ಉದ್ಯೋಗ ಮಾಡುವವರು ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿಗೆ ಮುಖಮಾಡಿ ಕುಳಿತುಕೊಳ್ಳಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹೀಗಗೆ ಕೂರುವುದರಿಂದ ನಿಮ್ಮ ಕೆರಿಯರ್ ಹಾಳಾಗುತ್ತದೆ. ನೀವು ಉದ್ಯೋಗ ಕೊಡುವವರಾಗಿದ್ದಾರೆ ಕೊಠಡಿಯು ನೈಋತ್ಯ ಅಥವಾ ಪಶ್ಚಿಮ-ನೈಋತ್ಯ-ಪಶ್ಚಿಮದಲ್ಲಿರಬೇಕು. ಉದ್ಯೋಗಿಗಳು ಪೂರ್ವ, ಉತ್ತರ ಅಥವಾ ಈಶಾನ್ಯ ಕೊಠಡಿಗಳನ್ನು ಬಳಸಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಹೊಸ ವೃತ್ತಿ ಅವಕಾಶಗಳನ್ನು ಪಡೆಯಲು ಉತ್ತರ ದಿಕ್ಕು ಅನುಕೂಲಕರವಾಗಿದೆ.
ಇದು ನಕಾರಾತ್ಮಕ ಶಕ್ತಿಯಲ್ಲಿ ಉತ್ತೇಜಿಸುತ್ತದೆ. ಪರ್ವತಗಳ ಚಿತ್ರಗಳನ್ನು ದಕ್ಷಿಣ ಗೋಡೆಯ ಮೇಲೆ ತೂಗು ಹಾಕಬಹುದು. ಹಾಗೆಯೇ, ದಕ್ಷಿಣಕ್ಕೆ ಕಿಟಕಿ ಇರಬಾರದು. ಕೊಠಡಿ ಪ್ರಕಾಶಮಾನವಾಗಿರಬೇಕು. ಮೇಜು, ಕುರ್ಚಿ ಮುಂತಾದ ಪೀಠೋಪಕರಣಗಳನ್ನು ಮರದಿಂದ ಮಾಡಬೇಕು. ಡೆಸ್ಕ್ ಮಾತ್ರ ಆಯತಾಕಾರದ ಅಥವಾ ಚೌಕಾಕಾರವಾಗಿರಬೇಕು. ಈ ರೀತಿ ಇದ್ದರೆ ವೃತ್ತಿ ಜೀವನದಲ್ಲಿ ಬೆಳವಣಿಗೆಯಾಗುತ್ತದೆ.