Vastu Plants: ಮನೆಯಲ್ಲಿ ಈ ಗಿಡಗಳಿದ್ರೆ ಹಣದ ಸಮಸ್ಯೆ ಬರಲ್ವಂತೆ
Best Vastu Plants for Home: ಮನೆಯಲ್ಲಿ ಸಂತೋಷ, ಸಮೃದ್ಧಿ ಇರಲು ನಾವು ಹಲವಾರು ಪ್ರಯತ್ನ ಮಾಡುತ್ತೇವೆ. ಅದರ ಜೊತೆಗೆ ಕೆಲ ವಾಸ್ತು ಟಿಪ್ಸ್ ಸಹ ಫಾಲೋ ಮಾಡಬೇಕು. ಮನೆಯಲ್ಲಿ ಯಾವುದೇ ಸಮಸ್ಯೆಯಾಗದೇ ಸುಖವಾಗಿರಲು ಕೆಲ ವಾಸ್ತು ಗಿಡಗಳು ಸಹಾಯ ಮಾಡುತ್ತದೆ. ಆ ಗಿಡಗಳು ಯಾವುವು ಎಂಬುದು ಇಲ್ಲಿದೆ.
ಮನಿ ಪ್ಲಾಂಟ್ ಸಸ್ಯದ ಮೂಲ ಹೆಸರು ಪೊಥೋಸ್, ಆದರೆ ಈ ಸಸ್ಯವು ಮನೆಯಲ್ಲಿ ಸಮೃದ್ಧಿ ಮತ್ತು ಆರ್ಥಿಕ ಶಕ್ತಿ ಹೆಚ್ಚಿಸುವ ಕಾರಣದಿಂದ ಇದನ್ನು ಮನಿಪ್ಲಾಂಟ್ ಎಂದು ಕರೆಯಲಾಗುತ್ತದೆ. ಅಲ್ಲದೇ, ಈ ಗಿಡವು ಪಾಸಿಟಿವ್ ಎನರ್ಜಿಯನ್ನು ಹೆಚ್ಚಿಸಿ, ನೆಗೆಟಿವ್ ಎನರ್ಜಿಯನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
2/ 8
ಬಿದಿರು ವಾಸ್ತು ಮತ್ತು ಫೆಂಗ್ ಶೂಯಿ ನಿಯಮದ ಪ್ರಕಾರ ಈ ಗಿಡವು ಧನಾತ್ಮಕ ಶಕ್ತಿ, ಅದೃಷ್ಟ, ಶಾಂತಿ ಮತ್ತು ಸಮೃದ್ಧಿಯನ್ನು ಹೆಚ್ಚು ಮಾಡುತ್ತದೆ. ಇದನ್ನು ನೀವು ಮನೆಯಲ್ಲಿ ಇಟ್ಟುಕೊಳ್ಳುವುದು ಅದೃಷ್ಟವನ್ನು ತರುತ್ತದೆ. ಮುಖ್ಯವಾಗಿ ಈ ಗಿಡವನ್ನು ಬೇರೆಯವರು ಗಿಫ್ಟ್ ಮಾಡಿದರೆ ಒಳ್ಳೆಯದು.
3/ 8
ಜೇಡ್ ಗಿಡ ಈ ಗಿಡದ ಬೆಳವಣಿಗೆಯು ನಿಮ್ಮ ಬೆಳವಣಿಗೆಯನ್ನು ಸೂಚಿಸುತ್ತದೆ. ಜೇಡ್ ಸಸ್ಯವು ಸ್ನೇಹ ಮತ್ತು ಬಾಂಧವ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ಇದು ಆರ್ಥಿಕ ಸಮಸ್ಯೆಯನ್ನು ಸಹ ನಿವಾರಿಸಲು ಸಹಕಾರಿ.
4/ 8
ಸ್ನೇಕ್ ಪ್ಲ್ಯಾಂಟ್ ಈ ಸ್ನೇಕ್ ಪ್ಲ್ಯಾಂಟ್ ವಾಸ್ತು ಪ್ರಕಾರ ನಿಮ್ಮ ಮನೆಯಲ್ಲಿ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಯುತ್ತದೆ. ಇದು ವಾತಾವರಣದಲ್ಲಿರುವ ವಿಷ ಪದಾರ್ಥಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
5/ 8
ಅರೆಕಾ ಪಾಮ್ ಅಥವಾ ತಾಳೆ ಗಿಡ ವಾಸ್ತು ಮತ್ತು ಫೆಂಗ್ ಶೂಯಿ ಪ್ರಕಾರ ಈ ತಾಳೆ ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಶಾಂತಿ, ಸಮೃದ್ಧಿ ಹೆಚ್ಚಾಗುವುದಲ್ಲದೇ ಯಾವುದೇ ಸಮಸ್ಯೆಗಳು ಸಹ ಬರದಂತೆ ತಡೆಯುತ್ತದೆ.
6/ 8
ಪೀಸ್ ಲಿಲ್ಲಿ ಪ್ರೀತಿ, ಶಾಂತಿ ಮತ್ತು ಸಾಮರಸ್ಯದ ಸಂಕೇತ ಈ ಲಿಲ್ಲಿ ಹೂವು . ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಕೆಟ್ಟ ಕನಸುಗಳು ಬೀಳದಂತೆ ತಡೆಯುತ್ತದೆ. ಇದು ಮನೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲದೇ ಆರೋಗ್ಯಕ್ಕೂ ಸಹ ಉತ್ತಮ.
7/ 8
ರಬ್ಬರ್ ಪ್ಲಾಂಟ್ ಈ ರಬ್ಬರ್ ಸಸ್ಯವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಬರುವುದಿಲ್ಲ. ನಿಮ್ಮ ಎಲ್ಲಾ ಕನಸುಗಳು ಸಹ ನನಸಾಗುತ್ತದೆ. ಇದರ ಜೊತೆಗೆ ಇದು ಗಾಳಿಯಲ್ಲಿರುವ ವಿಷವನ್ನು ಹೊರಹಾಕುತ್ತದೆ.
8/ 8
ತುಳಸಿ ತುಳಸಿ ಅತ್ಯಂತ ಪವಿತ್ರ ಗಿಡಗಳಲ್ಲಿ ಒಂದು. ಇದು ನಮ್ಮ ಮನೆಯಲ್ಲಿ ಪಾಸಿಟಿವ್ ಎನರ್ಜಿ ಇರುವಂತೆ ನೋಡಿಕೊಳ್ಳುತ್ತದೆ. ಇದು ಮನೆಗೆ ಅದೃಷ್ಟವನ್ನು ತರುವ ಗಿಡವಾಗಿದ್ದು, ಆರೋಗ್ಯಕ್ಕೆ ಸಹ ಇದು ಪ್ರಯೋಜನಗಳನ್ನು ನೀಡುತ್ತದೆ.