ ಕಾಲ ನಡೆಯಲಿದ್ದು, ಯಾತ್ರಿಕರ ವಸತಿ, ಆಹಾರ ಮತ್ತು ಸಾರಿಗೆ ಯೋಜನೆಯನ್ನು ಐಆರ್ಸಿಟಿಸಿ ನಡೆಸಲಿದೆ. ಈ ಪ್ರವಾಸದಲ್ಲಿ ಯಾತ್ರಿಕರು ಕಾಶಿ, ಅಯೋಧ್ಯೆ, ಪ್ರಯಾಗರಾಜ್ ಸೇರಿದಂತೆ ಅನೇಕ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ನಡೆಸಬಹುದು.
4/ 8
ಈಗಾಗಲೇ ಸರ್ಕಾರ ಬಜೆಟ್ನಲ್ಲಿ ಕಾಶಿಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ಸಹಾಯಧನ ಘೋಷಿಸಿದೆ. ಈ ಯೋಜನೆಯ ಅರ್ಹ ಫಲಾನುಭವಿಗಳು ಮತ್ತು ಇರೆ ಯಾತ್ರಿಗಳ ಜೊತೆಗೆ ಶೀಘ್ರದಲ್ಲೇ ಧಾರ್ಮಿಕ ದತ್ತಿ ಇಲಾಖೆ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ
5/ 8
ಇನ್ನು ಈ ಪ್ರವಾಸದಲ್ಲಿ ಯಾತ್ರಾರ್ಥಿಗಳಿಗೆ 15 ಸಾವಿರ ವೆಚ್ಚ ಆಗಲಿದ್ದು, ರಾಜ್ಯ ಸರ್ಕಾರ 5 ಸಾವಿರ ಸಹಾಯಧನ ನೀಡಲಿದೆ. ಏಳು ದಿನದ ಈ ಪ್ರವಾಸ ಎಲ್ಲಿ, ಯಾವ ಸ್ಥಳಗಿಗೆ ಭೇಟಿ ನೀಡಲಿದೆ ಎಂಬ ಕುರಿತ ರೂಪು ರೇಷವನ್ನು ಶೀಘ್ರದಲ್ಲೇ ಐಆರ್ಸಿಟಿಸಿ ಬಿಡುಗಡೆ ಮಾಡಲಾಗಿದೆ.
6/ 8
ಈ ಪ್ರಯಾಣದಲ್ಲಿ 4,161 ಕಿ.ಮೀ ದೂರ ಕ್ರಮಿಸಲಾಗುವುದು. ಈ ರೈಲಿನಲ್ಲಿ (ಭಾರತ್ ಗೌರವ್ ತೀರ್ಥಯಾತ್ರೆ ರೈಲು) ಒಟ್ಟು 14 ಕೋಚ್ಗಳು ಇರಲಿದ್ದು, ಈ ಪೈಕಿ 11 ಬೋಗಿಗಳು ಪ್ರಯಾಣಕ್ಕಾಗಿ ಇರುತ್ತವೆ.
7/ 8
ಪ್ರತಿ ಕೋಚ್ನಲ್ಲಿ ರಾಜ್ಯದ ಪ್ರಮುಖ ದೇವಾಲಯಗಳ ಕಲಾಕೃತಿಗಳನ್ನು ಮಾಡಲಾಗುವುದು. ಜನರ ಪೂಜೆಗಾಗಿ ಬೋಗಿಯನ್ನು ದೇವಸ್ಥಾನವನ್ನಾಗಿ ಪರಿವರ್ತಿಸಲಾಗಿದೆ. ಇದರಿಂದ ಯಾತ್ರಾರ್ಥಿಗಳಿಗೆ ಧಾರ್ಮಿಕ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ.
8/ 8
ದೇಗುಲ ಪ್ರವಾಸೋದ್ಯಮವನ್ನು ಹಾಗೂ ಪ್ರಧಾನಿ ಮೋದಿ ಅವರ ದಿವ್ಯ ಕಾಶಿ, ಭವ್ಯ ಕಾಶಿ ಅಭಿಯಾನವನ್ನು ಉತ್ತೇಜಿಸಲು ಕರ್ನಾಟಕದ ಜನರಿಗೆ ಈ ವಿಶೇಷ ರೈಲು ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ